ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಲ್ಯಾಂಡ್‌ಲಾರ್ಡ್ ಜೊತೆ ಕಲ್ಟ್ ಮೂವಿ ಕೂಡ ಇಂದು ತೆರೆ ಕಂಡಿದೆ. ಝೈದ್ ಖಾನ್ ಈ ಬಾರಿ ಮತ್ತಷ್ಟು ಮಾಗಿದ್ದಾರೆ, ಪಳಗಿದ್ದಾರೆ. ಯೂತ್‌ಗೆ ಕನೆಕ್ಟ್ ಆಗೋ ಕ್ಯಾರೆಕ್ಟರ್ ಮತ್ತು ಕಥೆಯಿಂದ ಚಿತ್ರಪ್ರೇಮಿಗಳು ಭೇಷ್ ಎನ್ನುವಂತೆ ನಟಿಸಿದ್ದಾರೆ. ಹಾಗಾದ್ರೆ ಕಲ್ಟ್ ಕಥೆ ಏನು ಎಂಬುದರ ಕಂಪ್ಲೀಟ್ ರಿವೀವ್ ಇಲ್ಲಿ ದೆ ನೋಡಿ.
ಇದು ಭಗ್ನ ಪ್ರೇಮಿಯ ಕತೆ. ಆದರೆ ಸಾಮಾನ್ಯ ಲವ್ ಸ್ಟೋರಿ ಅಲ್ಲ, ಇದು ನೋವಿನೊಳಗೆ ಹುಟ್ಟಿದ ಪಾಗಲ್ ಪ್ರೀತಿಯ ಕಲ್ಟ್ ಕಥೆ. ಸಾಕಷ್ಟು ಲವ್ ಸ್ಟೋರಿ ಸಿನಿಮಾಗಳು ಬಂದಿವೆ, ಹಿಟ್ ಆಗಿವೆ… ಆದರೆ ಪ್ರೀತಿಯಲ್ಲಿ ಸೋತವರ ಮನಸ್ಸು ಗೆಲ್ಲೋದು ಸುಲಭವಲ್ಲ. ಆ ಭಗ್ನ ಹೃದಯದ ತೂಗುತಿರುವ ಸ್ಪಂದನಗಳನ್ನೇ ತೆರೆ ಮೇಲೆ ಹಿಡಿಯಲು ನಿರ್ದೇಶಕ ಅನಿಲ್ ಕುಮಾರ್ ದೊಡ್ಡ ಪ್ರಯತ್ನ ಮಾಡಿದ್ದಾರೆ. ಸಹಜ ಕಥೆಯನ್ನು ಎಕ್ಸ್ಟ್ರಾ ಆರ್ಡಿನರಿ ಟಚ್ ನೀಡಿ, ಇಂದಿನ ಜನರೇಷನ್ ಲವ್‌ಗೆ ಕನ್ನಡಿಯಲ್ಲಿ ತೋರಿಸಿದಂತಿದೆ ಕಲ್ಟ್ ಸಿನಿಮಾ.

ಬ್ರೇಕಪ್ ಹೃದಯಗಳಿಗೆ ‘ಕಲ್ಟ್’ ಇಮೋಷನಲ್ ರೈಡ್
ರಿಲೀಸ್ ಟೆನ್ಷನ್.. ಝೈದ್‌ಗೆ ಸಿಕ್ತು ಆಂಜನೇಯನ ಬಲ
ಇಂದು ರಾಜ್ಯಾದ್ಯಂತ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅಭಿನಯಿಸಿರುವ ಕಲ್ಟ್ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಝೈದ್, ಕಲಾವಿದರಿಗೆ ಜಾತಿ ಇಲ್ಲ ಅನ್ನೋ ಸಂದೇಶವೂ ನೀಡಿದ್ದಾರೆ. ಸದ್ಯ ನಗರದ ನರ್ತಕಿ ಚಿತ್ರಮಂದಿರದಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿರುವ ಕಲ್ಟ್ ಸಿನಿಮಾವನ್ನು ಝೈದ್ ಖಾನ್, ನಟಿ ಮಲೈಕಾ ವಸುಪಾಲ್, ನಿರ್ದೇಶಕ ಅನಿಲ್ ಕುಮಾರ್ ಹಾಗು ಗಾಯಕ ಆಲ್ ಓಕೆ ಪ್ರೇಕ್ಷಕರ ಜೊತೆ ಕೂತು ಸಿನಿಮಾ ವೀಕ್ಷಿಸಿದ್ದು ವಿಶೇಷ.

ಅಂದಹಾಗೆ ಕಲ್ಟ್ ಕಥೆ ಏನು..? ಯಾಕೆ ನೋಡ್ಬೇಕು ಎನ್ನುವವರಿಗೆ ಇಲ್ಲಿದೆ ಉತ್ತರ. ಝೈದ್ ಖಾನ್ ಇಲ್ಲಿ ಪಕ್ಕಾ ಭಗ್ನ ಪ್ರೇಮಿಯಾಗಿ ಮಾಧೇವ ಪಾತ್ರದಲ್ಲಿ ಮಿಂಚಿದ್ದಾರೆ. ಲವ್ ಅಂದ್ರೆ ಪ್ರಾಣ ಕೊಡೋ ಮಟ್ಟಿಗೆ ಹೋಗುವ ಯುವಕನ ಮನಸ್ಥಿತಿ, ಬ್ರೇಕಪ್ ನಂತರದ ಆತ್ಮಗ್ಲಾನಿ, ಕೋಪ, ಬೇಸರ ಆಲ್ ಇನ್ ಒನ್ ಪ್ಯಾಕೇಜ್ ಆಗಿ ಕಾಣಿಸುತ್ತಾರೆ. 1st ಹಾಫ್‌ನಲ್ಲಿ ಸಾಂಗ್ಸ್ ಕೇಳುಗರ ಮನಸ್ಸು ಗೆಲ್ಲುತ್ತವೆ. ಫ್ಲಾಶ್‌ಬ್ಯಾಕ್ ಲವ್ ಟ್ರ್ಯಾಕ್ ಸಿಹಿಯಾಗಿದ್ದು, ಗೀತಾ ಜೊತೆಗಿನ ಪ್ಯೂರ್ ಲವ್ ಸ್ಟೋರಿ ಹೃದಯ ಮುಟ್ಟುತ್ತದೆ. ರಚಿತಾ ರಾಮ್ ಇತಿಹಾಸಿನಿ ಪಾತ್ರದಲ್ಲಿ ಬೋಲ್ಡ್ ಲುಕ್, ಬಾಡಿ ಲ್ಯಾಂಗ್ವೇಜ್, ಪವರ್‌ಫುಲ್ ಡೈಲಾಗ್ಸ್ ಮೂಲಕ ಇಂಟರ್ವಲ್‌ವರೆಗೂ ಕಥೆ ಹಿಡಿದಿಟ್ಟುಕೊಳ್ಳುತ್ತಾರೆ.

A ಸರ್ಟಿಫಿಕೇಟ್ ಷಡ್ಯಂತ್ರ..? ಸೆನ್ಸರ್ ವಿರುದ್ಧ ಝೈದ್ ಕಿಡಿ
ಎಲ್ಲೆಡೆ ಹೌಸ್‌ಫುಲ್.. ಝೈದ್ ಪಕ್ಕಾ ಸ್ಟಾರ್ ಮೆಟೀರಿಯಲ್
Genz ಲವ್, ಸಿಚ್ಯುವೇಷನ್‌ಶಿಪ್, ಲಿವಿಂಗ್ ಇನ್ ರಿಲೇಶನ್‌ಶಿಪ್, ಲವ್ ಬಾಂಬಿಂಗ್… ಇವೆಲ್ಲವೂ ಈಗಿನ ಲವ್ ಟ್ರೆಂಡ್ ಪದಗಳು. ಆದರೆ ಆ ಮಧುರ ಪದಗಳ ಹಿಂದೆ ನಡೆಯುವ ದೋಖಾ, ಮನಸ್ಸು ಒಡೆದಾಗ ಆಗುವ ಮನೋವ್ಯಥೆ ಇವನ್ನೇ ಕಥೆ ಎತ್ತಿಹಿಡಿಯುತ್ತದೆ. ಸಂಬಂಧವಿಲ್ಲದ ಪ್ರೀತಿ ಅಂದ್ರೆ ಏನು? ಅಟ್ಯಾಚ್‌ಮೆಂಟ್ ಮತ್ತು ಅಸಲಿ ಲವ್ ನಡುವಿನ ಅಂತರ ಎಷ್ಟು ? ಈ ಪ್ರಶ್ನೆಗಳಿಗೆ ಸಿನಿಮಾ ತನ್ನ ಸ್ಟೈಲ್‌ನಲ್ಲಿ ಉತ್ತರ ಕೊಡುತ್ತೆ. ಕೆಲ ಕಡೆ ಡೈಲಾಗ್ಸ್ ನೇರವಾಗಿ ಹೃದಯಕ್ಕೆ ಹೊಡೆದಂತಾಗುತ್ತದೆ.

ಪ್ರೀತಿ ಅಂದ್ರೆ ಸ್ವರ್ಗನಾ…? ಇಲ್ಲ ನರಕನಾ…? ಲವ್ ಅಂದ್ರೆ ಲೈಫ್ ಅಂತೆ ಹೇಳ್ತಾರೆ… ಆದ್ರೆ ಬ್ರೇಕಪ್ ಆದ್ಮೇಲೆ ಅದೇ ಲವ್ ಜೀವವನ್ನೇ ಸುಟ್ಟುಹಾಕುತ್ತೆ. ಇಂದಿನ GenZ ಲವ್, ಸಿಚ್ಯುವೇಷನ್‌ಶಿಪ್ ಟ್ರೆಂಡ್ ಮಧ್ಯೆ ಪ್ಯೂರ್ ಲವ್ ಅಂದ್ರೆ ಏನು..?ಭಗ್ನ ಹೃದಯಗಳಿಗೆ ಕಲ್ಟ್ ಸಿನಿಮಾ ಎಷ್ಟು ಕನೆಕ್ಟ್ ಆಗುತ್ತೆ ಅನ್ನೋದನ್ನ ಪ್ರೇಕ್ಷಕಪ್ರಭುಗಳೇ ಹೇಳಿದ್ದಾರೆ.

ಮ್ಯಾಡಿ ಪಾತ್ರದಲ್ಲಿ ಝೈದ್ ಪಬ್‌ಗೆ ಬೆತ್ತಲಾಗಿ ಎಂಟ್ರಿ ಕೊಡುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ. ಇದು ಬೇಕಿತ್ತಾ ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಬಹುದು. ಆದರೆ ಅದಕ್ಕೂ ನಿರ್ದೇಶಕ ಸಣ್ಣ ಟ್ವಿಸ್ಟ್ ಇಟ್ಟಿದ್ದಾರೆ. ಸೀನ್ ಕೇವಲ ಶಾಕ್ ವ್ಯಾಲ್ಯೂಗಾಗಿ ಅಲ್ಲ, ಪಾತ್ರದ ಮನಸ್ಥಿತಿಯ ಎಕ್ಸ್‌ಪ್ರೆಷನ್ ಆಗಿ ಬಳಸಲಾಗಿದೆ ಅನ್ನಿಸಬಹುದು. ರಚಿತಾ ರಾಮ್ ಅವರ ಪಾತ್ರ ಬೋಲ್ಡ್ ಆಗಿದ್ದರೂ ಅದರಲ್ಲಿ ಪ್ರಬುದ್ಧತೆಯೂ ಇದೆ. ಡಬ್ಬಿಂಗ್ ವೇಳೆ 8 ನಿಮಿಷ ಕಣ್ಣೀರು ಹಾಕಿದ್ರು ಅನ್ನೋ ನಿರ್ದೇಶಕರ ಮಾತು ಪಾತ್ರದ ತೀವ್ರತೆಯನ್ನು ತೋರಿಸುತ್ತದೆ. ಇನ್ನೊಂದೆಡೆ ಸೆನ್ಸರ್ ಮಂಡಳಿ ನೀಡಿದ A ಸರ್ಟಿಫಿಕೆಟ್ ವಿರುದ್ಧ ಝೈದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. A ಕೊಡುವಂಥ ಸೀನ್, ಡೈಲಾಗ್ಸ್ ಇಲ್ಲ ಎಂದು ಷಡ್ಯಂತ್ರ ರಾಜಕೀಯ ಆರೋಪ ಮಾಡಿದ್ದಾರೆ.

ಒಟ್ಟಾರೆ ಕಲ್ಟ್ ಕೇವಲ ಲವ್ ಸ್ಟೋರಿ ಅಲ್ಲ… ಬ್ರೇಕಪ್ ನೋವಿನಿಂದ ಹೊರಬರಲು ಹೋರಾಡುವ ಹೃದಯಗಳ ಕಥೆ. ಮೂವ್ ಆನ್ ಆಗೋದು ಸುಲಭವಲ್ಲ ಅನ್ನೋವರಿಗೆ 2 ಗಂಟೆ 43 ನಿಮಿಷದ ಈ ಸಿನಿಮಾ ಒಂದು ಇಮೋಷನಲ್ ರೈಡ್. ಕೆಲವೊಂದು ಸೀನ್ಸ್ ಓವರ್ ಅನಿಸಬಹುದು, ಆದರೆ ಭಗ್ನ ಪ್ರೇಮಿಯ ಹೃದಯದ ಧ್ವನಿ ಕೇಳಲು ಸಿದ್ಧರಾಗಿದ್ದರೆ ಕಲ್ಟ್ ಸಿನಿಮಾ ನಿಮಗೆ ಕನೆಕ್ಟ್ ಆಗುತ್ತೆ .





