ಮೆಗಾಸ್ಟಾರ್ ಚಿರಂಜೀವಿ ಹೆಸರು ದುರ್ಬಳಕೆ ಮಾಡಿದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ. ಹೀಗೊಂದು ಅಧಿಕೃತ ಕೋರ್ಟ್ ಆರ್ಡರ್ ಹೊರಬಂದಿದ್ದು, ಅದು ಆಂಧ್ರ-ತೆಲಂಗಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಬಾಲಯ್ಯ ಮಾಡಿದ ಎಡವಟ್ ಎಲ್ಲರಿಗೂ ಬಂತಾ ಆಪತ್ತು ಅನ್ನೋದ್ರ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.
ಮೆಗಾಸ್ಟಾರ್ ಚಿರಂಜೀವಿ.. ಇದು ಬರೀ ವ್ಯಕ್ತಿಯ ಹೆಸರಲ್ಲ. ತೆಲುಗು ನಾಡು ಆಂಧ್ರದ ಅಸ್ಮಿತೆ. ಹೌದು.. ಸಿನಿಮಾ ಹಾಗೂ ರಾಜಕಾರಣದಲ್ಲಿ ಬಹುದೊಡ್ಡ ಛಾಪು ಮೂಡಿಸಿರೋ ಚಿರಂಜೀವಿ, ಆಂಧ್ರದ ಶಕ್ತಿ ಅಂದ್ರೆ ತಪ್ಪಾಗಲ್ಲ. ಮಗ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆದ್ರೂ ಸಹ, 70ರ ಹರೆಯದಲ್ಲೂ ಅದೇ ಸಿನಿಮೋತ್ಸಾಹ, ಅದೇ ಜೀವನೋತ್ಸಾಹ.
ಇನ್ಮೇಲೆ ಚಿರಂಜೀವಿ ಹೆಸ್ರು ಬಳಸಿದ್ರೆ ಕ್ರಿಮಿನಲ್ ಕೇಸ್ ಫಿಕ್ಸ್
ಬಾಲಯ್ಯ ಮಾಡಿದ ಎಡವಟ್.. ಆಂಧ್ರಕ್ಕೆ ಬಂತಾ ಆಪತ್ತು..?!
150 ಕ್ಕೂ ಅಧಿಕ ಸಿನಿಮಾಗಳನ್ನ ಮಾಡಿರೋ ಮೆಗಾಸ್ಟಾರ್, ತನ್ನ ಡ್ಯಾನ್ಸ್ ಮೂವ್ಮೆಂಟ್ಸ್‌ಗಾಗಿ ಗಿನ್ನಿಸ್ ರೆಕಾರ್ಡ್ ಕೂಡ ಮಾಡಿದ್ದಾರೆ. ಅಲ್ಲದೆ ಪ್ರಜಾರಾಜ್ಯಂ ಅನ್ನೋ ಪಾರ್ಟಿ ಪಟ್ಟಿ, ಎಂಎಲ್‌ಎ, ರಾಜ್ಯಸಭಾ ಸದಸ್ಯ, ಅಷ್ಟೇ ಯಾಕೆ ಕೇಂದ್ರ ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವ್ರ ಸಹೋದರ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ.
ಪದ್ಮ ಭೂಷಣ, ಪದ್ಮ ವಿಭೂಷಣ ಗೌರವಗಳಿಗೂ ಪಾತ್ರರಾಗಿರೋ ಚಿರಂಜೀವಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಅವರನ್ನೇ ಸ್ಫೂರ್ತಿಯಾಗಿಸಿಕೊಂಡು ಚಿತ್ರರಂಗಕ್ಕೆ ಬಂದ ಕಲಾವಿದರು, ತಂತ್ರಜ್ಞರಿದ್ದಾರೆ. ಹೀಗಿರುವಾಗ ಅವ್ರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನ ನೀಡಿ, ಕೆಟ್ಟದಾಗಿ ಟ್ರೋಲ್ಸ್, ಮೀಮ್ಸ್ ಮಾಡ್ತಾ ಮಾನಹಾನಿ ಮಾಡೋದು ಎಷ್ಟು ಸರಿ ನೀವೇ ಹೇಳಿ. ಅದ್ರಲ್ಲೂ ಬಾಲಕೃಷ್ಣ ಅಂತಹ ಲೆಜೆಂಡ್ ಎನ್‌ಟಿಆರ್ ಪುತ್ರನೇ ಚಿರು ಬಗ್ಗೆ ಅವಹೇಳನದ ಮಾತುಗಳನ್ನಾಡಿದ್ರು.
ಒಂದು ಅವಹೇಳನಕಾರಿ ಸ್ಟೇಟ್‌ಮೆಂಟ್.. ರಾಜಕೀಯ ರೂಪ
ಚಿರು ತೆಲುಗಿನ ಅಸ್ಮಿತೆ, ಪದ್ಮ ಗೌರವಗಳ ಪ್ರತೀಕ, ರೆಕಾರ್ಡ್ ವೀರ
ಅದು ಸ್ಟಾರ್ ವಾರ್, ಫ್ಯಾನ್ಸ್ ವಾರ್ ಜೊತೆ ರಾಜಕೀಯ ತಿರುವು ಕೂಡ ಪಡೆದಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ಕೋರ್ಟ್ ಮೊರೆ ಹೋಗಿದ್ರು ಚಿರಂಜೀವಿ. ಇದೀಗ ಕೋರ್ಟ್‌ನಿಂದ ಆರ್ಡರ್ ಪಾಸ್ ಆಗಿದ್ದು, ಇನ್ಮೇಲೆ ಯಾರಂದ್ರೆ ಅವರು ಚಿರು ಹೆಸರನ್ನ ದುರುಪಯೋಗ ಮಾಡುವಂತಿಲ್ಲ. ಅವ್ರ ಫೋಟೋ, ಹೆಸರನ್ನ ಕೂಡ ಅನುಮತಿ ಇಲ್ಲದೆ ಬಳಸುವಂತಿಲ್ಲ. ಹಾಗೇನಾದ್ರೂ ಬಳಸಿದ್ರೆ ಅವ್ರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದಂತೆ. ಹೀಗಂತ ಸ್ವತಃ ಕಮಿಷನರ್ ಅವರೇ ಕೋರ್ಟ್ ಆರ್ಡರ್‌ನ ಹೊರಬಿಟ್ಟಿದ್ದಾರೆ. ಒಟ್ಟಾರೆ ಬಾಲಯ್ಯ ಮಾಡಿದ ಎಡವಟ್‌ನಿಂದ ಇಡೀ ರಾಜ್ಯಕ್ಕೇ ವಿಪತ್ತು ಬಂದಂತಾಗಿದೆ.
 
			
 
					




 
                             
                             
                             
                            