Rapper ಚಂದನ್ ಶೆಟ್ಟಿಯ ಗಾಂಜಿ ಸಾಂಗ್ ನೋಡಿದ್ರಾ..?

ಬ್ಯೂಟಿಫುಲ್ ಬ್ಯೂಟೀಸ್..ಬಿಂದಾಸ್ ಸ್ಟೆಪ್ಸ್..ಕಣ್ಣಿಗೆ ಹಬ್ಬ

Web 2025 06 20t200910.859

ಕನ್ನಡ ಱಪರ್ ಚಂದನ್ ಶೆಟ್ಟಿ ಈಗಾಗ್ಲೇ ಒಳ್ಳೆಯ Rapper ಸಿಂಗರ್, ಸಂಗೀತ ಸಂಯೋಜಕ ಹಾಗೂ ಚಿತ್ರ ಸಾಹಿತಿಯಾಗಿ ಗುರ್ತಿಸಿಕೊಂಡಿದ್ದಾರೆ. ಹೀರೋ ಆಗಿಯೂ ಮಿಂಚುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಸ್ಪೆಷಲ್ ವಿಡಿಯೋ ಆಲ್ಬಮ್ ಸಾಂಗ್ ಮಾಡಿದ್ದಾರೆ. ಅದೇ ಗಾಂಜಿ.

ಉತ್ತರ ಕರ್ನಾಟಕದ ಜಾನಪದ ಗೀತೆಯೊಂದಕ್ಕೆ Rapper ಟಚ್ ನೀಡಿರೋ ಚಂದನ್ ಶೆಟ್ಟಿ, ಅದನ್ನ ಉತ್ತರ ಕರ್ನಾಟಕದಿಂದ ಪ್ರಪಂಚಕ್ಕೆ ಪಸರಿಸೋ ಕಾರ್ಯ ಮಾಡಿದ್ದಾರೆ. ಸುಮಾರು 9 ವರ್ಷಗಳ ಹಿಂದೆಯೇ ಈ ಹಾಡನ್ನ ಕಂಪೋಸ್ ಮಾಡಿದ್ದ ಚಂದನ್, ಮಿನಿಮಲಿಸ್ಟಿಕ್ ವಿಡಿಯೋ ಕಾನ್ಸೆಪ್ಟ್‌‌ನಡಿ ತಯಾರಿಸಿದ್ದಾರೆ. ಜಸ್ಟಿನ್ ಬೈಬರ್ ಸಾರಿ ಸಾಂಗ್‌ನಂತೆ ವೈಟ್ ಬ್ಯಾಕ್‌ಡ್ರಾಪ್‌ನಲ್ಲಿ ಈ ಗಾಂಜಿಯನ್ನ ಚಿತ್ರಿಸಲಾಗಿದೆ.

ADVERTISEMENT
ADVERTISEMENT

ದೇಶಾದ್ಯಂತ ವರ್ಚುವಲ್ ಆಡಿಷನ್ಸ್ ನಡೆಸಿ, ಮೂವರು ಕೊರಿಯೋಗ್ರಾಫರ್‌ಗಳು ಹಾಗೂ ಹತ್ತು ಮಂದಿ ಅದ್ಭುತ ಡ್ಯಾನ್ಸರ್‌‌ಗಳಿಂದ ಈ ಹಾಡು ತಯಾರಾಗಿದೆ. ಸುಹಾಸ್ ಸಿನಿಮಾಟೋಗ್ರಫಿ, ಧೀರಜ್ ಪೂಜಾರಿ ವಿಎಫ್‌ಎಕ್ಸ್ ಹಾಗೂ ಸಂಕಲನದ ಜೊತೆ ಗ್ರೀಷ್ಮಾ ಸಹ ನಿರ್ಮಾಣವಿದೆ. ಚಂದನ್ ಶೆಟ್ಟಿ ಕಂಪೋಸ್ ಮಾಡಿ, ಹಾಡಿ ನಿರ್ಮಾಣ ಮಾಡೋದ್ರ ಜೊತೆಗೆ ನಿರ್ದೇಶನ ಕೂಡ ಮಾಡಿರೋ ಈ ಕಲರ್‌‌ಫುಲ್ ಹಾಡು, ಚಿಟ್ಟೆಗಳ ಕಲರವದ ಫೀಲ್ ಕೊಡುತ್ತೆ. ಕಿವಿಗಳು  ಇಂಪಾಗುವುದರ ಜೊತೆ ಕಣ್ಣಿಗೆ ಹಬ್ಬವೋ ಹಬ್ಬ.

Exit mobile version