ತಲೈವಾ ರಜನೀಕಾಂತ್ ನಟನೆಯ 171ನೇ ಸಿನಿಮಾ ಕೂಲಿ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕಾಲಿವುಡ್‌ನಿಂದ ಬಾಲಿವುಡ್‌ವರೆಗೂ ಸ್ಟಾರ್‌ಗಳ ಮಹಾಸಂಗಮಕ್ಕೆ ಸಾಕ್ಷಿಯಾಗಿರೋ ಕೂಲಿ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ. ಇದೀಗ ಪವರ್ ಹೌಸ್ ಸಾಂಗ್ ರಿಲೀಸ್ ಆಗಿದ್ದು, ತಲೈವಾ ತಾಂಡವಂ ಸಖತ್ ಕಿಕ್ ಕೊಡ್ತಿದೆ.
- ‘ಕೂಲಿ’ ಪವರ್ ಹೌಸ್ ರಿವೀಲ್.. ತಲೈವಾ ತಾಂಡವಂ
- ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮೂವಿಯಲ್ಲಿ ಸ್ಟಾರ್ಸ್ ಸಮಾಗಮ
- ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ವೈಟ್ ಕಾಲರ್ v/s ಬ್ಲ್ಯಾಕ್ ಕಾಲರ್
- ಆ-14ಕ್ಕೆ ಲೋಕೇಶ್ ಕನಕರಾಜ್ ಆ್ಯಕ್ಷನ್ ಥ್ರಿಲ್ಲರ್ ತೆರೆಗೆ..!
ಕೂಲಿ, ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ 171ನೇ ಸಿನಿಮಾ. ಮಾಸ್ ಹಾಗೂ ಸಕ್ಸಸ್‌ಫುಲ್ ಸಿನಿಮಾಗಳ ಸರದಾರ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಯಾರಾಗಿರೋ ಚಿತ್ರ. ಕಾಲಿವುಡ್‌ನಿಂದ ಬಾಲಿವುಡ್‌ವರೆಗೆ ಬಹುಭಾಷಾ ಸೂಪರ್ ಸ್ಟಾರ್‌ಗಳ ಸಮಾಗಮಕ್ಕೆ ಸಾಕ್ಷಿ ಆಗ್ತಿರೋ ಆ್ಯಕ್ಷನ್ ಥ್ರಿಲ್ಲರ್ ಎಂಟರ್‌ಟೈನರ್.
ಹೌದು, ತಲೈವಾ ರಜನೀಕಾಂತ್ ಜೊತೆ ನಮ್ಮ ಉಪೇಂದ್ರ, ನಾಗಾರ್ಜುನ್, ಆಮೀರ್ ಖಾನ್, ರಚಿತಾ ರಾಮ್ ಹೀಗೆ ಸ್ಟಾರ್‌ಗಳ ಮಹಾಸಂಗಮವೇ ಆಗಿದೆ. ಈಗಾಗ್ಲೇ ಮೇಕಿಂಗ್ ಟೀಸರ್ ಹಾಗೂ ಕ್ಯಾರೆಕ್ಟರ್ಸ್ ಟೀಸರ್‌ಗಳಿಂದ ಕೂಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕೀಗ ಅನಿರುದ್ದ್ ರವಿಚಂದರ್ ಸಂಗೀತ ಸಂಯೋಜನೆಯ ಒಂದೊಂದೇ ಸಾಂಗ್‌ಗಳು ಸಾಥ್ ಕೊಡ್ತಿವೆ.
ಕೂಲಿ ಡಿಸ್ಕೋ, ಚಿಕೀತು, ಮೋನಿಕಾ ಹಾಡುಗಳಿಂದ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಪವರ್ ಹೌಸ್ ಸಾಂಗ್ ಕೂಡ ರಿಲೀಸ್ ಆಗಿದೆ. ರಜನೀಕಾಂತ್ ಅವರೇ ಒಂಥರಾ ಪವರ್ ಹೌಸ್ ಅಂಥದ್ರಲ್ಲಿ ಕೂಲಿಗಳ ಪವರ್ ಹೌಸ್ ಆದ್ರೆ ಹೇಗಿರುತ್ತೆ ಅಲ್ವಾ..? ಹೈ ವೋಲ್ಟೇಜ್ ಮಾಸ್ ಕಿಕ್ ಕೊಡ್ತಿರೋ ಈ ಹಾಡಿನಲ್ಲಿ ಸಾಹಿತ್ಯ, ಮ್ಯೂಸಿಕಲ್ ಬೀಟ್ಸ್ ಎಲ್ಲವೂ ಸ್ಪೆಷಲ್ ಅನಿಸಿದೆ.
ಅರಿವು ಸಾಹಿತ್ಯ ಪೋಣಿಸಿರೋ ಈ ಹಾಡಿಗೆ ಅನಿರುದ್ದ್ ಸಂಗೀತ ಹಾಗೂ ಅನಿರುದ್ದ್-ಅರಿವು ಗಾಯನವಿದೆ. ಇತ್ತೀಚೆಗೆ ಬಂದ ಮೋನಿಕಾ ಸಾಂಗ್ ಪೂಜಾ ಹೆಗ್ಡೆಯಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಇದೀಗ ಮಾಸ್‌ಪ್ರಿಯರ ಕಣ್ಮನ ತಣಿಸೋ ಕಾರ್ಯ ಮಾಡಿದ್ದಾರೆ ತಲೈವಾ ರಜನೀಕಾಂತ್. ನೋಡೋಕೆ ಇದೊಂಥರಾ ವೈಟ್ ಕಾಲರ್ ವರ್ಸಸ್ ಬ್ಲಾಕ್ ಕಾಲರ್ ಟಗ್ ಆಫ್ ವಾರ್‌ನಂತಿದೆ. ಇಲ್ಲಿ ಕೂಲಿಗಳ ಪರ ರಜನಿ ನಿಲ್ಲುವ ಗ್ಯಾಂಗ್ ಲೀಡರ್ ಆಗಿ ಕಾಣಸಿಗಲಿದ್ದಾರೆ. 350 ರಿಂದ 400 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾಗಿರೋ ಈ ಸಿನಿಮಾ ಇದೇ ಆಗಸ್ಟ್ 14ರಂದು ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ.