ಕಾಲೇಜು ಲವ್ ಸ್ಟೋರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ, ಆದರೇ ಈ ಸಿನೇಮಾ, ಟೈಟಲ್ ನಲ್ಲಿಯೇ ಗಮನ ಸೆಳೆಯುತ್ತಿದೆ. ಅದುವೇ ‘ಕಾಲೇಜ್ ಕಲಾವಿದ’. ಪ್ರತಿ ಕಾಲೇಜಿನಲ್ಲೂ ಕಲಾವಿದರು ಇದ್ದೆ ಇರುತ್ತಾರೆ. ಈ ಸಿನಿಮಾ ಮೂಲಕ ಕಾಲೇಜ್ ನಲ್ಲಿ ಕಲಾವಿದ ಹೇಗೆ ಹೊರಬರಲಿದ್ದಾನೆ ಎಂಬುದನ್ನ ನೋಡಬೇಕಿದೆ. ಸದ್ಯ ರಿಲೀಸ್ ಗೆ ರೆಡಿಯಾಗಿರೋ ಈ ಸಿನಿಮಾದಿಂದ ಎರಡು ಹಾಡು “ಆನಂದ್ ಆಡಿಯೋ”ನಲ್ಲಿ ರಿಲೀಸ್ ಆಗಿದೆ.
ನಮ್ಮ ಕನ್ನಡದ ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಅವರು “ಸಿಂಗಾರ ನೀನೆ” ಹಾಡನ್ನ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಾಡು ಸದ್ಯ ಆನಂದ್ ಆಡಿಯೋದಲ್ಲಿ ಲಭ್ಯವಿದೆ. ಕಾಲೇಜ್ ಕಲಾವಿದ ಸಿನಿಮಾದ ಹಾಡುಗಳ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಹಾಗೂ ” ಹೊಂಟಾಯ್ತು ಹಮ್ಮೀರಾ “ಎಂಬ ಎರಡನೇ ಹಾಡನ್ನು ಭಾರತೀಯ ಚಿತ್ರರಂಗದಲ್ಲೇ ಮೊದಲನೇ ಭಾರಿಗೆ ವಿಭಿನ್ನವಾಗಿ, ಬೈಕ್ ಲಾಗರ್ಸ್ ರವರಿಂದ ಬಿಡುಗಡೆ ಮಾಡಿಸಿದ್ದು, ಮಾನ್ಸೂನ್ ಸೀಸನ್ ಗೆ ಈ ಹಾಡು ಹೇಳಿ ಮಾಡಿಸಿದ ಹಾಗಿದೆ. ಕಾಲೇಜ್ ಕಲಾವಿದ ಸಿನೇಮಾವನ್ನು “ಸಂಜಯ್ ಮಳವಳ್ಳಿ” ಬರೆದು ನಿರ್ದೇಶನ ಮಾಡಿದ್ದಾರೆ.