ಡೈನಮೈಟ್ ಹಾಡಿಗೆ 1 ಮಿಲಿಯನ್ ವೀಕ್ಷಣೆ: ಫ್ಯಾನ್ಸ್‌ಗೆ ಥ್ಯಾಂಕ್ಸ್ ಹೇಳಿದ ರ್ಯಾಪರ್ ಚಂದನ್ ಶೆಟ್ಟಿ

Untitled design 2026 04 28T082513.108

ಕನ್ನಡ ಸಂಗೀತ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡಿರುವ ರ್ಯಾಪರ್ ಚಂದನ್ ಶೆಟ್ಟಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಇಂಗ್ಲಿಷ್ ಮ್ಯೂಸಿಕ್ ವಿಡಿಯೋ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ‘I Am Dynamite’ ಎಂಬ ಹಾಡಿನ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಲು ಮುಂದಾಗಿದ್ದಾರೆ. ಈ ಹಾಡು ಬಿಡುಗಡೆಯಾದ ನಂತರ ಭಾರೀ ಪ್ರತಿಕ್ರಿಯೆ ಪಡೆದಿದ್ದು, ಈಗಾಗಲೇ ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಸಾಧನೆಯ ಹಿನ್ನೆಲೆ ಚಂದನ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಚಂದನ್ ತಮ್ಮ ಪೋಸ್ಟ್‌ನಲ್ಲಿ, “ಈ ಹಾಡನ್ನು ವೀಕ್ಷಿಸಿದ, ಹಂಚಿಕೊಂಡ, ಲೈಕ್ ಮಾಡಿದ ಮತ್ತು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ನನಗೆ ಬಹಳ ಮುಖ್ಯ. ಇದು ನನ್ನ ಹೊಸ ಪ್ರಯೋಗವಾಗಿತ್ತು ಮತ್ತು ಈ ಪ್ರತಿಕ್ರಿಯೆ ನನಗೆ ಇನ್ನಷ್ಟು ದೊಡ್ಡ ಗುರಿಗಳತ್ತ ಸಾಗಲು ಪ್ರೇರಣೆ ನೀಡಿದೆ” ಎಂದು ಬರೆದುಕೊಂಡಿದ್ದಾರೆ.

‘I Am Dynamite’ ಹಾಡಿನ ಚಿತ್ರೀಕರಣ ಮತ್ತು ನಿರ್ಮಾಣ ಕಾರ್ಯಗಳು ಬೆಂಗಳೂರು ಮತ್ತು ಮೈಸೂರು ನಡುವೆ ನಡೆದಿದ್ದು, ಉತ್ತಮ ತಂತ್ರಜ್ಞಾನ ಮತ್ತು ದೃಶ್ಯ ವೈಭವದೊಂದಿಗೆ ಮೂಡಿ ಬಂದಿದೆ. ಈ ಹಾಡಿನ ಮೂಲಕ ಚಂದನ್ ಶೆಟ್ಟಿ ಕನ್ನಡಿಗರ ಸೃಜನಶೀಲತೆ ಮತ್ತು ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯಿಸಲು ಯತ್ನಿಸಿದ್ದಾರೆ.

ಈ ಹಾಡಿನ ಮತ್ತೊಂದು ಪ್ರಮುಖ ಆಕರ್ಷಣೆ ಮೈಸೂರಿನ ಮಾಡೆಲ್ ಡಯಾನಾ. ಫ್ಯಾಷನ್ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದ ಡಯಾನಾ, ಈ ಮ್ಯೂಸಿಕ್ ವಿಡಿಯೋ ಮೂಲಕ ಸಂಗೀತ ಲೋಕದಲ್ಲೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಅವರ ಶೈಲಿ ಮತ್ತು ವ್ಯಕ್ತಿತ್ವ ಹಾಡಿಗೆ ಹೊಸ ಜೀವ ತುಂಬಿದೆ.

ಚಂದನ್ ಶೆಟ್ಟಿ ಅವರು ಡಯಾನಾ ಇಂಗ್ಲಿಷ್ ಹಾಡನ್ನು ಹಾಡುತ್ತಿರುವುದನ್ನು ಕೇಳಿ, ಅವರ ಧ್ವನಿ ಮತ್ತು ಶೈಲಿಯಿಂದ ಪ್ರಭಾವಿತರಾಗಿದ್ದಾರೆ. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದ ಚಂದನ್, ಅವರಿಗೆ ರ್ಯಾಪ್ ಮತ್ತು ನಟನೆಯ ತರಬೇತಿಯನ್ನು ನೀಡಿದರು. ಈ ತರಬೇತಿಯ ಫಲವಾಗಿ, ಡಯಾನಾ ತಮ್ಮ ಮೊದಲ ಮ್ಯೂಸಿಕ್ ವಿಡಿಯೋದಲ್ಲೇ ಆತ್ಮವಿಶ್ವಾಸದಿಂದ ಮೆರೆದಿದ್ದಾರೆ.

Exit mobile version