ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ (Darshan) ಅವರು ಮೈಸೂರಿನ ತಮ್ಮ ನಿವಾಸ ಹಾಗೂ ಫಾರಂ ಹೌಸ್‌ನಲ್ಲಿ ಕುಟುಂಬಸ್ಥರೊಂದಿಗೆ ಚಾಮುಂಡೇಶ್ವರಿ ತಾಯಿಯ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದ್ದಾರೆ.
ಎರಡನೇ ಆಷಾಢ ಶುಕ್ರವಾರದ (ಜುಲೈ 4) ಸಂದರ್ಭದಲ್ಲಿ ದರ್ಶನ್ ಅವರು ತಮ್ಮ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮೀ, ಮತ್ತು ಸಹೋದರರ ಜೊತೆಗೆ ಮೈಸೂರಿನ ಸಿದ್ಧಾರ್ಥ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪೂಜೆಯನ್ನು ನಡೆಸಿದರು. ಇದೇ ವೇಳೆ, ಚಾಮುಂಡಿ ಬೆಟ್ಟಕ್ಕೆ ಕುಟುಂಬದವರೊಂದಿಗೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ದರ್ಶನ ಮತ್ತು ಪೂಜೆಯನ್ನು ಸಹ ನೆರವೇರಿಸಿದರು.