ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಚಂದನ್ ನಟನೆ ಜೊತೆ ನಿರ್ದೇಶನ ಹಾಗೂ ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದಾರೆ. ಫ್ಲರ್ಟ್ ಅನ್ನೋ ಸಿನಿಮಾನ ಸೈಲೆಂಟ್ ಆಗಿ ಮಾಡಿ ಮುಗಿಸಿರೋ ಚಂದನ್, ತಮ್ಮ ನೆಚ್ಚಿನ ನಾಯಕನಟ ಬಾದ್‌ಷಾ ಸುದೀಪ್‌ರಿಂದ ಹಾಡೊಂದನ್ನ ಹಾಡಿಸಿದ್ದಾರೆ. ಫ್ರೆಂಡ್‌ಶಿಪ್ ಆ್ಯಂಥೆಮ್‌ಗೆ ಧ್ವನಿಯಾಗಿರೋ ಕಿಚ್ಚನ ಕಂಠವನ್ನು ಒಮ್ಮೆ ಆಲಿಸಿ.
- ಕಿಚ್ಚನಿಂದ ಫ್ರೆಂಡ್‌ಶಿಪ್ ಆ್ಯಂಥೆಮ್.. ಕುಚಿಕು ಸಾಂಗ್ ನೆನಪು
- ವಿಷ್ಣು-ಅಂಬಿ.. ಕಿಚ್ಚ-ದಚ್ಚು ಡ್ಯಾನ್ಸ್ ನೆನಪಿಸ್ತಿದೆ ಈ ಫ್ಲರ್ಟ್ ಗೀತೆ
- ಬಹಳ ದಿನಗಳ ನಂತ್ರ ಕಿಚ್ಚನ ಕಂಠದಲ್ಲಿ ಮೂಡಿಬಂತು ಸಾಂಗ್
- ಲಕ್ಷ್ಮೀಬಾರಮ್ಮ ಫೇಮ್ ಚಂದು ನಟನೆ, ನಿರ್ದೇಶನ, ನಿರ್ಮಾಣ
ಇದು ರಿಲೀಸ್‌ಗೆ ಸಜ್ಜಾಗ್ತಿರೋ ಸ್ಯಾಂಡಲ್‌ವುಡ್‌ನ ಹೊಚ್ಚ ಹೊಸ ಫ್ಲರ್ಟ್ ಅನ್ನೋ ಸಿನಿಮಾದ ಆಲ್ಬಮ್‌ನ ಫಸ್ಟ್ ಸಾಂಗ್. ಟೈಟಲ್ ನೋಡ್ತಿದ್ರೆ ಇದ್ಯಾವುದೋ ಹಂಡ್ರೆಡ್ ಪರ್ಸೆಂಟ್ ಯೂತ್‌ಫುಲ್ ಎಂಟರ್‌ಟೈನರ್ ಅನಿಸೋದ್ರಲ್ಲಿ ಡೌಟೇ ಇಲ್ಲ. ಇಂಟರೆಸ್ಟಿಂಗ್ ವಿಷಯ ಅಂದ್ರೆ ಈ ಚಿತ್ರದ ಮೂಲಕ ಹ್ಯಾಂಡ್ಸಮ್ ಹೀರೋ ಚಂದನ್ ಕುಮಾರ್, ನಟನೆಯಿಂದ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಲಕ್ಷ್ಮೀಬಾರಮ್ಮ ಸೀರಿಯಲ್ ಹಾಗೂ ಬಿಗ್‌ಬಾಸ್ ಖ್ಯಾತಿಯ ಚಂದನ್, ಈ ಬಾರಿ ಫ್ಲರ್ಟ್ ಚಿತ್ರದಲ್ಲಿ ನಾಯನಕಟನಾಗಿ ನಟಿಸೋದ್ರ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಯೆಸ್.. ಇದು ಚಂದನ್ ಡೈರೆಕ್ಟ್ ಮಾಡ್ತಿರೋ ಚೊಚ್ಚಲ ಸಿನಿಮಾ. ಇದು ಫ್ರೆಂಡ್‌ಶಿಪ್ ಆ್ಯಂಥೆಮ್ ಸಾಂಗ್ ಆಗಿದ್ದು, ನಾಯಕನಟ ಚಂದನ್ ಹಾಗೂ ಆತನ ಗೆಳೆಯ ಗಿರಿ ಕುರಿತ ಸ್ನೇಹ ಸಂಬಂಧವನ್ನು ಇದು ಸಾರುತ್ತಿದೆ.
ಅಂದಹಾಗೆ ಈ ಹಾಡಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಬಾದ್‌ಷಾ ಕಿಚ್ಚ ಸುದೀಪ್. ಹೌದು.. ಅವರ ಕಂಠದಲ್ಲೇ ಈ ಗೀತೆ ಮೂಡಿಬಂದಿದೆ. ಸ್ವತಃ ಚಂದನ್ ಅವರೇ ಸಾಹಿತ್ಯ ರಚಿಸಿದ್ದು, ಈ ಹಾಡಿನ ಮುಖೇನ ಚಿತ್ರಸಾಹಿತಿಯಾಗಿಯೂ ಚಂದನ್ ಗುರ್ತಿಸಿಕೊಳ್ತಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಈ ಹಾಡಿಗಿದ್ದು, ಸ್ವತಃ ಸುದೀಪ್ ಅವರು ಚೆನ್ನೈ ಶೂಟಿಂಗ್ ಸೆಟ್‌ನಿಂದಲೇ ಹರಸಿ ಹಾರೈಸಿದ್ದಾರೆ.
ಇನ್ನು ಪುಟ್ಟ ಕಂದಮ್ಮ ಹಾಗೂ ಪತ್ನಿ ಕವಿತಾ ಗೌಡ ಜೊತೆ ಬಂದು ಸಾಂಗ್ ಲಾಂಚ್ ಮಾಡಿದಂತಹ ಚಂದನ್, ತಮ್ಮ ಚೊಚ್ಚಲ ನಿರ್ದೇಶನದ ರೋಮ್ ಕಾಮ್ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.
ನಾಯಕನಟಿಯರಾಗಿ ಅಕ್ಷತಾ ಬೋಪಣ್ಣ ಹಾಗೂ ನಿಮಿಕಾ ರತ್ನಾಕರ್ ನಟಿಸಿದ್ದು, ಚಂದನ್‌ಗೆ ಸಿಸಿಎಲ್ ಬಳಗದ ಪ್ರತಾಪ್ ನಾರಾಯಣ್, ರಾಜೀವ್, ಪ್ರವೀಣ್, ಡಾರ್ಲಿಂಗ್ ಕೃಷ್ಣ ಬಂದು ಸಾಥ್ ನೀಡಿದ್ದು ವಿಶೇಷವಾಗಿತ್ತು. ಅಂದಹಾಗೆ ಫ್ರೆಂಡ್‌ಶಿಪ್ ಸಾಂಗ್ ಅಂದಾಕ್ಷಣ ದಿಗ್ಗಜರು ಚಿತ್ರದ ಕುಚಿಕು ಸಾಂಗ್ ನೆನಪಾಗುತ್ತೆ. ಅಂಬಿ-ವಿಷ್ಣುದಾದಾ ನೆನಪಾಗ್ತಾರೆ. ಅಲ್ಲದೆ, ಅದೇ ಹಾಡಿಗೆ ಡ್ಯಾನ್ಸ್ ಮಾಡಿದ್ದ ಕಿಚ್ಚ-ದಚ್ಚು ನೆನಪಾಗ್ತಾರೆ. ಸಮಸ್ಯೆಗಳು, ಪರಿಸ್ಥಿತಿಗಳು ಏನೇ ಇರಲಿ, ಮನಸ್ಥಿತಿಗಳು ಒಗ್ಗೂಡಲಿ, ಮತ್ತೆ ದರ್ಶನ್-ಸುದೀಪ್ ಒಂದಾಗಲಿ. ಇಂತಹ ಹಾಡಿಗೊಂದು ಅರ್ಥ ಬರಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





