ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ರಿಮಿನಲ್ ಚಿತ್ರದಿಂದ ರಚಿತಾ ಔಟ್ ಎನ್ನಲಾಗಿತ್ತು. ಅದಕ್ಕೀಗ ಖಡಕ್ ಕೌಂಟರ್ ಅಂದಂತೆ ಶಿರಸಿಯಲ್ಲಿ ನಡೇತಿರೋ ಶೂಟಿಂಗ್ ಅಡ್ಡಾಗೆ ಲೇಡಿ ಸೂಪರ್ ಸ್ಟಾರ್ ಎಂಟ್ರಿ ಕೊಟ್ಟಾಗಿದೆ. ಜಿಮ್‌ನಲ್ಲಿ ಬೆವರಿಳಿಸಿ, ಸಖತ್ ಸ್ಲಿಮ್ ಆಗಿರೋ ರಚ್ಚು ಸೆಕೆಂಡ್ ಇನ್ನಿಂಗ್ಸ್ ಮತ್ತಷ್ಟು ವೇಗ ಪಡೆದಿದೆ. ಅದ್ರ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ.
ನಯನತಾರಾ ರೀತಿ ಸ್ಯಾಂಡಲ್‌ವುಡ್‌ಗೆ ಲೇಡಿ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ಡಿಂಪಲ್ ಕ್ವೀನ್ ರಚಿತಾ ರಾಮ್ ಕರಿಯರ್ ಮುಗಿದೇ ಹೋಯ್ತು ಅಂತಿದ್ರು. ಆಗ ಬಂದಿದ್ದೇ ತಲೈವಾ ರಜನೀಕಾಂತ್ ಜೊತೆಗಿನ ಕೂಲಿ. ಕಿಲ್ಲರ್ ಕಲ್ಯಾಣಿ ರೋಲ್‌ನಲ್ಲಿ ಡೆಡ್ಲಿ ಪರ್ಫಾಮೆನ್ಸ್ ನೀಡಿದ್ದ ರಚ್ಚು, ಅದಾದ ಬಳಿಕ ಬಂದಂತಹ ಕಲ್ಟ್ ಹಾಗೂ ಲ್ಯಾಂಡ್‌ಲಾರ್ಡ್ ಎರಡರಲ್ಲೂ ಪ್ರಯೋಗಾತ್ಮಕ ಪಾತ್ರಗಳನ್ನೇ ಮಾಡಿದ್ದಾರೆ.
ಧ್ರುವ ಕ್ರಿಮಿನಲ್ ಅಡ್ಡಾಗೆ ರಚ್ಚು.. Exclusive ಡೈಲಾಗ್..!
ಪಾರ್ವತಿ ರೋಲ್‌ಗಾಗಿ ರಚಿತಾ ಇಳಿಸಿದ್ದೆಷ್ಟು KG ತೂಕ?
ಗ್ಲಾಮರ್ ಪಾತ್ರಗಳಲ್ಲೇ ನೋಡಿ ಎಂಜಾಯ್ ಮಾಡ್ತಿದ್ದ ಚಿತ್ರಪ್ರೇಮಿಗಳಿಗೆ ಹಾಗೂ ತನ್ನ ಫ್ಯಾನ್ಸ್‌ಗೆ ರಚಿತಾ ತನ್ನಲ್ಲಿರೋ ಅಸಲಿ ಕಲಾವಿದೆಯನ್ನ ಬಡಿದೆಬ್ಬಿಸಿ, ಭಿನ್ನ ಅಲೆಯ ಪಾತ್ರಗಳಿಗೆ ಜೈ ಅಂತಿದ್ದಾರೆ. ನೆಗೆಟಿವ್ ಶೇಡ್‌ನಲ್ಲೂ ತಾನು ಸೂಪರ್ ಮಚ್ಚಿ ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ. ಲ್ಯಾಂಡ್‌ಲಾರ್ಡ್ ನಿಂಗವ್ವ ಹಾಗೂ ಕಲ್ಟ್‌ನ ಇತಿಹಾಸಿನಿ ಎರಡೂ ರೋಲ್‌ಗಳು ನೋಡುಗರ ಹುಬ್ಬೇರಿಸಿವೆ.
ಹೀಗಾಗಿ ರಚಿತಾ ಸೆಕೆಂಡ್ ಇನ್ನಿಂಗ್ಸ್ ಮೊದಲ ಇನ್ನಿಂಗ್ಸ್‌ಗಿಂತ ಜೋರಿದೆ. ಸಖತ್ ಥ್ರಿಲ್ಲಿಂಗ್ ಆಗಿದೆ. ಈಗಾಗ್ಲೇ ಕ್ರಿಮಿನಲ್ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಚಿತಾ, ನಂತ್ರ ಧ್ರುವ ಸರ್ಜಾ ಜೊತೆಗಿನ ಆ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ಆದ್ರೆ ಧ್ರುವ ಮಾತ್ರ ರಚ್ಚುನೇ ನನಗೆ ಜೋಡಿ ಅನ್ನೋದನ್ನ ಖಚಿತಪಡಿಸಿದ್ರು. ಅದೀಗ ನಿಜವಾಗಿದೆ. ಶಿರಸಿಯಲ್ಲಿ ಭರದಿಂದ ಸಾಗ್ತಿರೋ ಕ್ರಿಮಿನಲ್ ಶೂಟಿಂಗ್ ಅಡ್ಡಾಗೆ ಲೇಡಿ ಸೂಪರ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.
ಶಿರಸಿಯಲ್ಲಿ ನಡೀತಿದೆ ಕ್ರಿಮಿನಲ್ ನಾನ್‌ಸ್ಟಾಪ್ ಶೂಟಿಂಗ್
15ದಿನ ಲೇಡಿ ಸೂಪರ್ ಸ್ಟಾರ್ ಶೆಡ್ಯೂಲ್.. ಸೆಕೆಂಡ್ ಇನ್ನಿಂಗ್ಸ್
15 ದಿನಗಳ ನಾನ್‌ಸ್ಟಾಪ್ ಶೆಡ್ಯೂಲ್‌ಗಾಗಿ ರಚಿತಾ ಎಂಟ್ರಿ ಸಾಮಾನ್ಯವಾಗಿಲ್ಲ. ಪಾರ್ವತಿ ಪಾತ್ರಕ್ಕಾಗಿ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಿಳಿಸಿ, ಡಯೆಟ್ ಮಾಡಿ, ಬಾಡಿಯನ್ನ ಸಖತ್ ಲೀನ್ ಆಗಿಸಿಕೊಂಡು ಕ್ಯಾಮೆರಾ ಮುಂದೆ ಬಂದಿದ್ದಾರೆ. ಅಂದಹಾಗೆ ಲ್ಯಾಂಡ್‌ಲಾರ್ಡ್ ನಿಂಗವ್ವ ರೋಲ್‌ಗಾಗಿ ತೂಕ ಹೆಚ್ಚಿಸಿಕೊಂಡಿದ್ರು ರಚ್ಚು. ಇದೀಗ ಸುಮಾರು ಏಳೆಂಟು ಕೆಜಿಗಳಷ್ಟು ತೂಕ ಇಳಿಸಿಕೊಂಡು, ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿ ಬಂದಿದ್ದಾರೆ. ಇದು ನಿಜಕ್ಕೂ ರಚಿತಾ ಸಿನಿಮಾ ಡೆಡಿಕೇಷನ್ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿರೋ ನೈಜ ಘಟನೆ ಆಧಾರಿತ ಸಿನಿಮಾ ಈ ಕ್ರಿಮಿನಲ್ ಆಗಿದ್ದು, ಶಿವನಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರಿಸಿ, ಆರ್ಭಟಿಸಲಿದ್ದಾರೆ. ಸದ್ಯ ರಿವೀಲ್ ಆಗಿರೋ ರಾ ಅಂಡ್ ರಗಡ್ ಡೈಲಾಗ್ ಚಿತ್ರದ ಇಂಟೆನ್ಸಿಟಿ ಹೇಳ್ತಿದೆ. ಕೆರೆಬೇಟೆ ಚಿತ್ರದ ಡೈರೆಕ್ಟರ್ ರಾಜ್‌ಗುರು ಆ್ಯಕ್ಷನ್ ಕಟ್ ಹೇಳ್ತಿದ್ದು, ಚಿತ್ರದಲ್ಲಿ ಹಿರಿಯನಟಿ ತಾರಾ ನಟ ಧ್ರುವ ಸರ್ಜಾ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
