ಸಲಗ & ಭೀಮ ಬಳಿಕ ದುನಿಯಾ ವಿಜಯ್ ಮತ್ತೊಂದು ಸಿನಿಮಾದ ನಿರ್ದೇಶನಕ್ಕೆ ಕೈ ಹಾಕಿರೋದು ಗೊತ್ತೇಯಿದೆ. ಸಿಟಿಲೈಟ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದ್ದು, ಮಗಳು ಮೋನಿಷಾಳನ್ನ ಈ ಚಿತ್ರದ ಮೂಲಕ ಹೀರೋಯಿನ್ ಆಗಿ ಲಾಂಚ್ ಮಾಡ್ತಿದ್ದಾರೆ ಸ್ಯಾಂಡಲ್‌ವುಡ್ ಭೀಮ. ಲೇಟೆಸ್ಟ್ ಮೇಕಿಂಗ್ ಝಲಕ್ ಜೊತೆ ಚಿತ್ರದ ಹೈಲೈಟ್ಸ್ ನಿಮ್ಮ ಮುಂದೆ.
ಇದು ಸಿಟಿಲೈಟ್ಸ್ ಚಿತ್ರದ ಹೊಚ್ಚ ಹೊಸ ಮೇಕಿಂಗ್ ಝಲಕ್. ದೊಡ್ಮನೆಯ ಸ್ಟಾರ್ ವಿನಯ್ ರಾಜ್‌ಕುಮಾರ್ ನಾಯಕನಟನಾಗಿ ನಟಿಸ್ತಿರೋ ಭಿನ್ನ ಅಲೆಯ ಸಿನಿಮಾ ಇದಾಗಿದ್ದು, ದುನಿಯಾ ವಿಜಯ್ ಇದಕ್ಕೆ ಆ್ಯಕ್ಷನ್ ಕಟ್ ಹೇಳ್ತಿರೋದು ವಿಶೇಷ. ಸಲಗ ಹಾಗೂ ಭೀಮ ಚಿತ್ರಗಳ ನಂತ್ರ ಫಸ್ಟ್ ಟೈಂ ಬೇರೆ ಸ್ಟಾರ್‌ಗೆ ವಿಜಯ್ ಕುಮಾರ್ ನಿರ್ದೇಶನ ಮಾಡ್ತಿರೋದು ಇದೇ ಮೊದಲು.
‘ಸಿಟಿಲೈಟ್ಸ್’ ದುನಿಯಾದಲ್ಲಿ ಮೋನಿಷಾ-ವಿನಯ್ ಹೊಳಪು..!
ದೊಡ್ಮನೆ ಹುಡ್ಗನಿಗೆ ವಿಜಯ್ ಆ್ಯಕ್ಷನ್ ಕಟ್.. ಮೇಕಿಂಗ್ ಔಟ್
ಈ ಸಿಟಿಲೈಟ್ಸ್ ಚಿತ್ರದ ಮತ್ತೊಂದು ಹೈಲೈಟ್ ನಾಯಕನಟಿ ಮೋನಿಷಾ ವಿಜಯ್. ಹೌದು.. ತಮ್ಮ ಮತ್ತೊಬ್ಬ ಮಗಳು ಮೋನಿಷಾರನ್ನ ಈ ಸಿನಿಮಾದಿಂದ ಹೀರೋಯಿನ್ ಮಾಡ್ತಿದ್ದಾರೆ ದುನಿಯಾ ವಿಜಯ್. ಶಿವಸೇನಾ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಇನ್ನೊಂದು ಶೆಡ್ಯೂಲ್ ಶೂಟಿಂಗ್ ಮುಗಿದ್ರೆ ಸಿನಿಮಾ ಕಂಪ್ಲೀಟ್ ಆಗಲಿದೆಯಂತೆ.
ಹೀರೋ ಹಾಗೂ ಹೀರೋಯಿನ್ ಇಂಟ್ರಡಕ್ಷನ್ ಟೀಸರ್‌ಗಳು ಈಗಾಗ್ಲೇ ಭರವಸೆ ಮೂಡಿಸಿದ್ದವು. ದುನಿಯಾ ವಿಜಯ್ ಈ ಪಾತ್ರಗಳನ್ನ ಬಹಳ ಡಿಫರೆಂಟ್ ಆಗಿ ಪ್ಲ್ಯಾನ್ ಮಾಡಿ ಕಥೆ ಹೆಣೆದು, ಸಿನಿಮಾ ಮಾಡ್ತಿದ್ದಾರೆ. ಬಹಳ ಸ್ವಾಭಾವಿಕ ಹಾಗೂ ಸಹಜತೆಯಿಂದ ಕೂಡಿರೋ ಈ ಪಾತ್ರಗಳಿಂದ ಸಿನಿಮಾ ಕೂಡ ಅದೇ ಫ್ಲೇವರ್‌ನಲ್ಲಿರಲಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ.
ಟಿಪಿಕಲ್ ವಿಜಯ್ ಸಿನಿಮಾ.. ಸಿನಿಮೋತ್ಸಾಹಕ್ಕೆ c/o ಅಡ್ರೆಸ್
ತೆಲುಗು, ತಮಿಳಲ್ಲಿ ಬ್ಯುಸಿ.. ಲ್ಯಾಂಡ್‌ಲಾರ್ಡ್ ಟೀಸರ್ ದಾಖಲೆ
ನಯನತಾರಾ ಜೊತೆ ತಮಿಳು ಸಿನಿಮಾ, ವಿಜಯ್ ಸೇತುಪತಿಯೊಂದಿಗೆ ಪೂರಿ ಜಗನ್ನಾಥ್ ನಿರ್ದೇಶನದ ತೆಲುಗು ಸಿನಿಮಾಗಳ ಬ್ಯುಸಿ ಶೆಡ್ಯೂಲ್ ನಡುವೆ ದುನಿಯಾ ವಿಜಯ್ ಸಿಟಿಲೈಟ್ಸ್ ಕೂಡ ಫಟಾಫಟ್ ಅಂತ ಮುಗಿಸ್ತಿರೋದು ಇಂಟರೆಸ್ಟಿಂಗ್. ಇದಲ್ಲದೆ, ಇತ್ತೀಚೆಗೆ ಲ್ಯಾಂಡ್‌ಲಾರ್ಡ್ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಕೋಟಿ ವೀವ್ಸ್ ಮೂಲಕ ಆ ಟೀಸರ್ ದಾಖಲೆ ಬರೆದಿದ್ದು, ರೆಬೆಲಿಯನ್ ಆಗಿ ದುನಿಯಾ ವಿಜಯ್ ಮಿಂಚು ಹರಿಸಿದ್ದಾರೆ.
ಇಷ್ಟೆಲ್ಲಾ ಬ್ಯುಸಿ ನಡುವೆ ಅವರು ನಟನೆ, ನಿರ್ದೇಶನ, ನಿರ್ಮಾಣಕ್ಕಾಗಿ ಸಮಯ, ಹಣ ಹಾಗೂ ತನ್ನನ್ನ ತಾನು ಅರ್ಪಿಸಿಕೊಳ್ತಿರೋ ವಿಧಾನವನ್ನು ನಿಜಕ್ಕೂ ಮೆಚ್ಚಲೇಬೇಕು. ಇದು ಅವರ ಸಿನಿಮೋತ್ಸಾಹದ ಕೈಗನ್ನಡಿಯೂ ಹೌದು. ನಿದ್ದೆಯಲ್ಲೂ ಸಿನಿಮಾವನ್ನೇ ಕನಸು ಕಾಣೋ ವಿಜಯ್, ಸದ್ಯ ವಿಜಯದ ಪರ್ವದಲ್ಲಿ ಮುನ್ನುಗ್ಗಿದ್ದಾರೆ. ಇದು ಇತರೇ ಸ್ಟಾರ್ಸ್‌ಗೂ ಸಹ ಒಂಥರಾ ಇನ್ಸ್‌ಪಿರೇಷನ್ ಅಂದ್ರೆ ತಪ್ಪಾಗಲ್ಲ.





