ಮೆಗಾಸ್ಟಾರ್ ಚಿರಂಜೀವಿಗೆ ಇಂದು 70ನೇ ಬರ್ತ್ ಡೇ. ತಮ್ಮ ಡಿಸಿಎಂ ಆಗಿ, ಮಗ ಗ್ಲೋಬಲ್ ಸ್ಟಾರ್ ಆದ್ರೂ, ಕಿಂಚಿತ್ತೂ ಕಮ್ಮಿ ಆಗಿಲ್ಲ ಮೆಗಾಸ್ಟಾರ್ ಖದರ್. ಇಳಿವಯಸ್ಸಿನಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರೋ ಚಿರು ಮೆಗಾ ಲೈನಪ್ ಜೊತೆ ನಮ್ಮ ಕನ್ನಡ ಪ್ರೊಡಕ್ಷನ್ ಹೌಸ್ ಜೊತೆ ಅನೌನ್ಸ್ ಆಗಿರೋ ಬಿಗ್ಗೆಸ್ಟ್ ಎಂಟರ್‌ಟೈನರ್ ಬಗ್ಗೆಯೂ ಹೇಳ್ತೀವಿ ನೋಡಿ..
- ಕನ್ನಡ ಪ್ರೊಡಕ್ಷನ್ ಹೌಸ್‌ನಲ್ಲಿ ಚಿರು-ಬಾಬಿ ಮೆಗಾ ಕಾಂಬೋ
- 70ನೇ ಬರ್ತ್ ಡೇ ಸಂಭ್ರಮ.. ವಿಶ್ವಂಭರ ವಿಶ್ಯುವಲ್ ಟ್ರೀಟ್
- ತಮಿಳು, ಮಲಯಾಳಂ ನಂತ್ರ KVN ತೆಲುಗು ಪರ್ವ ಶುರು..!
- ಮಗ ಗ್ಲೋಬಲ್ ಸ್ಟಾರ್, ತಮ್ಮ DCM.. ತಗ್ಗಿಲ್ಲ ಮೆಗಾ ಖದರ್
ಯೆಸ್.. ಇದು ಮೆಗಾಸ್ಟಾರ್ ಚಿರಂಜೀವಿ ಬರ್ತ್ ಡೇ ವಿಶೇಷ ಲಾಂಚ್ ಆಗಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ವಿಶ್ವಂಭರ ಸಿನಿಮಾದ ಟೀಸರ್ ಝಲಕ್. ಔಟ್ ಅಂಡ್ ಔಟ್ ಆ್ಯಕ್ಷನ್ ಫ್ಯಾಂಟಸಿ ಎಂಟರ್‌ಟೈನರ್ ಆಗಿರೋ ವಿಶ್ವಂಭರ ಸಿಕ್ಕಾಪಟ್ಟೆ ತಡವಾಗ್ತಿದೆ. ಅದಕ್ಕೆ ಕಾರಣ ಸ್ಪೆಷಲ್ ವಿಶ್ಯುವಲ್ ಎಫೆಕ್ಟ್ಸ್. ಹೌದು.. ಅಂಜಿ ಸಿನಿಮಾದ ರೀತಿ ಅತೀವ ಗ್ರಾಫಿಕ್ಸ್‌ನಿಂದ ಕೂಡಿರೋ ಈ ಸಿನಿಮಾದ ಮೇಕಿಂಗ್ ತಡವಾಗ್ತಿದೆ. ಹಾಗಾಗಿ 2026ರ ಸಮ್ಮರ್‌ವರೆಗೂ ವಿಶ್ವಂಭರ ದರ್ಶನ ಇಲ್ಲ ಎಂದಿರೋ ಚಿರು, ಫ್ಯಾನ್ಸ್‌ಗೆ ಸೀಕ್ರೆಟ್ ಆಗಿ ರಿಲೀಸ್ ಡೇಟ್ ಲೀಕ್ ಮಾಡಿದ್ದಾರೆ.
ಕನ್ನಡದ ಆಶಿಕಾ ರಂಗನಾಥ್ ಹಾಗೂ ಭಜರಂಗಿ ಲೋಕಿ ಕೂಡ ವಿಶ್ವಂಭರ ಚಿತ್ರದಲ್ಲಿ ನಟಿಸ್ತಿದ್ದು, ವಸಿಷ್ಠ ನಿರ್ದೇಶನದಲ್ಲಿ ವಿಶಿಷ್ಟವಾಗಿ ಮೂಡಿಬರ್ತಿದೆ. ಇನ್ನು ಬರ್ತ್ ಡೇ ಪ್ರಯುಕ್ತ ಮೆಗಾ 157 ಚಿತ್ರದ ಒಂದು ಸಣ್ಣ ಟೀಸರ್, ಸಾಲು ಸಾಲು ಸಿನಿಮಾಗಳ ಪೋಸ್ಟರ್‌ಗಳು ರಿವೀಲ್ ಆಗಿವೆ. ಇವುಗಳ ನಡುವೆ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಅನಿಸಿದ್ದು ವಾಲ್ಟೈರ್ ವೀರಯ್ಯ ಚಿತ್ರದ ನಿರ್ದೇಶಕ ಬಾಬಿ ಜೊತೆಗಿನ ಮತ್ತೊಂದು ನ್ಯೂ ವೆಂಚರ್.
ಯೆಸ್.. ಮಾಸ್ ಮಹಾರಾಜ ರವಿತೇಜಾ ಹಾಗೂ ಚಿರಂಜೀವಿ ಕಾಂಬೋನಲ್ಲಿ ತಯಾರಾದ ವಾಲ್ಟೈರ್ ವೀರಯ್ಯ ಮೂವಿ 230ಕ್ಕೂ ಅಧಿಕ ಕೋಟಿ ರೂಪಾಯಿಗಳನ್ನ ಗಳಿಸೋ ಮೂಲಕ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಅದೇ ಕಾಂಬೋ ಮತ್ತೊಮ್ಮೆ ಜೊತೆಯಾಗ್ತಿದ್ದು, ಅದಕ್ಕೆ ನಮ್ಮ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಬಂಡವಾಳ ಹಾಕ್ತಿದೆ ಅನ್ನೋದೇ ಇಂಟರೆಸ್ಟಿಂಗ್. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಕೆ ವೆಂಕಟ್ ನಾರಾಯಣ್ ತಮಿಳಿನ ವಿಜಯ್, ಮಲಯಾಳಂನ ಬಾಲನ್ ಬಳಿಕ ಇದೀಗ ಟಾಲಿವುಡ್‌ನಲ್ಲೂ ಹೊಸತೊಂದು ಪರ್ವ ಶುರು ಮಾಡಿದ್ದಾರೆ.
ಸದ್ಯ ಯಶ್ ಜೊತೆ ಟಾಕ್ಸಿಕ್, ಧ್ರುವ-ಪ್ರೇಮ್ ಜೊತೆ ಕೆಡಿ, ದಳಪತಿ ವಿಜಯ್ ಜೊತೆ ಜನನಾಯಗನ್, ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ಬಾಲನ್ ಹೀಗೆ ಸಾಲು ಸಾಲು ಸಿನಿಮಾಗಳನ್ನ ನಿರ್ಮಾಣ ಮಾಡ್ತಿರೋ ಕೆವಿಎನ್ ಪ್ರೊಡಕ್ಷನ್ಸ್, ಹೊಂಬಾಳೆಯನ್ನ ಮೀರಿಸೋ ರೇಂಜ್‌ಗೆ ಪಕ್ಕದ ಟಾಲಿವುಡ್‌ಗೆ ಕಾಲಿಟ್ಟಿದೆ. ಇದೀಗ ಬಾಬಿ ನಿರ್ದೇಶನದಲ್ಲಿ ಚಿರಂಜೀವಿಗೆ ಮೆಗಾ ಪ್ರಾಜೆಕ್ಟ್ ಒಂದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ 70ರ ಹರೆಯದಲ್ಲೂ ಅದೇ ಜೀವನೋತ್ಸಾಹ. ಅದಕ್ಕಿಂತ ಮಿಗಿಲಾಗಿ ಅದೇ ಸಿನಿಮೋತ್ಸಾಹ. ಯಂಗ್‌ಸ್ಟರ್‌ಗಳು ಕೂಡ ಹುಬ್ಬೇರಿಸೋ ರೀತಿ ಡ್ಯಾನ್ಸ್ ಆ್ಯಂಡ್ ಫೈಟ್ಸ್ ಮಾಡ್ತಾರೆ. ಒಡಹುಟ್ಟಿದ ಸಹೋದರ ಪವನ್ ಕಲ್ಯಾಣ್ ಆಂಧ್ರಗೆ ಡಿಸಿಎಂ ಆದ್ರು. ಸ್ವಂತ ಮಗ ರಾಮ್ ಚರಣ್ ತೇಜಾ ಗ್ಲೋಬಲ್ ಸ್ಟಾರ್ ಆಗಿ ಇಂಡಿಯಾಗೆ ಆಸ್ಕರ್ ತಂದರು. ಆದಾಗ್ಯೂ ಸಿನಿಮಾರಂಗದಿಂದ ನಿವೃತ್ತಿ ಪಡೆಯದೆ ಅದೇ ಹಳೆಯ ಜೋಶ್‌ನಲ್ಲಿ ಕೆಲಸ ಮಾಡ್ತಿದ್ದಾರೆ ಚಿರು.
ಕನ್ನಡದ ಸಿಪಾಯಿ ಚಿತ್ರದಲ್ಲಿ ಕ್ರೇಜಿಸ್ಟಾರ್ ಜೊತೆ ಸ್ನೇಹದ ಮಹತ್ವ ಸಾರಿದ್ದ ಸ್ನೇಹಜೀವಿ ಮೆಗಾಸ್ಟಾರ್‌ಗೆ ಕನ್ನಡಿಗರಾದ ನಾವು ಕೂಡ ಶುಭ ಕೋರೋಣ. ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರು ಮತ್ತಷ್ಟು, ಮಗದಷ್ಟು ವರ್ಷಗಳ ಕಾಲ ಭಾರತೀಯ ಚಿತ್ರರಂಗದ ಲಿವಿಂಗ್ ಲೆಜೆಂಡ್ ಆಗಿ ರಾರಾಜಿಸಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್