ಅದೃಷ್ಠ ದೇವತೆ ಮನೆಗೆ ಬಂದ್ರೆ ಬಟ್ಟೆ ಬಿಚ್ಚಿಸಿ, ಬೆಡ್ ರೂಮ್‌ನಲ್ಲಿ ಕೂರಿಸ್ತೀನಿ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಆ ಅದೃಷ್ಠ ದೇವತೆ ಅಕ್ಷರಶಃ ಶಾಪ ಹಾಕಿದಂತಿದೆ. ದಾಸನಿಗೆ ದುರಾದೃಷ್ಠದ ಜೊತೆ ಶನಿ ಕೂಡ ಹೆಗಲೇರಿದೆ. ಸುಪ್ರೀಂ ಬೇಲ್ ಕ್ಯಾನ್ಸಲ್ ಮಾಡಿದ್ದು, ಕಂಬಿ ಹಿಂದೆ ಜೈಲೂಟ ಸವಿಯೋ ಭಾಗ್ಯ ಮತ್ತೆ ಮತ್ತೆ ಸಿಗ್ತಿದೆ. ಈ ಹಿಂದೆ ಬೆನ್ನು ನೋವು ಆಗಿತ್ತು.. ಇದೀಗ ಮಗದೊಮ್ಮೆ ಬೇಲ್‌ಗಾಗಿ ಹೊಸ ನಾಟಕ ಶುರು ಆಗಲಿದ್ದು, ನಿಲ್ಲದ ದಚ್ಚು ಪ್ರಲಾಪದ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.
ಟಾಲೆಂಟ್ ಅನ್ನೋದು ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಪ್ರತಿಭೆ ಇದ್ರೆ ಯಾರು ಏನು ಬೇಕಾದ್ರೂ ಆಗಬಹುದು. ಅದ್ರಂತೆ ಸಾಮಾನ್ಯ ಲೈಟ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸ್ಟ್ ಆಗಿದ್ದ ದರ್ಶನ್ ತೂಗುದೀಪ ಶ್ರೀನಿವಾಸ್ ಇಂದು ಕನ್ನಡ ಚಿತ್ರರಂಗದ ಬಹುದೊಡ್ಡ ಸ್ಟಾರ್. ಅಟ್ ದಿ ಸೇಮ್ ಟೈಮ್.. ಕಾನೂನು ಕೂಡ ಎಲ್ಲರಿಗೂ ಒಂದೇ. ಬಡವ, ಶ್ರೀಮಂತ, ಸಾಮಾನ್ಯ, ಸೂಪರ್ ಸ್ಟಾರ್, ಎಂಎಲ್‌ಎ, ಮಿನಿಸ್ಟರ್ ಅಂತ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇಲ್ಲ.
ನಿಲ್ಲದ ದರ್ಶನ್ ಪ್ರಲಾಪ.. ಬೇಲ್‌ಗಾಗಿ ಹೊಸ ನಾಟಕ..?
ಬೆನ್ನು ನೋವು ಆಯ್ತು.. ಈಗ ತಾಯಿ ಅನಾರೋಗ್ಯ ನೆಪ
ಯೆಸ್.. ಈ ಮಾತನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ. ಕುಟುಂಬಸ್ಥರು, ಅಭಿಮಾನಿ ಬಳಗ ಅಗೋ ಬರ್ತಾರೆ, ಇಗೋ ಬರ್ತಾರೆ ಅಂತ ಎದುರು ನೋಡಿ ನೋಡಿ ಸಾಕಾಯ್ತು. ಆದ್ರೆ ದಚ್ಚು ಮಾತ್ರ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಪರ್ಮನೆಂಟ್ ಆಗಿ ಲಾಕ್ ಆಗೋ ಸೂಚನೆ ಸಿಕ್ಕಿದೆ. ದೇವರು ಕೊಟ್ಟಂತಹ ಚಾನ್ಸ್‌ನ ದರ್ಶನ್ ಸಮರ್ಪಕವಾಗಿ ಬಳಿಸಿಕೊಂಡಿಲ್ಲ. ಹಾಗಾಗಿಯೇ ಸಿಕ್ಕ ಬೇಲ್ ಸುಪ್ರೀಂನಿಂದ ಕ್ಯಾನ್ಸಲ್ ಆಗಿ ಮತ್ತೆ ಜೈಲೂಟ ಸವಿಯುವಂತಾಗಿದೆ.
ಬೆನ್ನು ನೋವು ಕಾರಣ ನೀಡಿ ಹೊರಬಂದಿದ್ದ ದರ್ಶನ್ ಅದಕ್ಕೆ ತಕ್ಕನಾದ ಚಿಕಿತ್ಸೆ ಪಡೆಯದ ಕಾರಣ ಅವ್ರ ಬೇಲ್ ರಿಜೆಕ್ಟ್ ಆಯ್ತು. ಆದ್ರೀಗ ಎರಡನೇ ಬಾರಿ ಬೇಲ್‌ಗೆ ಅಪ್ಲೈ ಮಾಡೋಕೆ ಸಜ್ಜಾಗಿದ್ದಾರಂತೆ ದರ್ಶನ್. ಅದಕ್ಕೆ ಅವರು ಕಾರಣ ಕೊಡೋಕೆ ಸಜ್ಜಾಗಿರೋದು ಅವರ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯವಂತೆ. ಅದಕ್ಕಾಗಿ ಸೆಷನ್ ಕೋರ್ಟ್‌ಗೆ ಬೇಲ್ ಅರ್ಜಿ ಸಲ್ಲಿಸೋಕೆ ತಯಾರಿ ನಡೆಸ್ತಿದೆ ಟೀಂ ದರ್ಶನ್ ಎನ್ನಲಾಗ್ತಿದೆ. ಅಂದಹಾಗೆ ದರ್ಶನ್ ಹೊರಗೆ ಇದ್ದಾಗಲೇ ತಾಯಿ ಯೋಗಕ್ಷೇಮ ವಿಚಾರಿಸ್ತಿರಲಿಲ್ಲ. ಜೈಲಿಂದ ಹೊರಬರೋಕೆ ಇದೊಂದು ಹೊಸ ನೆಪ. ಹೊಸ ಕಥೆ ಅನ್ನೋದು ಹಲವರ ಅಭಿಪ್ರಾಯ.
ಸುಪ್ರೀಂ ಮಾಡಿದೆ ರಿಜೆಕ್ಟ್.. ನೀಡುತ್ತಾ ಸೆಷನ್ ಕೋರ್ಟ್..?
ಸುಳ್ಳಿನ ಸಂತೆ.. ಹೊಸ ಜಾಮೀನಿಗೆ ದಚ್ಚು ಹೊಚ್ಚ ಹೊಸ ಕಥೆ
ಸುಳ್ಳಿನ ಸಂತೆ ಸೃಷ್ಠಿಸಿ, ಅದರಲ್ಲಿ ಮೂಟೆಗಳನ್ನ ಹೊರುತ್ತಿರೋ ದಾಸ ದರ್ಶನ್, ಇಲ್ಲಿಯವರೆಗೆ ತಾನು ಹೇಳಿದಂತೆ ನಡೆದುಕೊಂಡೇ ಇಲ್ಲವಂತೆ. ಬ್ಯಾಕ್‌ಪೇನ್‌ಗೆ ಸರ್ಜರಿ ಆಗಿಲ್ಲ. ಫಿಸಿಯೋ ಆಗಿಲ್ಲ. ಕನಿಷ್ಟ ಪಕ್ಷ ಟ್ರೀಟ್‌ಮೆಂಟ್ ತಗೊಂಡಿರೋದಕ್ಕೆ ಚಿಕ್ಕದೊಂದು ಪುರಾವೆ ಕೂಡ ಇಲ್ವಂತೆ. ಮಿಗಿಲಾಗಿ ಜೈಲಲ್ಲಿರೋ ಅಧಿಕಾರಿಗಳ ಜೊತೆ ಕಿರಿಕ್. ನನಗೆ ಹೆಚ್ಚುವರಿ ಬೆಡ್, ತಲೆದಿಂಬು ಕೊಟ್ಟಿಲ್ಲ. ವಿಷ ಕೊಡಿ ಸ್ವಾಮಿ. ನೀವೇ ಬಂದು ಇಲ್ಲಿ ಪರಿಶೀಲನೆ ನಡೆಸಿ ಸ್ವಾಮಿ.. ಹೀಗೆ ಕಥೆಗಳು ಒಂದೋ ಎರಡೋ ಅಲ್ಲ.. ನಾನಾ ಕಥೆಗಳು.
ಹೀಗೆಲ್ಲಾ ಇರುವಾಗ ಸೆಷನ್ ಕೋರ್ಟ್ ನಿಜಕ್ಕೂ ದರ್ಶನ್‌ಗೆ ಬೇಲ್ ನೀಡುತ್ತಾ..? ಮತ್ತೆ ಅದನ್ನ ಸುಪ್ರೀಂನಿಂದ ಕ್ಯಾನ್ಸಲ್ ಮಾಡಿಸೋದು ಸರ್ಕಾರಕ್ಕೆ ಅಥ್ವಾ ಕರ್ನಾಟಕ ಪೊಲೀಸರಿಗೆ ಕಷ್ಟವಾಗುತ್ತಾ..? ತಾಯಿಗೆ ಅನಾರೋಗ್ಯ ಆದ್ರೆ ನೋಡಿಕೊಳ್ಳೋಕೆ ತಮ್ಮ ದಿನಕರ್ ಇದ್ದಾರೆ. ಅಕ್ಕ ಇದ್ದಾರೆ. ಮೀನಾ ಅವರಿಗೆ ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ. ಸೋ.. ಈ ಬಾರಿಯ ನಾಟಕ ಕೂಡ ವ್ಯರ್ಥ ಪ್ರಯತ್ನವಾಗದೆ ಇರದು ಅನ್ನೋದು ಒಂದಷ್ಟು ಕಾನೂನು ಪಂಡಿತರ ಅಭಿಪ್ರಾಯವಾಗಿದೆ. ಇದರ ಮಧ್ಯೆ ಡೆವಿಲ್ ಸಿನಿಮಾ ರಿಲೀಸ್ ಬೇರೆ. ಆ ನಿರ್ಮಾಪಕರನ್ನ ಆ ದೇವರೇ ಕಾಪಾಡಬೇಕು.