ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮನಸೋ ಇಚ್ಚೆ ಕಮೆಂಟ್ ಮಾಡೋರಿಗೆ ಕಾನೂನು ಕಂಟಕ ಆಗಿ ಕಾಡಲಿದೆ. ಟ್ರೋಲ್ ಸೇನೆಗೆ ದೊಡ್ಡ ಶಾಕ್ ಕೊಡೋಕೆ ಮುಂದಾಗಿರೋ ಮೋಹಕತಾರೆ ರಮ್ಯಾ ಕಾನೂನು ಹೋರಾಟ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂದೇಶ ನೀಡುತ್ತಿದೆ. ಕೆಟ್ಟ ಕಮೆಂಟ್ಸ್ ಮಾಡ್ತೀರಾ..? ಹಾಗಾದ್ರೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್. ಈ ಸಂಬಂಧ ಕೋರ್ಟ್‌ಗೆ ಹಾಜರಾದ ರಮ್ಯಾ ಹೇಳಿದ್ದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಮಾಡುವವರಿಗೆ ಈಗ ದೊಡ್ಡ ಶಾಕ್ ಕಾದಿದೆ. ಸ್ಯಾಂಡಲ್ ವುಡ್ ನಟಿ ರಮ್ಯಾ ಟ್ರೋಲ್‌ಗಳ ವಿರುದ್ಧ ನೇರವಾಗಿ ಕಾನೂನು ಹಾದಿ ಹಿಡಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯ ಕಾಮೆಂಟ್ ಮತ್ತು ಕೆಟ್ಟ ಸಂದೇಶಗಳನ್ನು ಕಳುಹಿಸಿದವರ ವಿರುದ್ಧ ರಮ್ಯಾ ದೂರು ನೀಡಿದ್ದು, ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದು ಸಾಮಾನ್ಯವೆಂದುಕೊಂಡಿದ್ದವರಿಗೆ ಇದೀಗ ಕಾನೂನು ಎಚ್ಚರಿಕೆ ಸಿಕ್ಕಂತಾಗಿದೆ.
ರಮ್ಯಾಗೆ ಜಯ.. ಕೆಟ್ಟ ಕಮೆಂಟ್ ಮಾಡಿದ್ರೆ 7 ವರ್ಷ ಜೈಲು
ರೆಡಿ ಟು ಫೈಟ್… ಟ್ರೋಲ್ ಸೇನೆಗೆ ಮೋಹಕತಾರೆ ವಾರ್ನ್
ಸುಮಾರು 7 ತಿಂಗಳ ಹಿಂದೆ ರಮ್ಯಾ 43 ಇನ್‌ಸ್ಟಾಗ್ರಾಮ್ ಖಾತೆಗಳ ವಿರುದ್ಧ 4 ಪುಟಗಳ ದೂರು ದಾಖಲಿಸಿದ್ದರು. ಜುಲೈ 28ರಂದು ಈ ದೂರು ಸಲ್ಲಿಸಲಾಗಿದ್ದು, ಅಸಭ್ಯ ಕಾಮೆಂಟ್ ಮತ್ತು ಬೆದರಿಕೆ ಸಂದೇಶಗಳನ್ನು ಉಲ್ಲೇಖಿಸಲಾಗಿತ್ತು. ಈಗ ಈ ಪ್ರಕರಣದ ವಿಚಾರಣೆ ಬೆಂಗಳೂರಿನ 46ನೇ CCH ಕೋರ್ಟ್‌ನಲ್ಲಿ ನಡೆಯುತ್ತಿದ್ದು, ರಮ್ಯಾ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸಾಕ್ಷ್ಯವನ್ನು ದಾಖಲಿಸಿದ್ದಾರೆ. ಈಗಾಗಲೇ ಪ್ರಕರಣದ ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿದೆ.
ಇತ್ತೀಚೆಗೆ ಹಲವಾರು ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್ ಮತ್ತು ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಟಿ ರಮ್ಯಾ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮಹಿಳೆಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಭದ್ರತೆ ಇರಬೇಕು ಎಂದು ಅವರು ಹೇಳಿದ್ದಾರೆ. ಇದೆ ವೇಳೆ ಮಾತನಾಡಿದ ನಟಿ ರಮ್ಯಾ, ಇವತ್ತು ಕೋರ್ಟ್‌ಗೆ ಎವಿಡೆನ್ಸ್ ಕೊಡಲು ಬಂದಿದ್ದೆ, ಮುಂದೆ ಕ್ರಾಸ್ ಎಕ್ಸಾಮಿನೇಷನ್‌ಗೆ ಕರೆದಿದ್ದಾರೆ. ಯಾರಿಗೂ ಶಿಕ್ಷೆ ಆಗಲಿ ಎನ್ನುವ ಆಸೆ ನನಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡುವದು ನಿಲ್ಲಬೇಕು.ಅದಕ್ಕಾಗಿ ನಾನು ಗಟ್ಟಿ ನಿರ್ಧಾರ ತೆಗೆದುಕೊಂಡು ಫೈಟ್ ಮಾಡ್ತಿದ್ದೀನಿ ಎಂದು ತಿಳಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ರಮ್ಯಾ.. ಟ್ರೋಲರ್ಸ್‌ಗೆ ಟೆನ್ಷನ್..!
ದರ್ಶನ್ ಫೇಕ್ ಫ್ಯಾನ್ಸ್ ಗೆ ಸ್ಯಾಂಡಲ್‌ವುಡ್ ಕ್ವೀನ್ ಪಾಠ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಮ್ಯಾ ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮಾಡಿದ್ದು ತಪ್ಪು ಎಂದು ಬರೆದುಕೊಂಡಿದ್ದರು. ಅದೇ ಸಮಯದಲ್ಲಿ ಕೆಲವರು ರಮ್ಯಾನ ಟಾರ್ಗೆಟ್ ಮಾಡಲು ಆರಂಭಿಸಿದ್ದರು.ಇದೀಗ ತಮ್ಮ ಗುಂಡಿಗೆ ತಾವೇ ಬೀಳುವಂತೆ ರಮ್ಯಾ ತಿರುಗೇಟು ಕೊಟ್ಟಿದ್ದಾರೆ.ಇಷ್ಟೇ ಅಲ್ಲದೆ ಇಂತಹ ಕೃತ್ಯಗಳಿಗೆ 2 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆಯೂ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಸದ್ಯ ರಮ್ಯಾ ಆರಂಭಿಸಿದ ಈ ಕಾನೂನು ಹೋರಾಟ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಟ್ರೋಲ್ ಮತ್ತು ಅಸಭ್ಯ ಕಾಮೆಂಟ್‌ಗಳಿಗೆ ಇದು ದೊಡ್ಡ ಎಚ್ಚರಿಕೆ ಎಂದು ಹೇಳಲಾಗುತ್ತಿದೆ. ಮೊಬೈಲ್ ಹಿಂದೆ ಕುಳಿತು ಯಾರನ್ನಾದರೂ ಅವಮಾನಿಸುವ ಕಾಲ ಮುಗಿಯಬೇಕು, ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಭದ್ರತೆ ಇರಬೇಕು ಎಂಬ ಸಂದೇಶವನ್ನು ಈ ಪ್ರಕರಣ ಮತ್ತೆ ನೆನಪಿಸಿದೆ.
