ದಚ್ಚು ವಕೀಲ ಗೈರು.. ಮತ್ತೆ ಅರೆಸ್ಟ್ ಆಗ್ತಾರಾ ಡಿಬಾಸ್..?!

ಜುಲೈ 24ರಂದು ಸುಪ್ರೀಂ ಕೋರ್ಟ್‌ನಲ್ಲಿ ದಚ್ಚು ಪರ ವಾದ

Untitled design (72)

ಥಾಯ್ಲೆಂಡ್ ಟೂರ್‌‌ನಲ್ಲಿರೋ ಡಿ ಬಾಸ್ ದರ್ಶನ್‌ಗೆ ಮತ್ತೆ ಟೆನ್ಷನ್ ಶುರುವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅವರ ಬೇಲ್ ಆರ್ಡರ್ ಕ್ಯಾನ್ಸಲ್ ಆಗೋ ಸೂಚನೆ ಸಿಕ್ಕಿದೆ. ಹಾಗಾದ್ರೆ ಮತ್ತೆ ಅರೆಸ್ಟ್ ಆಗ್ತಾರಾ ದರ್ಶನ್..? ಬೇಲ್ ಕ್ಯಾನ್ಸಲ್ ಆಗೋಕೆ ಕಾರಣ ಏನು..? ಪವರ್‌ಫುಲ್ ಲಾಯರ್ ಗೈರಾಗಿದ್ದು ಏಕೆ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

ಕೋರ್ಟ್‌ ನಲ್ಲಿ ಕಾಡಿ ಬೇಡಿ ಥಾಯ್ಲೆಂಡ್‌ಗೆ ಹೋಗಿರೋ ನಟ ದರ್ಶನ್‌ಗೆ ಅಲ್ಲಿಯೂ ನೆಮ್ಮದಿ ಇಲ್ಲದಂತಾಗಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್‌ ಯಾವುದೇ ಸಮಯದಲ್ಲಿ ಅವರ ಬೇಲ್ ಆರ್ಡರ್‌‌ನ ರದ್ದು ಮಾಡೋ ಸಾಧ್ಯತೆಯಿದೆ. ಹೌದು.. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಂಬರ್-2 ಆಗಿರೋ ದರ್ಶನ್‌ಗೆ ಸಂಕಷ್ಟ ತಪ್ಪುತ್ತಿಲ್ಲ.

ADVERTISEMENT
ADVERTISEMENT

ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ ಹಿನ್ನೆಲೆ 11 ದಿನಗಳ ಕಾಲದ ಮಟ್ಟಿಗೆ ಥಾಯ್ಲೆಂಡ್‌‌ನಲ್ಲಿ ಬೀಡು ಬಿಟ್ಟಿದ್ದಾರೆ ದಾಸ ದರ್ಶನ್. ಆತನಿಗೆ ಡೆವಿಲ್ ಚಿತ್ರತಂಡ ಜೊತೆಗಿದ್ರೂ, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಕೂಡ ಸಾಥ್ ನೀಡಿದ್ದಾರೆ. ಯಾರೇ ಜೊತೆಗಿದ್ರೂ ಸಹ ದಚ್ಚು ಹೃದಯ ಸದ್ಯದ ಮಟ್ಟಿಗೆ ಢವ ಢವ ಅಂತಿರೋದು ಸುಳ್ಳಲ್ಲ.

ಯಾಕಂದ್ರೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ದರ್ಶನ್ ಪರ ವಾದ ಮಂಡಿಸಬೇಕಿತ್ತು ಆರೋಪಿ ದರ್ಶನ್ ಪರ ವಕೀಲ ಕಪಿಲ್ ಸಿಬಲ್. ಆದ್ರೆ ಕಪಿಲ್ ಸಿಬಲ್ ವಾದ ಮಂಡಿಸೋಕೆ ಕೋರ್ಟ್‌ಗೆ ಬಂದೇ ಇಲ್ಲ. ಸುಪ್ರೀಂ ಕೋರ್ಟ್‌‌ಗೆ ಗೈರಾಗುವ ಮೂಲಕ ತಮ್ಮ ಬಳಿ ಪ್ರಬಲವಾದ ಸಾಕ್ಷ್ಯಾಧಾರಗಳು ಇಲ್ಲ ಅನ್ನೋದನ್ನ ಪ್ರೂವ್ ಮಾಡಿದ್ರಾ ಲಾಯರ್ ಅನ್ನೋ ಅನುಮಾನ ಶುರುವಾಗಿದೆ. ಅಷ್ಟೇ ಅಲ್ಲ, ಕಪಿಲ್ ಸಿಬಲ್ ಪರವಾಗಿ ಅವರ ಅಸಿಸ್ಟೆಂಟ್ ಸಿದ್ದಾರ್ಥ್ ದವೆ ಕೋರ್ಟ್‌ನ ಒಂದು ದಿನ ಕಾಲಾವಕಾಶ ಕೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರೋ ನ್ಯಾಯಾಧೀಶರು, ಕೋರ್ಟ್‌ನಲ್ಲಿ ದರ್ಶನ್ ಪರ ವಾದ ಮಂಡನೆಗೆ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಹಾಗಾಗಿ ಲಿಖಿತ ರೂಪದಲ್ಲಿ ವಾದ ಮಂಡಿಸೋಕೆ ಸೂಚನೆ ನೀಡಿದ್ದಾರೆ. ಇದನ್ನೆಲ್ಲಾ ನೋಡ್ತಿದ್ರೆ, ಕಳೆದ ಹಿಯರಿಂಗ್ ನಲ್ಲಿ ದರ್ಶನ್‌ ಅಂಡ್ ಗ್ಯಾಂಗ್‌ಗೆ ಹೈ ಕೋರ್ಟ್‌ ಹೇಗೆ ಬೇಲ್ ನೀಡಿತು ಎಂದಿತ್ತು. ಇದೀಗ ಲಿಖಿತ ರೂಪದಲ್ಲಿ ವಾದ ಮಂಡಿಸಲು ಹೇಳಿದೆ. ಸೋ.. ದಚ್ಚುಗೆ ಯಾಕೋ ಮತ್ತೆ ಸಂಕಷ್ಟ ಶುರುವಾಗೋ ಮುನ್ಸೂಚನೆ ಇದೆ.

ಇನ್ ಕೇಸ್ ಬೇಲ್ ಆರ್ಡರ್ ಸುಪ್ರೀಂನಲ್ಲಿ ಕ್ಯಾನ್ಸಲ್ ಆದ್ರೆ ದರ್ಶನ್‌ ವೀಸಾ ಕ್ಯಾನ್ಸಲ್ ಆಗಲಿದೆ. ಕೂಡಲೇ ಅವರನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ. ನಂತರ ಹೆಲ್ತ್ ಟೆಸ್ಟ್ ಮಾಡಿಸಿ, ಕೋರ್ಟ್‌ಗೆ ಪ್ರೊಡ್ಯೂಸ್ ಮಾಡ್ತಾರೆ. ಮತ್ತೆ ಜೈಲು ಪಾಲಾಗುವ ದರ್ಶನ್‌ಗೆ ಕನಿಷ್ಟ ಐದಾರು ತಿಂಗಳು ಬೇಲ್ ಸಿಗೋದು ಕಷ್ಟವಿದೆ. ಹಾಗಾದಲ್ಲಿ ಮಗದೊಮ್ಮೆ ದಚ್ಚುಗೆ ಜೈಲೂಟ ಫಿಕ್ಸ್.

ಈ ಹಿಂದೆ ದರ್ಶನ್ ಬೇಲ್ ಪಡೆಯಲು ನೀಡಿದ್ದ ಎಲ್ಲಾ ಕಾರಣಗಳು ಠುಸ್ ಆಗಿವೆ. ಬೆನ್ನು ನೋವು ಕಾರಣ ನೀಡಿ ಹೊರಬಂದಿದ್ರು. ಕೂಡಲೇ ಆಪರೇಷನ್ ಮಾಡಿಸಬೇಕು ಎಂದಿದ್ರು. ಆದ್ರೆ ಸರ್ಜರಿ ಆಗಲೇ ಇಲ್ಲ. ಬೆನ್ನು ನೋವಿನ ನಡುವೆಯೂ ಶೂಟಿಂಗ್ ಶುರು ಮಾಡಿದ್ದಾರೆ ದಚ್ಚು. ಅಲ್ಲದೆ ಕೊಲೆ ಆರೋಪಿಯ ಸಾಕ್ಷಿಗಳ ಜೊತೆ ಓಡಾಟ ಮಾಡ್ತಿದ್ದಾರೆ. ಇವೆಲ್ಲವೂ ದರ್ಶನ್ ಬೇಲ್ ಆರ್ಡರ್ ರದ್ದಾಗೋಕೆ ಪುಷ್ಠಿ ನೀಡಲಿವೆ. ತಪ್ಪು ಹೆಜ್ಜೆ ಇಡ್ತಿರೋ ದರ್ಶನ್‌‌ಗೆ ಈ ಬಾರಿ ಒಳಗೆ ಹೋದಲ್ಲಿ ಅವ್ರನ್ನ ಕಾಪಾಡೋಕೆ ದೇವರಿಂದಲೂ ಸಾಧ್ಯವಿಲ್ಲ ಅಂತಿವೆ ಮೂಲಗಳು. ಜುಲೈ 24ರ ಗುರುವಾರ ದಚ್ಚು ಪಾಲಿಗೆ ಗುಡ್ ಡೇ ಆಗುತ್ತಾ ಅಥ್ವಾ ಬ್ಯಾಡ್ ಡೇ ಆಗುತ್ತಾ ಅಂತ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version