ರಾಮ-ಲಕ್ಷ್ಮಣರಂತಿದ್ದ ದರ್ಶನ್-ಧನ್ವೀರ್ ನಡುವೆ ಬಿರುಕು ಮೂಡಿದೆ. ದಚ್ಚು ಕುಟುಂಬದ ಜೊತೆ ನಿಂತಿದ್ದ ಸ್ಯಾಂಡಲ್‌ವುಡ್ ಶೋಕ್ದಾರ್ ಈಗ ಹಿಂದೆ ಸರಿದಿದ್ದಾರೆ. ಅವರುಗಳ ನಡುವೆ ಸಂಪೂರ್ಣವಾಗಿ ಕನೆಕ್ಷನ್ ಕಟ್ ಆಗಿದೆ ಅನ್ನೋದು ಸದ್ಯದ ಟಾಕ್. ಅದಕ್ಕೆ ಪುಷ್ಠಿ ನೀಡುವಂತೆ ವಿಜಯಲಕ್ಷ್ಮೀ ದರ್ಶನ್ ತಮ್ಮ ಇನ್ಸ್‌ಟಾ ಸ್ಟೋರಿ ಮೂಲಕ ಮನದ ಮಾತನ್ನ ಬಿಚ್ಚಿಟ್ಟಿರೋದು ಅಚ್ಚರಿ.ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಡಿಬಾಸ್ ಕುಟುಂಬದಿಂದ ದಚ್ಚು ಭಂಟ ಧನ್ವೀರ್ ದೂರವಾದ್ರಾ?
- ವಿಜಯಲಕ್ಷ್ಮೀ ಗುಮ್ಮಿದ್ಯಾರಿಗೆ..? ಆ ಮಾತಿನ ಮರ್ಮವೇನು..?!
- ವಿಜಿ ದರ್ಶನ್ & ಡಿ ಕಂಪನಿ ಪೇಜ್ನಿಂದ ಧನ್ವೀರ್ ಡಿಲೀಟ್
- ಬೇಲ್ ಕೊಡಿಸ್ತೀನಿ ಅಂತ 2 ವರ್ಷದಿಂದ ಮೋಸ ಮಾಡಿದ್ರಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳು ಎಷ್ಟರ ಮಟ್ಟಿಗೆ ಇದ್ದಾರೋ ಅವ್ರ ಹಿತೈಷಿಗಳು ಕೂಡ ಅಷ್ಟೇ ಇದ್ದಾರೆ. ಕೆಲವರು ಸಮಯ ಸಾಧಕರಾದ್ರೆ, ಕೆಲವರು ಸತ್ರೂ ಬದುಕಿದ್ರೂ ನಿಮ್ಮ ಜೊತೆ ಇರ್ತೀವಿ ಅಂತಾರೆ. ಅದ್ರಲ್ಲೂ ಧನ್ವೀರ್ ಗೌಡ ಮಾತ್ರ ರಾಮ ಭಂಟ ಹನುಮನಷ್ಟೇ ವಿನಯ, ವಿಧೇಯಕವಾಗಿ, ಸಿಕ್ಕಾಪಟ್ಟೆ ಲಾಯಲ್ ಆಗಿ ದಚ್ಚು ಭಂಟನಂತೆ ಇಷ್ಟು ದಿನ ಇದ್ದರು.
ಹಯಗ್ರೀವ ರಿಲೀಸ್ ವೇಳೆ ಆ್ಯಕ್ಷನ್ ಟೀಸರ್‌ಗೆ ಖುದ್ದು ಧನ್ವೀರ್ ಬರೆದು ವಾಯ್ಸ್ ನೀಡಿದ್ದು ಹೀಗೆ.. ಒಬ್ಬ ಮನುಷ್ಯನನ್ನ ಗೋಡೆಗಳ ಹಿಂದೆ ಇಡಬಹುದು. ಆದ್ರೆ ಒಂದು ಹೆಸ್ರನ್ನ, ಒಂದು ಪ್ರಭಾವವನ್ನ ಯಾರು ಬಂಧಿಸೋಕೆ ಸಾಧ್ಯ..? ಎಂದಿದ್ರು. ಒಡಹುಟ್ಟಿದ ಸಹೋದರನಂತೆ ದರ್ಶನ್ ಮೇಲೆ ತಮಗಿರೋ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿದ್ರು ಸ್ಯಾಂಡಲ್‌ವುಡ್ ಶೋಕ್ದಾರ್.
ಬಳ್ಳಾರಿ ಜೈಲಿನಿಂದ ಮೆಡಿಕಲ್ ಬೇಲ್ ಮೇಲೆ ಹೊರಬಂದ ದರ್ಶನ್‌ನ ತಾವೇ ಆನ್ ರೋಡ್ ಕಾರ್ ಓಡಿಸಿಕೊಂಡು ಸೇಫ್ ಆಗಿ ಬೆಂಗಳೂರಿಗೆ ಕರೆತಂದಿದ್ದು ಇದೇ ಧನ್ವೀರ್. ಆಪ್ತರೆಲ್ಲಾ ದರ್ಶನ್ ಕೋರ್ಟ್ ಕಟಕಟೆ ಸಹವಾಸ ನಮಗ್ಯಾಕೆ ಅಂತ ನುಣುಚಿಕೊಂಡಾಗ, ಧೈರ್ಯವಾಗಿ ಮುಂದೆ ಬಂದು ನಿಂತು, ನಿಮ್ಮೊಂದಿಗೆ ನಾನಿದ್ದೇನೆ ಅನ್ನೋ ಭರವಸೆ, ಧೈರ್ಯ, ಆತ್ಮಸ್ಥೈರ್ಯವನ್ನ ದಚ್ಚು ಕುಟುಂಬಕ್ಕೆ ನೀಡಿದ್ದು ಇದೇ ಧನ್ವೀರ್.
ಆದ್ರೀಗ ದರ್ಶನ್ ಹಾಗೂ ಡಿಬಾಸ್ ಫ್ಯಾಮಿಲಿಯಿಂದ ಧನ್ವೀರ್ ದೂರವಾಗಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಡಿ ಕಂಪನಿ ಪೇಜ್ ಹಾಗೂ ವಿಜಿ ದರ್ಶನ್ ಪೇಜ್‌ನಲ್ಲಿದ್ದ ಧನ್ವೀರ್ ಗೌಡ ಫೋಟೋಗಳು ಡಿಲೀಟ್ ಆಗಿವೆ. ಅಷ್ಟೇ ಅಲ್ಲ, ವಿಜಯಲಕ್ಷ್ಮೀ ದರ್ಶನ್ ಈ ಎಲ್ಲಕ್ಕೂ ಪುಷ್ಠಿ ನೀಡುವಂತೆ ಇನ್ಸ್‌ಟಾ ಸ್ಟೋರಿ ಹಾಕಿದ್ದಾರೆ. ಅದನ್ನ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..
ಧನ್ವೀರ್‌ಗೆ ಬಹಿರಂಗವಾಗಿಯೇ ತಿವಿದ ವಿಜಿ
ಪಡೆದುಕೊಂಡ ಮೇಲೆ..ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ..
ಅದು ವಸ್ತುವಾಗಲಿ.. ವ್ಯಕ್ತಿಯಾಗಲಿ…ವಿಜಿ ದರ್ಶನ್, ದರ್ಶನ್ ಪತ್ನಿ
ಯೆಸ್.. ನೇರವಾಗಿಯೇ ಈ ರೀತಿಯ ಪದಪುಂಜದ ಕೋಟ್ ಮೂಲಕ ನಟ ಧನ್ವೀರ್ ಗೌಡಗೆ ಗುಮ್ಮಿದ್ದಾರೆ ವಿಜಯಲಕ್ಷ್ಮೀ ದರ್ಶನ್ ಅನ್ನೋದು ಸದ್ಯದ ಟಾಕ್. ನಮ್ಮಗಳ ಸ್ನೇಹ, ಪ್ರೀತಿ ಪಡ್ಕೊಂಡ ಬಳಿಕ, ನಡ್ಕೊಳ್ಳೋ ವಿಧಾನ ಚೆನ್ನಾಗಿರಬೇಕು ಅಂತ ಟಾಂಗ್ ಕೊಟ್ಟು ಇನ್ಸ್‌ಟಾ ಪೋಸ್ಟ್ ಹಾಕಿದ್ದಾರೆ ವಿಜಯಲಕ್ಷ್ಮೀ ದರ್ಶನ್. ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅದಕ್ಕೆ ಅಸಲಿ ರೀಸನ್ ಹುಡುಕುತ್ತಾ ಹೋದ್ರೆ ಬೇರೆ ಬೇರೆ ವಿಷಯಗಳು ಹೊರಬರ್ತಿವೆ.
ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಕೊಡಿಸಿ, ಆದಷ್ಟು ಬೇಗ ದರ್ಶನ್‌ನ ಹೊರಗೆ ಕರ್ಕೊಂಡ್ ಬರ್ತೀನಿ ಅಂತ ಭರವಸೆ ನೀಡಿದ್ರಂತೆ ಧನ್ವೀರ್ ಗೌಡ. ಎರಡು ವರ್ಷಗಳಾದ್ರೂ ಬೇಲ್ ಸಿಕ್ಕಿಲ್ಲ. ಅಷ್ಟೇ ಅಲ್ಲ, ಸುಪ್ರೀಂ ಕಡೆ ಇನ್ನೊಂದು ವರ್ಷ ಹೋಗುವಂತಾಗದೆ ಆಗಿದೆ. ಸೋ.. ಇದೇ ವಿಚಾರಕ್ಕೆ ಬೇಸರಗೊಂಡಿರೋ ದರ್ಶನ್ ಫ್ಯಾಮಿಲಿ, ಧನ್ವೀರ್ ಜೊತೆ ಅಂತರ ಕಾಯ್ದುಕೊಂಡಿದೆ ಎನ್ನಲಾಗ್ತಿದೆ. ಸತತ ಎರಡು ವರ್ಷಗಳಿಂದ ಬೇಲ್ ಕೊಡಿಸದೆ ಮೋಸ ಮಾಡಿದ್ದಾರೆ ಧನ್ವೀರ್ ಎನ್ನುವ ಆರೋಪ ಕೂಡ ಕೇಳಿಬರ್ತಿದೆ.
ಇತ್ತೀಚೆಗೆ ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವದ ದಿನ ಕೂಡ ಧನ್ವೀರ್ ದಚ್ಚು ಪತ್ನಿ ಹಾಗೂ ಮಗನ ಜೊತೆ ಜೈಲಿಗೆ ತೆರಳಿದ್ರು. ಬಹುಶಃ ಅದೇ ಅವ್ರ ಕೊನೆಯ ಭೇಟಿ ಅನಿಸ್ತಿದೆ. ಒಟ್ಟಾರೆ ರಾಮ-ಲಕ್ಷ್ಮಣರಂತಿದ್ದ ದಚ್ಚು-ಧನ್ವೀರ್ ಮಧ್ಯೆ ಯಾವುದೋ ಕಾಣದ ಕೈ ಆಟ ಆಡ್ತಿದೆ. ಯಾವುದೇ ನಿರೀಕ್ಷೆಯಿಲ್ಲದೆ ಧನ್ವೀರ್ ಇಷ್ಟೆಲ್ಲಾ ಮಾಡಿದ್ರೂ ಸಹ ಕೊನೆಗೆ ತನ್ನ ಮೇಲೆ ಆಪಾದನೆ ಹೊತ್ತುಕೊಂಡು ದೂರ ಉಳಿಯುವಂತಾಯ್ತು. ಹೀಗೆಲ್ಲಾ ಯಾಕೆ ಆಗ್ತಿದೆ..? ಇದ್ರ ಹಿಂದಿರೋದು ಯಾರು..? ಅನ್ನೋ ಸ್ಪಷ್ಟನೆಯನ್ನ ಸ್ವತಃ ಧನ್ವೀರ್ ಅವರೇ ಕೊಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
