ಕನ್ನಡ ಱಪರ್ ಚಂದನ್ ಶೆಟ್ಟಿ ಈಗಾಗ್ಲೇ ಒಳ್ಳೆಯ Rapper ಸಿಂಗರ್, ಸಂಗೀತ ಸಂಯೋಜಕ ಹಾಗೂ ಚಿತ್ರ ಸಾಹಿತಿಯಾಗಿ ಗುರ್ತಿಸಿಕೊಂಡಿದ್ದಾರೆ. ಹೀರೋ ಆಗಿಯೂ ಮಿಂಚುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಸ್ಪೆಷಲ್ ವಿಡಿಯೋ ಆಲ್ಬಮ್ ಸಾಂಗ್ ಮಾಡಿದ್ದಾರೆ. ಅದೇ ಗಾಂಜಿ.
ಉತ್ತರ ಕರ್ನಾಟಕದ ಜಾನಪದ ಗೀತೆಯೊಂದಕ್ಕೆ Rapper ಟಚ್ ನೀಡಿರೋ ಚಂದನ್ ಶೆಟ್ಟಿ, ಅದನ್ನ ಉತ್ತರ ಕರ್ನಾಟಕದಿಂದ ಪ್ರಪಂಚಕ್ಕೆ ಪಸರಿಸೋ ಕಾರ್ಯ ಮಾಡಿದ್ದಾರೆ. ಸುಮಾರು 9 ವರ್ಷಗಳ ಹಿಂದೆಯೇ ಈ ಹಾಡನ್ನ ಕಂಪೋಸ್ ಮಾಡಿದ್ದ ಚಂದನ್, ಮಿನಿಮಲಿಸ್ಟಿಕ್ ವಿಡಿಯೋ ಕಾನ್ಸೆಪ್ಟ್ನಡಿ ತಯಾರಿಸಿದ್ದಾರೆ. ಜಸ್ಟಿನ್ ಬೈಬರ್ ಸಾರಿ ಸಾಂಗ್ನಂತೆ ವೈಟ್ ಬ್ಯಾಕ್ಡ್ರಾಪ್ನಲ್ಲಿ ಈ ಗಾಂಜಿಯನ್ನ ಚಿತ್ರಿಸಲಾಗಿದೆ.
ದೇಶಾದ್ಯಂತ ವರ್ಚುವಲ್ ಆಡಿಷನ್ಸ್ ನಡೆಸಿ, ಮೂವರು ಕೊರಿಯೋಗ್ರಾಫರ್ಗಳು ಹಾಗೂ ಹತ್ತು ಮಂದಿ ಅದ್ಭುತ ಡ್ಯಾನ್ಸರ್ಗಳಿಂದ ಈ ಹಾಡು ತಯಾರಾಗಿದೆ. ಸುಹಾಸ್ ಸಿನಿಮಾಟೋಗ್ರಫಿ, ಧೀರಜ್ ಪೂಜಾರಿ ವಿಎಫ್ಎಕ್ಸ್ ಹಾಗೂ ಸಂಕಲನದ ಜೊತೆ ಗ್ರೀಷ್ಮಾ ಸಹ ನಿರ್ಮಾಣವಿದೆ. ಚಂದನ್ ಶೆಟ್ಟಿ ಕಂಪೋಸ್ ಮಾಡಿ, ಹಾಡಿ ನಿರ್ಮಾಣ ಮಾಡೋದ್ರ ಜೊತೆಗೆ ನಿರ್ದೇಶನ ಕೂಡ ಮಾಡಿರೋ ಈ ಕಲರ್ಫುಲ್ ಹಾಡು, ಚಿಟ್ಟೆಗಳ ಕಲರವದ ಫೀಲ್ ಕೊಡುತ್ತೆ. ಕಿವಿಗಳು ಇಂಪಾಗುವುದರ ಜೊತೆ ಕಣ್ಣಿಗೆ ಹಬ್ಬವೋ ಹಬ್ಬ.