ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿರೋ ದರ್ಶನ್ ನೆಮ್ಮದಿಯೇ ಇಲ್ಲದಂತಾಗಿದೆ. ಒಂದೇ ಕಡೆ ಕೋರ್ಟ್ ನಲ್ಲಿ ಟ್ರಯಲ್ ಶುರುವಾಗಿದ್ದ ಸಾಕ್ಷಿಗಳು ಸಂಕಷ್ಟ ಎದುರಾಗಿದ್ರೆ, ಮತ್ತೊಂದೆಡೆ ಐಟಿ ವಶಕ್ಕೋಗಿರೋ ಹಣ ಲೆಕ್ಕ. ಮುಂದೆ ಯಾವ ಸಮಸ್ಯೆ ಏದುರಾಗುತ್ತೋ ಅನ್ನೋ ಟೆನ್ಷನ್ ಶುರುವಾಗಿದೆ. ಆಗಾದ್ರೆ ಐಟಿ ಇಲಾಖೆಗೆ ದರ್ಶನ್ ನೀಡಿರೋ ಲೆಕ್ಕವೇನು ಅನ್ನೋ ಮಾಹಿತಿ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಭೇದಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಸಾಕ್ಷಿ ನಾಶ ಪಡಿಸಲು ಬಳಕೆ ಮಾಡಿದ್ದ ಹಾಗೂ ಬಳಕೆಗೆ ಸಂಗ್ರಹಿಸಿದ್ದ 82 ಲಕ್ಷ ಹಣ ಸೀಜ್ ಮಾಡಿದ್ರು. ಬಳಿಕ ಹಣದ ಮೂಲ ಹಾಗೂ ದಾಖಲೆಗಳಿಲ್ಲದ ಹಿನ್ನೆಲೆ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಿದ್ರು. ಅದಕ್ಕೆ ಸಂಬಂಧಿಸಿದಂತೆ ಆದಾಯ ಇಲಾಖೆ ಅಧಿಕಾರಿಗಳು ದರ್ಶನ್ ಅವ್ರ ಬಳಿ ಮಾಹಿತಿ ಕೇಳಿದ್ದು ಅದಕ್ಕೆ ಉತ್ತರವನ್ನ ನೀಡಿದ್ದಾರೆ. ನವೆಂಬರ್ 2024 ರಲ್ಲಿ ನೀಡಿದ್ದ ನೋಟಿಸ್‌ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋ ದರ್ಶನ್ ನಾನು ಕೃಷಿ ಮಾಡಿದ್ದೇ, ಪ್ರಾಣಿಗಳ ಮಾರಾಟ ಮಾಡಿದ್ದೇ. ನನ್ನ ಅಭಿಮಾನಿಗಳು ನನಗೆ ಹುಟ್ಟುಹಬ್ಬದ ದಿನ ದುಡ್ಡುಕೊಟ್ಟಿದ್ರು. ಅವೆಲ್ಲವೂ ಸೇರಿ 82 ಲಕ್ಷ ರೂಪಾಯಿ ಆಗಿದೆ ಎಂದು ಐಟಿ ಇಲಾಖೆಗೆ ಉತ್ತರ ನೀಡಿದ್ದಾರೆ.
ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್
ಹಣದ ಮೂಲ ಕೃಷಿ ಹಾಗೂ ಬರ್ತಡೇ ಗಿಫ್ಟ್ ಎಂದಿರೋ ಗಜ
ಕಳೆದ ಮೂರು ವರ್ಷಗಳಿಂದ ನಾನು ಕೃಷಿಯಲ್ಲಿ ಸಕ್ರಿಯನಾಗಿದ್ದೇನೆ. ಕೃಷಿಯಿಂದ ಒಂದಷ್ಟು ಹಣ ಬಂದಿದೆ. ಅದರ ಜೊತೆಗೆ ನಮ್ಮ ಫಾರ್ಮ್ ಹೌಸ್‌ನಲ್ಲಿ ಕೆಲ ಸಾಕು ಪ್ರಾಣಿಗಳನ್ನ ಸಾಕಿದ್ದೇನೆ. ಅವುಗಳನ್ನ ಮಾರಾಟ ಮಾಡಿ ಬಂದ ಹಣವು ಆಗಿದೆ. ಆದ್ರೆ, ಅವುಗಳಿಗೆ ಯಾವುದೇ ದಾಖಲೆ ಇಲ್ಲ ಅನ್ನೋ ಹೇಳಿಕೆ ನೀಡಿದ್ದಾರೆ. ಅದರ ಜೊತೆಯಲ್ಲಿ ನನ್ನ ಬರ್ತಡೇ ದಿನ ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರು ಕೆಲ ಗಿಫ್ಟ್ ಗಳನ್ನ ನೀಡಿದ್ದಾರೆ.ಅದ್ಯಾವುದಕ್ಕೂ ದಾಖಲೆಗಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹೀಗಾಗಿ ದಾಖಲೆಗಳಿಲ್ಲದೇ ನೀಡಿರೋ ಹೇಳಿಕೆಯನ್ನ ತಿರಸ್ಕರಿಸಿ ಆದಾಯ ತೆರಿಗೆ ಇಲಾಖೆ ವಿಜಯಲಕ್ಷ್ಮಿ ನಿವಾಸದಲ್ಲಿ ಪತ್ತೆಯಾದ ಹಣ ಹಾಗೂ ದರ್ಶನ್ ಬಳಿ ಪತ್ತೆಯಾದ ಹಣಕ್ಕೆ ದಾಖಲೆಗಳಿಲ್ಲ ಹಣ ಎಂದು ಪರಿಗಣಿಸಿರೋ ಐಟಿ ಹಣಕ್ಕೆ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
