ದಳಪತಿ ರಾಜಕೀಯಕ್ಕೆ ಜನನಾಯಗನ್ ಬಲಿ..ಗುಟ್ಟು ರಟ್ಟು

ಕೊನೆಗೂ ಮೌನ ಮುರಿದ ವಿಜಯ್..ಹೇಳಿದ್ದೇನು ಗೊತ್ತಾ..?

BeFunky collage 2026 02 03T171251.274

ಸೆನ್ಸಾರ್ ತಿಕ್ಕಾಟದಿಂದಾಗಿ ಜನನಾಯಗನ್ ರಿಲೀಸ್ ಪೋಸ್ಟ್‌ಪೋನ್ ಆಗಿದ್ದು ಗೊತ್ತೇಯಿದೆ. ಆದ್ರೆ ಇದೇ ಮೊದಲ ಬಾರಿಗೆ ಈ ಬಗ್ಗೆ ಮೌನ ಮುರಿದಿರೋ ದಳಪತಿ ವಿಜಯ್, ನನ್ನ ರಾಜಕೀಯ ಕಾರಣಗಳಿಂದಾಗಿ ಸಿನಿಮಾ ಹಾಗೂ ನಿರ್ಮಾಣ ಮಾಡಿದ ಪ್ರೊಡ್ಯೂಸರ್‌‌ಗೆ ಸಮಸ್ಯೆ ಆಗ್ತಿದೆ ಎಂದಿದ್ದಾರೆ. ಹಾಗಾದ್ರೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ..? ಸದ್ಯ ಕೇಸ್ ಎಲ್ಲಿವರೆಗೂ ಬಂತು ಅಂತೀರಾ..? ಇಲ್ಲಿದೆ ಕ್ಲ್ಯಾರಿಟಿ.

ಜನ ನಾಯಗನ್.. ಜನ ನಾಯಗನ್.. ಜನ ನಾಯಗನ್.. ಬಹುಶಃ ಇತ್ತೀಚಿನ ದಿನಗಳಲ್ಲಿ ರಿಲೀಸ್‌ಗೂ ಮೊದಲೇ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿದ ಸಿನಿಮಾ ಇದು. ಅದಕ್ಕೆ ಕಾರಣ ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಒಂದಾದ್ರೆ, ಮತ್ತೊಂದು ಸೆನ್ಸಾರ್‌‌ ಮಂಡಳಿಯಿಂದ ಆಗಿರೋ ಸಮಸ್ಯೆ. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇದೇ ಜನವರಿ 9ಕ್ಕೆ ಪೊಂಗಲ್ ಹಬ್ಬದ ವಿಶೇಷ ಸಿನಿಮಾ ತೆರೆಕಂಡು, ಇಷ್ಟೊತ್ತಿಗೆ ನಿರ್ಮಾಪಕರಿಗೆ ನೂರಾರು ಕೋಟಿ ಲಾಭ ಕೂಡ ಬರ್ತಿತ್ತು. ಆದ್ರೆ ರಾಜಕೀಯ ದಾಳಕ್ಕೆ ಸಿಲುಕಿ ಜನ ನಾಯಗನ್ ನಿರ್ಮಾಪಕ ಅಕ್ಷರಶಃ ಕಂಗಾಲಾಗಿದ್ದಾನೆ.

ದಳಪತಿ ರಾಜಕೀಯಕ್ಕೆ ಜನನಾಯಗನ್ ಬಲಿ..ಗುಟ್ಟು ರಟ್ಟು

ಕೊನೆಗೂ ಮೌನ ಮುರಿದ ವಿಜಯ್..ಹೇಳಿದ್ದೇನು ಗೊತ್ತಾ..?

ಮ್ಯಾಟರ್ ಏನಪ್ಪಾಂದ್ರೆ ಜನ ನಾಯಗನ್ ಚಿತ್ರಕ್ಕೆ ಬಂಡವಾಳ ಹಾಕಿರೋದು ನಮ್ಮ ಕನ್ನಡದ ಪ್ರೊಡ್ಯೂಸರ್. 450ರಿಂದ 500 ಕೋಟಿ ಬಜೆಟ್ ಮೂವಿ ಇದಾಗಿದ್ದು, ವಿಜಯ್ ಕರಿಯರ್‌ನ ದುಬಾರಿ ಸಿನಿಮಾ ಅನಿಸಿಕೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾ ರಿಲೀಸ್‌ಗೆ ಕೋರ್ಟ್‌ನಿಂದ ತಡೆ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿದ್ದಾರೆ ದಳಪತಿ ವಿಜಯ್. ನನ್ನ ರಾಜಕೀಯ ಎಂಟ್ರಿಯಿಂದಾಗಿ ಸಿನಿಮಾಗೆ ತೊಂದರೆ ಆಗ್ತಿದೆ. ಅಲ್ಲದೆ, ಬಂಡವಾಳ ಹೂಡಿರೋ ನಿರ್ಮಾಪಕರಿಗೂ ಸಿಕ್ಕಾಪಟ್ಟೆ ತೊಂದರೆ ಆಗಿದೆ ಅಂತ ಅಸಹಾಯಕತೆಯನ್ನ ವ್ಯಕ್ತಪಡಿಸಿದ್ದಾರೆ ವಿಜಯ್.

ಫೆ-13 ಅಥ್ವಾ 20ಕ್ಕೆ ರಿಲೀಸ್ ಚಾನ್ಸ್..ಬಿಟ್ರೆ ಜೂನ್‌‌‌ ತನಕ ಇಲ್ಲ

51 ಸೀನ್ಸ್‌ ಕಟ್ & ಮ್ಯೂಟ್..? 23 ನಿಮಿಷಕ್ಕೆ ಬೀಳುತ್ತಾ ಕತ್ತರಿ?

ಹಾಗಾದ್ರೆ ಜನ ನಾಯಗನ್ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಒಂದು ವೇಳೆ ಕೋರ್ಟ್‌ನಿಂದ ಕ್ಲಿಯರೆನ್ಸ್ ಸಿಕ್ರೆ ಇದೇ ಫೆಬ್ರವರಿ 13 ಅಥ್ವಾ 20ಕ್ಕೆ ಸಿನಿಮಾ ಥಿಯೇಟರ್‌ಗೆ ಬರಲಿದೆ. ಇಲ್ಲವಾದಲ್ಲಿ ತಮಿಳುನಾಡು ಎಲೆಕ್ಷನ್ಸ್ ಮುಗಿದು ಜೂನ್‌ವರೆಗೂ ಕಾಯಲೇಬೇಕಾಗುತ್ತೆ. ಸದ್ಯ ಹೈ ಕೋರ್ಟ್‌ನಿಂದ ಪ್ರಕರಣ ಸುಪ್ರೀಂ ವೆರೆಗೂ ತಲುಪಿದೆ. ಮೊದಲು ಸೆನ್ಸಾರ್ ಮಂಡಳಿಯ ನಡೆ ಪ್ರಶ್ನಿಸಿ ಸುಪ್ರೀಂಗೆ ಹೋದ್ರು ನಿರ್ಮಾಪಕರು. ಆದ್ರೀಗ ಸುಪ್ರೀಂನಲ್ಲಿ ಸೆನ್ಸಾರ್ ಬೋರ್ಡ್ ಕೂಡ ಕೆವಿಟ್ ಹಾಕಿದೆ. ಸೋ.. ಸುಪ್ರೀಂ ಕೋರ್ಟ್ ಹೈ ಕೋರ್ಟ್‌‌ನಲ್ಲೇ ಇತ್ಯರ್ಥ ಮಾಡಿಕೊಳ್ಳಲು ಸೂಚಿಸಿದೆ.

ಒಂದು ವೇಳೆ ಆದಷ್ಟು ಬೇಗ ರಿವೈಸ್ ಕಮಿಟಿ ಸಿನಿಮಾ ನೋಡಿದ್ರೆ ಫೆಬ್ರವರಿ 13 ಅಥ್ವಾ 20ಕ್ಕೆ ಜನ ನಾಯಗನ್‌ಗೆ ಬಿಡುಗಡೆ ಭಾಗ್ಯ ದೊರೆಯಲಿದೆ. ಶಾಕಿಂಗ್ ನ್ಯೂಸ್ ಏನು ಅಂದ್ರೆ ಬಲ್ಲ ಮೂಲಗಳ ಪ್ರಕಾರ ಬರೋಬ್ಬರಿ 23 ನಿಮಿಷಗಳಿಗೆ ಕತ್ತರಿ ಬೀಳಿದೆಯಂತೆ. ಅಂದ್ರೆ 51 ಸೀನ್‌ಗಳಿಗೆ ಕಟ್ಸ್ ಅಂಡ್ ಮ್ಯೂಟ್ಸ್ ನೀಡಲು ಸೆನ್ಸಾರ್ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಏನೇ ಆಗಲಿ.. ಈ ರಾಜಕೀಯದಿಂದಾಗಿ ಸಾಲ ಮಾಡಿ ಕೋಟ್ಯಂತರ ರೂಪಾಯಿ ಸುರಿದ ನಿರ್ಮಾಪಕ ಮಾತ್ರ ಬೀದಿಗೆ ಬರುವಂತಾಗಿದೆ.

 

 

Exit mobile version