ನಟ ದರ್ಶನ್‌ ಮನವಿಗೆ ಕೊನೆಗೂ ಗ್ರೀನ್‌ಸಿಗ್ನಲ್‌ ಕೊಟ್ಟ ಕೋರ್ಟ್

Untitled design 2025 05 30t174320.471

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕೊನೆಗೂ ಕೋರ್ಟ್‌ನಿಂದ ಸಿಹಿ ಸುದ್ದಿ ಸಿಕ್ಕಿದೆ. ಅವರ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು 64ನೇ CCH ಕೋರ್ಟ್ ಗ್ರೀನ್‌ಸಿಗ್ನಲ್ ನೀಡಿದೆ.

ನಟ ದರ್ಶನ್ ತಮ್ಮ ಚಿತ್ರೀಕರಣದ ಅಗತ್ಯಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ 64ನೇ CCH ಕೋರ್ಟ್‌ನ ನ್ಯಾಯಾಧೀಶ ಐ.ಪಿ. ನಾಯ್ಕ್‌ ಅವರು ದರ್ಶನ್‌ಗೆ ವಿದೇಶ ಯಾತ್ರೆಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.

ದರ್ಶನ್ ತಮ್ಮ ಅರ್ಜಿಯಲ್ಲಿ CRPC ಸೆಕ್ಷನ್ 439(1)(b) ಅಡಿಯಲ್ಲಿ ದುಬೈ ಮತ್ತು ಯೂರೋಪ್‌ಗೆ ತೆರಳಲು ಅನುಮತಿ ಕೋರಿದ್ದರು. ಒಟ್ಟು 25 ದಿನಗಳ ಕಾಲ ವಿದೇಶದಲ್ಲಿ ಚಿತ್ರೀಕರಣಕ್ಕಾಗಿ ಇರಲು ಅವಕಾಶ ಕೋರಲಾಗಿತ್ತು. ಜೂನ್ 1 ರಿಂದ 25 ರವರೆಗೆ ದುಬೈ ಮತ್ತು ಯೂರೋಪ್‌ನ ವಿವಿಧ ಸ್ಥಳಗಳಲ್ಲಿ ‘ಡೆವಿಲ್’ ಚಿತ್ರದ ಶೂಟಿಂಗ್ ನಡೆಸಲು ಯೋಜನೆ ರೂಪಿಸಲಾಗಿದೆ.

‘ಡೆವಿಲ್’ ಚಿತ್ರದ ಶೂಟಿಂಗ್‌ಗಾಗಿ ದರ್ಶನ್ ತಂಡವು ದುಬೈನ ಭವ್ಯವಾದ ಲೊಕೇಶನ್‌ಗಳನ್ನು ಮತ್ತು ಯೂರೋಪ್‌ನ ಸುಂದರ ತಾಣಗಳನ್ನು ಆಯ್ಕೆ ಮಾಡಿದೆ. ಈ ಚಿತ್ರದಲ್ಲಿ ದರ್ಶನ್‌ರವರ ಚಾಲೆಂಜಿಂಗ್ ಪಾತ್ರವು ಅಭಿಮಾನಿಗಳಲ್ಲಿ  ಕುತೂಹಲ ಮೂಡಿಸಿದೆ.

Exit mobile version