11 ದಿನಕ್ಕೆ 655 ಕೋಟಿ.. ಎಲ್ಲೆಡೆ ಕಾಂತಾರ ನಾಗಾಲೋಟ..!

ಅಮಿತಾಬ್ KBC ವೇದಿಕೆಯಲ್ಲಿ ರಿಷಬ್ ಫುಲ್ ಮಿಂಚು..!

Untitled design (83)

ಹನ್ನೊಂದೇ ದಿನಕ್ಕೆ ಬರೋಬ್ಬರಿ 655 ಕೋಟಿ ಲೂಟಿ ಮಾಡಿರೋ ಕಾಂತಾರ, ನಾಗಾಲೋಟ ಮುಂದುವರೆಸಿದೆ. ರಾಜಮೌಳಿ ಅಂತಹ ಮಹಾನ್ ಮಾಂತ್ರಿಕನೇ ಬಾಹುಬಲಿ ಮಾಡುವಾಗ ನೂರಾರು ಬಿಗ್ ಮಿಸ್ಟೇಕ್ಸ್ ಮಾಡಿದ್ದಾರೆ. ಅದರ ಮುಂದೆ ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್ ಮಾಡಿದ ಆ ವಾಟರ್ ಬಾಟಲ್ ಮಿಸ್ಟೇಕ್ ಒಂದು ಲೆಕ್ಕನಾ..? ಕ್ಲೈಮ್ಯಾಕ್ಸ್ ಮಾಡುವಾಗ ಶೆಟ್ರು ಎದುರಿಸಿದ ಆ ರೋಚಕ ಕ್ಷಣಗಳು ಎಂಥದ್ದು..? ರಿಷಬ್‌‌ ಏಳಿಗೆಗೆ ಪತ್ನಿ ಪ್ರಗತಿ ಕೊಡುಗೆ ಎಷ್ಟಿದೆ ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ..

ಕಾಂತಾರ.. ಕಾಂತಾರ.. ಕಾಂತಾರ.. ಸದ್ಯ ಎಲ್ಲೆಡೆ ಟಾಕ್ ಆಫ್ ದಿ ಟೌನ್ ಆಗಿರೋ ಸಿನಿಮಾ. ಅದಕ್ಕೆ ಕಾರಣ ಚಿತ್ರದಲ್ಲಿರೋ ದೈವಿಕ ಅಂಶಗಳು. ಬಾಕ್ಸ್ ಆಫೀಸ್ ಕಲೆಕ್ಷನ್. ಟಿಕೆಟ್ಸ್ ಸಿಗದೇ ಪರದಾಡ್ತಿರೋ ಚಿತ್ರಪ್ರೇಮಿಗಳು. ಪರಭಾಷಾ ಪ್ರೇಕ್ಷಕರ ಜೊತೆ ಸ್ಟಾರ್‌ಗಳು, ಕ್ರಿಕೆಟರ್ಸ್‌, ಪೊಲಿಟಿಷಿಯನ್ಸ್ ಹಾಗೂ ಸ್ಟಾರ್ ಡೈರೆಕ್ಟರ್‌‌‌ಗಳಿಂದ ಬರ್ತಿರೋ ಮೆಚ್ಚುಗೆಯ ಮಹಾಪೂರ. ಯೆಸ್.. ಕಾಂತಾರಕ್ಕೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿರೋದು ಅತಿಶಯೋಕ್ತಿ ಅಲ್ಲವೇ ಅಲ್ಲ. ಪ್ರತಿ ಫ್ರೇಮ್‌‌ನಲ್ಲೂ ತಂಡದ ಎಫರ್ಟ್‌ಗಳು, ಹಾರ್ಡ್‌ವರ್ಕ್‌ ಎದ್ದು ಕಾಣ್ತಿದೆ.

 

 11 ದಿನಕ್ಕೆ 655 ಕೋಟಿ.. ಎಲ್ಲೆಡೆ ಕಾಂತಾರ ನಾಗಾಲೋಟ

ಅಮಿತಾಬ್ KBC ವೇದಿಕೆಯಲ್ಲಿ ರಿಷಬ್ ಫುಲ್ ಮಿಂಚು..!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರೋ ಕಾಂತಾರ ಸಿನಿಮಾ ಹನ್ನೊಂದೇ ದಿನಕ್ಕೆ ಬರೋಬ್ಬರಿ 655 ಕೋಟಿ ಗಳಿಸೋ ಮೂಲಕ ವಿಶ್ವ ಸಿನಿದುನಿಯಾದ ಹುಬ್ಬೇರಿಸಿದೆ. ಮಗದೊಮ್ಮೆ ಪರಭಾಷಿಗರನ್ನ ನಮ್ಮ ಕರುನಾಡಿನತ್ತ, ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಇಂದಿಗೂ ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದ್ದು, ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಸಿಕ್ಕ ಆ ಆಭೂತಪೂರ್ವ, ಅವಿಸ್ಮರಣೀಯ, ಅದ್ಧೂರಿ ಸ್ವಾಗತ ನಿಜಕ್ಕೂ ರೋಮಾಂಚನ ನೀಡಲಿದೆ.

ಬಾಲಿವುಡ್‌‌ ಶೆಹೆನ್‌ಷಾ ಬಿಗ್‌ ಬಿ ಅಮಿತಾಬ್ ಬಚ್ಚನ್‌ರ ಸುಪ್ರಸಿದ್ದ ಶೋ ಕೌನ್ ಬನೇಗಾ ಕರೋಡ್‌‌ಪತಿಗೆ ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿಯವರನ್ನ ಕರೆಸಿ, ಮಾತಾಡಿಸ್ತಾರೆ ಅಂದ್ರೆ ಅದಕ್ಕಿಂತ ಖುಷಿ ಮತ್ತೊಂದೇನಿದೆ ಅಲ್ಲವೇ..? ಡೆಲ್ಲಿ ಸಿಎಂನಿಂದ ರಾಷ್ಟ್ರಪತಿ ಭವನದವರೆಗೆ ಕಾಂತಾರ ಕಹಳೆ ಸಖತ್ ಜೋರಾಗೇ ಮೊಳಗಿದೆ. ಸದ್ಯ ರಿಷಬ್ ಶೆಟ್ಟಿ ಲೇಟೆಸ್ಟ್ ಆಗಿ ಒಂದು ಪೋಸ್ಟ್ ಹಾಕಿದ್ದಾರೆ. ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನಡೆದ ರೋಚಕ ಕ್ಷಣಗಳನ್ನ ಫೋಟೋಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಕ್ಲೈಮ್ಯಾಕ್ಸ್‌‌ನಲ್ಲಿ ದಣಿದ ಶೆಟ್ರು.. ದೈವ ಶಕ್ತಿ ಬಗ್ಗೆ ಹೇಳಿದ್ದೇನು..?

ಊದಿದ ಕಾಲು.. ನಿತ್ರಾಣಗೊಂಡ ದೇಹ..

ಕಾಂತಾರ ಕ್ಲೈಮ್ಯಾಕ್ಸ್‌‌ ರೋಚಕ

ಇದು ಕ್ಲೈಮ್ಯಾಕ್ಸ್ ಶೂಟಿಂಗ್‌ನ ಸಮಯ.. ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ.. ಇಂದು ಕೋಟ್ಯಂತರ ಮಂದಿ ನೋಡಿ ಮೆಚ್ಚುವ ಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯವಾಗಿದೆ. ಸಿನಿಮಾ ನೋಡಿದ ಅಭಿಪ್ರಾಯ ವ್ಯಕ್ತಪಡಿಸಿದ ತಮಗೆಲ್ಲರಿಗೂ ಧನ್ಯವಾದಗಳು.

– ರಿಷಬ್ ಶೆಟ್ಟಿ- ನಟ, ನಿರ್ದೇಶಕ

ಹೀಗಂತ ಖುದ್ದು ರಿಷಬ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡು, ಅಂದು ಆ ರೋಚಕ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ತಮ್ಮ ಕಾಲುಗಳು ಎಷ್ಟರ ಮಟ್ಟಿಗೆ ಊದಿಕೊಂಡಿದ್ದವು..? ದೇಹ ಎಷ್ಟು ದಣಿದಿತ್ತು ಅನ್ನೋದನ್ನ ಎರಡು ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಅಭೂತಪೂರ್ವ ಯಶಸ್ಸಿನ ಮುಂದೆ ಅದೆಲ್ಲಾ ಲೆಕ್ಕಕ್ಕೆ ಬರಲ್ಲ ಅನ್ನೋದು ಕೂಡ ಅವ್ರ ಮಾತಿನ ಅರ್ಥವಾಗಿದೆ.

ಯೆಸ್.. ಇಡೀ ದೇಶವೇ ಕಾಂತಾರವನ್ನ ಕೊಂಡಾಡ್ತಿದೆ. ವಿಶ್ವ ಸಿನಿದುನಿಯಾ ಕೂಡ ಕಾಂತಾರ ಮೇಕಿಂಗ್, ಕಥೆ, ಪಾತ್ರಗಳ ಬಗ್ಗೆ ಚರ್ಚೆ ಮಾಡ್ತಿರೋ ಈ ಸಂದರ್ಭದಲ್ಲಿ ಸಿನಿಮಾದ ಬಗ್ಗೆ ಸಾಕಷ್ಟು ಮಂದಿ ನೆಗೆಟೀವ್ ಆಗಿ ಕ್ಯಾಂಪೇನ್ ಮಾಡ್ತಿದ್ದಾರೆ. ಗುಳಿಗ ದೈವ ಮೈಮೇಲೆ ಬಂದಂತೆ ನಟಿಸಿರೋ ರಿಷಬ್ ಕುರಿತು ತಗಾದೆ ತೆಗೆಯುತ್ತಿದ್ದಾರೆ. ಅದು ಸಾಲದು ಅಂತ, ಚಿತ್ರದ ಬ್ರಹ್ಮಕಲಶ ಗೀತೆಯ ಒಂದು ದೃಶ್ಯದಲ್ಲಿ ಎಲ್ಲರೂ ಊಟ ಮಾಡ್ತಿರೋವಾಗ ಅವ್ರ ಹಿಂಬದಿ ಮಿಸ್ ಆಗಿ ಉಳಿದುಕೊಂಡಿರೋ 20 ಲೀಟರ್ ವಾಟರ್ ಕ್ಯಾನ್‌‌ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

‘ಬ್ರಹ್ಮಕಲಶ’ ಸಾಂಗ್‌‌ನಲ್ಲಿ ‘ವಾಟರ್ ಕ್ಯಾನ್’.. ಎಲ್ಲೆಡೆ ವೈರಲ್ !

ಬಾಹುಬಲಿಯಲ್ಲೇ ನೂರಾರು ಎಡವಟ್.. ಇದೊಂದು ಲೆಕ್ಕನಾ?

ಖುದ್ದು ರಿಷಬ್ ಶೆಟ್ಟಿ ಅವರೇ ಹೇಳಿದಂತೆ ಇದು ಬರೀ ಒಂದು ಸಿನಿಮಾ ಅಲ್ಲ. ಐದಾರು ಸಿನಿಮಾಗಳ ಎಫರ್ಟ್‌ ಇದೆ. ಹಾಗಾಗಿ ಇಂತಹ ಬಿಗ್ ಸ್ಕೇಲ್, ಬಿಗ್ ಕ್ಯಾನ್ವಾಸ್ ಸಿನಿಮಾ ಮಾಡುವಾಗ ಕಣ್ತಪ್ಪಿನಿಂದ ಇಂತಹ ಎಡವಟ್ ಆಗಿಯೇ ಆಗುತ್ತೆ. ಸದ್ಯ ವಾಟರ್ ಕ್ಯಾನ್‌‌ನ ಎಡಿಟ್ ಮಾಡದೆ ಮಿಸ್ ಮಾಡಿರೋ ಬಗ್ಗೆ ಸಾಕಷ್ಟು ಮಂದಿ ಮಾತಾಡ್ತಿದ್ದಾರೆ. ಆದ್ರೆ ನೂರಾರು ತಪ್ಪುಗಳನ್ನ ಮಾಡಿರೋ ರಾಜಮೌಳಿಯ ಬಾಹುಬಲಿ ಚಿತ್ರದ ಬಗ್ಗೆ ಆಗ ಯಾರೂ ಅಷ್ಟಾಗಿ ಮಾತನಾಡಿರಲಿಲ್ಲ.

ಹೌದು.. ಬಿಗ್ ಬಜೆಟ್ ಚಿತ್ರಗಳ ಮಾಸ್ಟರ್‌ಮೈಂಡ್ ರಾಜಮೌಳಿ ಅಂತಹ ಮಹಾನ್ ಮಾಂತ್ರಿಕನೇ ಬಾಹುಬಲಿ ಚಿತ್ರಗಳನ್ನ ಮಾಡುವಾಗ ಸಾಲು ಸಾಲು ಮಿಸ್ಟೇಕ್‌‌ಗಳನ್ನ ಮಾಡಿದ್ರು. ಅವುಗಳನ್ನ ನೆಟ್ಟಿಗರು ಬಹುತೇಕ ಎಲ್ಲಾ ಭಾಷೆಗಳಲ್ಲಿ ಡಿಟೈಲ್ಡ್ ಆಗಿ ದೃಶ್ಯಗಳ ಸಮೇತ ಎಕ್ಸ್‌‌ಪ್ಲೈನ್ ಮಾಡಿ ಯೂಟ್ಯೂಬ್‌‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಅನುಭವ ಇರೋ ರಾಜಮೌಳಿಯೇ ನೂರಾರು ಎಡವಟ್‌‌ಗಳನ್ನ ಮಾಡ್ತಾರೆ ಅಂದಾಗ, ನಮ್ಮ ಕನ್ನಡಿಗನಿಂದ ಒಂದು ಸಣ್ಣ ತಪ್ಪು ಆಗಿರೋದನ್ನ ನಾವು ಹೊಟ್ಟೆಗೆ ಹಾಕಿಕೊಳ್ಳೋದ್ರಲ್ಲಿ ತಪ್ಪೇನಿದೆ ಅಲ್ಲವೇ..?

ಕದಂಬರ ಕಾಲದಲ್ಲಿ ಪ್ಲಾಸ್ಟಿಕ್ ವಾಟರ್ ಕ್ಯಾನ್‌ ಇತ್ತಾ..? ರಿಷಬ್ ಶೆಟ್ಟಿ ವಾಟರ್ ಕ್ಯಾನ್ ಬ್ಯುಸಿನೆಸ್‌‌ನ ಆ ಕಾಲದಿಂದಲೇ ಮಾಡ್ತಿದ್ರಾ ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ. ಅದೆಲ್ಲಾ ಅನಾವಶ್ಯಕ. ಒಂದೊಳ್ಳೆ ಸಿನಿಮಾದಲ್ಲಿ ಚರ್ಚಿಸೋಕೆ ಸಾವಿರಾರು ವಿಷಯಗಳಿವೆ. ಅವುಗಳ ಮೇಲೆ ಚರ್ಚೆಗಳು ಆದ್ರೆ ಒಳಿತು.

 

ರಾಜಮೌಳಿ ಪತ್ನಿ ರಮಾ ಹಾದಿಯಲ್ಲಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

ಆಕೆಯೂ ಕಾಸ್ಟ್ಯೂಮ್ ಡಿಸೈನರ್.. ಈಕೆಯೂ ವಸ್ತ್ರ ವಿನ್ಯಾಸಕಿ!

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇದ್ದೇ ಇರ್ತಾರೆ ಅನ್ನೋ ಮಾತು ರಾಜಮೌಳಿ ಲೈಫ್‌‌ನಲ್ಲಿ ಪ್ರೂವ್ ಆಗಿದೆ. ಈಗ ರಿಷಬ್ ಶೆಟ್ಟಿ ಜೀವನದಲ್ಲೂ ಅದೂ ಮತ್ತೊಮ್ಮೆ ಸಾಬೀತಾಗಿದೆ. ಯೆಸ್.. ಇಂಡಿಯನ್ ಸ್ಪೀಲ್‌‌ಬರ್ಗ್ ಅಂತೆಲ್ಲಾ ಕರೆಯಲ್ಪಡುವ ರಾಜಮೌಳಿಯ ಎಲ್ಲಾ ಸಿನಿಮಾಗಳು ಬ್ಲಾಕ್‌ ಬಸ್ಟರ್ ಹಿಟ್. ಅದಕ್ಕೆ ಕಾರಣ ಮೌಳಿಯ ಪತ್ನಿ ರಮಾ ರಾಜಮೌಳಿ ಪ್ರಮುಖ ಕಾರಣ. ಆಕೆ ರಾಜಮೌಳಿಯ ಕನಸಿನ ಪಾತ್ರಗಳಿಗೆಲ್ಲಾ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಡ್ತಾರೆ. ಜೊತೆಗೇ ಇದ್ದು, ಹೇಳಿದಾಕ್ಷಣ ಕರೆಕ್ಷನ್ ಮಾಡಿಕೊಡ್ತಾರೆ.

ಇದು ಬಾಹುಬಲಿ, ತ್ರಿಬಲ್ ಆರ್ ದಿನಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ರಾಜಮೌಳಿಯ ಈ ಹಿಂದಿನ ಬಹುತೇಕ ಎಲ್ಲಾ ಚಿತ್ರಗಳಿಗೆ ರಮಾ ರಾಜಮೌಳಿಯೇ ವಸ್ತ್ರ ವಿನ್ಯಾಸಕಿ. ಅದನ್ನ ವಿಕ್ರಮಾರ್ಕುಡು, ಈಗ ಸೇರಿದಂತೆ ಸಾಕಷ್ಟು ಚಿತ್ರಗಳ ಕಾರ್ಯವೈಖರಿಯನ್ನ ಅವಲೋಕಿಸಿದ್ರೆ ಗೊತ್ತಾಗುತ್ತೆ. ಅದಕ್ಕೆ ಇಲ್ಲಿರೋ ಈ ಎಕ್ಸ್‌‌ಕ್ಲೂಸಿವ್ ಫೋಟೋಗಳೇ ಸಾಕ್ಷಿ.

ಸದ್ಯ ನಮ್ಮ ರಿಷಬ್ ಕಾಂತಾರ ಅನ್ನೋ ಕನಸಿನ ಸಾಮ್ರಾಜ್ಯದ ಹಿಂದಿರೋ ಅಸಲಿ ಶಕ್ತಿ ಪತ್ನಿ ರಿಷಬ್ ಶೆಟ್ಟಿ. ಹೌದು.. ಕಾಂತಾರ ಚಾಪ್ಟರ್-1 ಅಷ್ಟೇ ಅಲ್ಲ, ಈ ಹಿಂದಿನ ಕಾಂತಾರ ಚಿತ್ರಕ್ಕೂ ಪ್ರಗತಿ ರಿಷಬ್ ಶೆಟ್ಟಿಯೇ ಕಾಸ್ಟ್ಯೂಮ್ ಡಿಸೈನರ್. ರಿಷಬ್ ಕಂಡ ಕನಸುಗಳನ್ನ ನನಸು ಮಾಡುವಲ್ಲಿ ಪ್ರಗತಿ ಶ್ರಮ ಸಾಕಷ್ಟಿದೆ. ಇಬ್ಬರು ಮಕ್ಕಳನ್ನ ನೋಡಿಕೊಳ್ತಾ, ಸಂಸಾರದ ಜವಾಬ್ದಾರಿಯ ಜೊತೆ ಜೊತೆಗೆ ಇಷ್ಟು ದೊಡ್ಡ ಕಾಂತಾರ ಚಿತ್ರಕ್ಕೂ ತನ್ನ ಕೊಡುಗೆ ನೀಡಿರೋ ಪ್ರಗತಿಗೆ ನಾವು ಹ್ಯಾಟ್ಸಾಫ್ ಹೇಳಲೇಬೇಕು.

ರಾಜಮೌಳಿ ಪತ್ನಿ ರಮಾ ರಾಜಮೌಳಿ ಹಾದಿಯಲ್ಲಿ ಸಾಗ್ತಿರೋ ಪ್ರಗತಿ ರಿಷಬ್ ಶೆಟ್ಟಿ, ನಿಜಕ್ಕೂ ರಿಷಬ್ ಪಾಲಿಗೆ ಬಿಗ್ ಅಸೆಟ್. ಈ ಬಾರಿ ಕಾಂತಾರ ವಸ್ತ್ರ ವಿನ್ಯಾಸಕಿಗೆ ನ್ಯಾಷನಲ್ ಅವಾರ್ಡ್‌ ಬಂದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ.

 

 

Exit mobile version