ಹುಣಸೆ ಮರ ಮುಪ್ಪಾದ್ರೂ ಹುಳಿ ಕಮ್ಮಿ ಆಗಲ್ಲ ಅನ್ನೋ ಮಾತಿನಂತೆ ರಜನೀಕಾಂತ್‌ಗೆ ಎಷ್ಟೇ ವಯಸ್ಸಾದ್ರೂ ಅವ್ರ ಸಿನಿಮಾಗಳ ಕ್ರೇಜ್ ಕಿಂಚಿತ್ತೂ ಇಳಿದಿಲ್ಲ. ತಲೈವಾ 171ನೇ ಸಿನಿಮಾ ಕೂಲಿ ರಿಲೀಸ್‌ಗೆ ಸಜ್ಜಾಗ್ತಿದೆ. ಈ ಬಾರಿ ವರ್ಲ್ಡ್ ವೈಡ್ ಬರೋಬ್ಬರಿ 7 ಸಾವಿರ ಸ್ಕ್ರೀನ್ಸ್‌ನಲ್ಲಿ ಕೂಲಿಯನ್ನ ಬಿಡುಗಡೆ ಮಾಡ್ತಿದೆ ಚಿತ್ರತಂಡ. ಈ ಕುರಿತ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ.
ಕೂಲಿ ಮಿಡಲ್ ಕ್ಲಾಸ್ ಫ್ಯಾಮಿಲಿಗಳಿಗೆ ಕನೆಕ್ಟ್ ಆಗುವ ಹಾಗೂ ಶ್ರೀಸಾಮಾನ್ಯನ ಬದುಕು, ಬವಣೆಗೆ ಹತ್ತಿರ ಅನಿಸೋ ಟೈಟಲ್. ಸದ್ಯ ಸೂಪರ್ ಸ್ಟಾರ್ ರಜನೀಕಾಂತ್ ಕೂಲಿ ಸಿನಿಮಾ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿ ಆಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಕೂಲಿ ಸ್ಯಾಂಪಲ್ಸ್‌ನಿಂದ ಹಲ್‌ಚಲ್ ಎಬ್ಬಿಸುತ್ತಿದೆ.
ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ತಯಾರಾಗಿರೋ ಕೂಲಿ ಸಿನಿಮಾ ಇದೇ ಆಗಸ್ಟ್ 14ಕ್ಕೆ ವರ್ಲ್ಡ್ ವೈಡ್ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗ್ತಿದೆ. ಬಹುಭಾಷೆಯಲ್ಲಿ ತಯಾರಾಗಿರೋ ಈ ಪ್ಯಾನ್ ಇಂಡಿಯಾ ಸಿನಿಮಾ ಈ ಬಾರಿ ಬರೋಬ್ಬರಿ ಏಳು ಸಾವಿರ ಸ್ಕ್ರೀನ್ಸ್‌ನಲ್ಲಿ ರಿಲೀಸ್ ಆಗ್ತಿರೋದು ಇಂಟರೆಸ್ಟಿಂಗ್. ರಜನೀಕಾಂತ್‌ರ ಯಾವುದೇ ಸಿನಿಮಾ ಬಂದ್ರು ಫ್ಯಾನ್ಸ್‌ಗೆ ಹಬ್ಬ. ಅದ್ರಲ್ಲೂ ಇತ್ತೀಚೆಗೆ ಯಂಗ್‌ಸ್ಟರ್‌ಗಳಿಗೆ ಸೆಡ್ಡು ಹೊಡೆಯುವ ರೇಂಜ್‌ಗೆ ತಲೈವಾ ಬಾಕ್ಸ್ ಆಫೀಸ್ ಬಾಸ್ ಆಗಿದ್ದಾರೆ. ಹೀಗಾಗಿ ಸಹಜವಾಗಿಯೇ ರಜನಿಯ ಕೂಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಇನ್ನು ಇದು ಸೌತ್ ಸಿನಿದುನಿಯಾದ ಬಿಗ್ಗೆಸ್ಟ್ ಮಲ್ಟಿ ಸ್ಟಾರ್. ರಜನೀಕಾಂತ್ ಜೊತೆ ನಮ್ಮ ಕನ್ನಡದ ಉಪೇಂದ್ರ, ತೆಲುಗಿನ ನಾಗಾರ್ಜುನ್ ಹಾಗೂ ಬಾಲಿವುಡ್‌ನ ಆಮೀರ್ ಖಾನ್ ನಟಿಸಿದ್ದಾರೆ. ಇವರಲ್ಲಿ ತಲೈವಾ ಎದುರು ತೊಡೆ ತಟ್ಟಿ ನಿಲ್ಲುವ ಖಡಕ್ ಖಳನಾಯಕ ಯಾರು ಅನ್ನೋದೇ ಇಲ್ಲಿವರೆಗೂ ಸಸ್ಪೆನ್ಸ್. ಆದ್ರೆ ಒಬ್ಬೊಬ್ಬರು ಒಂದೊಂದು ತರಹದ ವೆಪನ್ ಹಿಡಿದು ಕಿಕ್ ಕೊಡ್ತಿದ್ದಾರೆ.
ಅನಿರುದ್ದ್ ರವಿಚಂದರ್ ಸಂಗೀತ ಸಂಯೋಜನೆಯ ಸಾಂಗ್ಸ್ ಎಲ್ಲರೂ ಗುನುಗುವಂತಾಗಿದ್ದು, ಮೋನಿಕಾ ಸಾಂಗ್‌ನಿಂದ ಪೂಜಾ ಹೆಗ್ಡೆ ಸಿನಿಮಾದ ಕ್ರೇಜ್‌ನ ಮತ್ತಷ್ಟು ಹೆಚ್ಚಿಸಿದ್ದಾರೆ. ಅಲ್ಲದೆ ಕಮಲ್ ಪುತ್ರಿ ಶ್ರುತಿ ಹಾಸನ್ ಕೂಡ ಚಿತ್ರದ ತಾರಾಗಣದಲ್ಲಿರೋದು ಇಂಟರೆಸ್ಟಿಂಗ್. ಕೂಲಿ ಪವರ್ ಹೌಸ್, ಬಾಕ್ಸ್ ಆಫೀಸ್ ಪವರ್ ಹೌಸ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ ಅಂತಿದ್ದಾರೆ ಸಿನಿ ಪಂಡಿತರು.