ಕಮೋಡ್ to ಕಾಂಡೋಮ್..ಅನ್ನದಾತ ಅಪ್ಸೆಟ್..ಏನೀ ಚಕ್ರಿ ವಿವಾದ..?

ಜನನಾಯಗನ್ ಸೆನ್ಸಾರ್, ಕನ್ನಡ ಪ್ರೊಡ್ಯೂಸರ್ ವಿಚಾರ ಮಾತು

BeFunky collage 2026 02 03T161641.202

ಪತ್ರಕರ್ತ ಕಮ್ ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್ ಆಡಿರೋ ಒಂದೇ ಒಂದು ಮಾತು ಸಿಕ್ಕಾಪಟ್ಟೆ ವಿವಾದ ಸೃಷ್ಠಿಸಿದೆ. ನಮ್ಮ ಕೆಲ ನಿರ್ಮಾಪಕರುಗಳು ಹೀರೋಗಳ ಕಮೋಡ್‌‌ಗಳಿಂದ ಹಿಡಿದು ಕಾಂಡೋಮ್‌‌ವರೆಗೂ ಎಲ್ಲವನ್ನೂ ನೋಡಿಕೊಳ್ತಾರಂತೆ. ಇಂಥದ್ದೊಂದು ಹೈಲಿ ಕಾಂಟ್ರವರ್ಸಿಯಲ್ ಸ್ಟೇಟ್‌‌ಮೆಂಟ್‌ ವಿರುದ್ಧ ಇಡೀ ಪ್ರೊಡ್ಯೂಸರ್ ಅಸೋಸಿಯೇಷನ್ ದಂಗೆ ಎದ್ದಿದೆ. ವಿವಾದ ಪೊಲೀಸ್ ಸ್ಟೇಷನ್ ಮೆಟ್ಟಿಲು ಕೂಡ ಏರಿದೆ.

ಕನ್ನಡದ ನಟ, ನಿರ್ದೇಶಕ, ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಹೇಳಿಕೆಯೊಂದು ಸ್ಯಾಂಡಲ್‌ವುಡ್‌‌ನಲ್ಲಿ ಅಲ್ಲೋಕ ಕಲ್ಲೋಲ ಸೃಷ್ಠಿಸಿದೆ. ಬಿಗ್‌ಬಾಸ್ ಕಂಟೆಸ್ಟೆಂಟ್ ಕೂಡ ಆಗಿದ್ದ ಚಂದ್ರಚೂಡ್, ಸದ್ಯ ಸುದೀಪ್ ಅವರಿಗೆ ಅತ್ಯಾಪ್ತರಾಗಿದ್ದು, ಅವರು ಆಡಿರೋ ಆ ಮಾತು ಕನ್ನಡ ಚಿತ್ರರಂಗದ ನಿರ್ಮಾಪಕರುಗಳನ್ನ ಇನ್ನಿಲ್ಲದೆ ಕಾಡಿದೆ. ಇಷ್ಟಕ್ಕೂ ಅವರು ಏನಂತ ಹೇಳಿದ್ದಾರೆ..? ನೀವೇ ಒಮ್ಮೆ ಕೇಳಿಬಿಡಿ.

ಕಮೋಡ್ to ಕಾಂಡೋಮ್.. ಅನ್ನದಾತ ಅಪ್ಸೆಟ್..

 ಏನೀ ಚಕ್ರಿ ವಿವಾದ..?

ಜನನಾಯಗನ್ ಸೆನ್ಸಾರ್, ಕನ್ನಡ ಪ್ರೊಡ್ಯೂಸರ್ ವಿಚಾರ ಮಾತು

ಓ ಮೈ ಗಾಡ್.. ಈ ಮೈ ಗಾಡ್.. ನಮ್ಮ ಚಿತ್ರರಂಗದಲ್ಲಿ ಹೀಗೂ ಉಂಟೇ..? ಹೀರೋಗಳಿಗಾಗಿ ಕೆಲ ಕನ್ನಡದ ನಿರ್ಮಾಪಕರು ಕಮೋಡ್‌‌ಗಳಿಂದ ಹಿಡಿದು ಕಾಂಡೋಮ್‌‌ವರೆಗೂ ಸಪ್ಲೈ ಮಾಡ್ತಾರಾ..? ಸಣ್ಣ ಪುಟ್ಟ ಕಾರ್ಮಿಕರ ಪೇಮೆಂಟ್‌‌ಗಳನ್ನ ಕೊಡದೆ ಮೋಸ ಮಾಡ್ತಾರಾ..? ಬರಹಗಾರರಿಗೆ ಬೆಲೆ ಕೊಡೋದಿಲ್ವಾ..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ. ಅದ್ರಲ್ಲೂ ಕೆಲ ದೊಡ್ಡ ದೊಡ್ಡ ನಿರ್ಮಾಪಕರುಗಳ ಮೇಲೆಯೇ ಪರೋಕ್ಷವಾಗಿ ಹೀಗಂತ ಆರೋಪಿಸಿರೋ ಚಂದ್ರಚೂಡ್‌ ಮೇಲೆ ಪ್ರೊಡ್ಯೂಸರ್ ಅಸೋಸಿಯೇಷನ್ ಗರಂ ಆಗಿದೆ.

   OMG..! ಸ್ಟಾರ್ಸ್‌ಗೆ ನಿರ್ಮಾಪಕರಿಂದ ಕಾಂಡೋಮ್ ಸಪ್ಲೈ..?!

ಡಾ. ರಾಜ್‌ ಅನ್ನದಾತ ಅಂದ್ರು.. ಚಂದ್ರಚೂಡ್ ಹೀಗ್ಯಾಕಂದ್ರು..?

ನಿರ್ಮಾಪಕರ ಸಂಘದ ಅಧ್ಯಕ್ಷರಾದ ರಾಮಮೂರ್ತಿ, ನಿರ್ಮಾಪಕರುಗಳಾದ ಕೆ ಮಂಜು, ಉದಯ್ ಕೆ ಮೆಹ್ತಾ, ಭದ್ರಾವತಿ ಕುಮಾರ್, ಭಾಮಾ ಗಿರೀಶ್, ಪ್ರಿಯಾ ಹಾಸನ್, ಚಿಂಗಾರಿ ಮಹದೇವ್, ಗಣೇಶ್ ರಾವ್ ಕೇಸರ್ಕರ್, ನಂದಿಹಾಳ್, ರಮೇಶ್ ಯಾದವ್.. ಹೀಗೆ ಸಾಕಷ್ಟು ಮಂದಿ ಪ್ರೊಡ್ಯೂಸರ್ಸ್ ಚಂದ್ರಚೂಡ್ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ, ನಿರ್ಮಾಪಕರ ಸಂಘದ ವತಿಯಿಂದಲೇ ಚಂದ್ರಚೂಡ್ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.

ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿರೋ ಚಂದ್ರಚೂಡ್

ತಮಿಳು ಸಿನಿಮಾ, ಅಲ್ಲಿನ ರಾಜಕೀಯದ ಬಗ್ಗೆ ನನ್ನ ಮಾತು..!!

ಚಿತ್ರರಂಗದವರೇ ಆಗಿರೋ ಚಂದ್ರಚೂಡ್, ಹೀಗೆ ನಿರ್ಮಾಪಕರುಗಳ ಬಗ್ಗೆ ಮಾತನಾಡಿರೋದು ನಿರ್ಮಾಪಕರ ಸಂಘಕ್ಕೆ ಸಹಿಸೋಕೆ ಆಗಿಲ್ಲ. ಅದೇ ಕಾರಣದಿಂದ ಅವರು ಕೆರಳಿ, ಕೆಂಡಾಮಂಡಲವಾಗಿದ್ದಾರೆ. ಅಂದಹಾಗೆ ಜನನಾಯಗನ್ ಸಿನಿಮಾದ ಸೆನ್ಸಾರ್ ವಿವಾದ ಹಾಗೂ ಕನ್ನಡದ ನಿರ್ಮಾಪಕರಾದ ಕೆವಿಎನ್‌ಗೆ ಆದಂತಹ ಸಮಸ್ಯೆಯ ವಿಚಾರವಾಗಿ ಮಾತನಾಡೋಕೆ ವಿಡಿಯೋ ಮಾಡಿರೋ ಚಂದ್ರಚೂಡ್, ಆಗ ಇಂತಹ ವಿವಾದಾತ್ಮಕ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ಕನ್ನಡ ನಿರ್ಮಾಪಕ ಇದ್ರಿಂದ ನೊಂದುಕೊಳ್ಳುವ ಅವಶ್ಯಕತೆ ಇಲ್ಲ

ಕನ್ನಡ ಚಿತ್ರರಂಗ, ಕನ್ನಡ ನಿರ್ಮಾಪಕರ ಬಗ್ಗೆ ಅಲ್ಲವೇ ಅಲ್ಲ- ಚಕ್ರಿ

ವಿವಾದ ಕಾಡ್ಗಿಚ್ಚಿನಂತೆ ಹೊತ್ತಿಕೊಳ್ಳುತ್ತಿದ್ದಂತೆ ವಿಡಿಯೋನ ಅಖಾಡ ಯೂಟ್ಯೂಬ್ ಚಾನೆಲ್‌ನಿಂದ ಡಿಲೀಟ್ ಮಾಡಿರೋ ಚಂದ್ರಚೂಡ್, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಕೂಡ ನೀಡಿದ್ದಾರೆ. ನಾನು ತಮಿಳು ಚಿತ್ರರಂಗ ಹಾಗೂ ಅಲ್ಲಿರೋ ರಾಜಕೀಯ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನಿ. ಇದು ಕನ್ನಡ ಚಿತ್ರರಂಗ, ಕನ್ನಡ ನಿರ್ಮಾಪಕರುಗಳ ಬಗ್ಗೆ ಅಲ್ಲವೇ ಅಲ್ಲ. ಯಾವುದೇ ಕನ್ನಡದ ನಿರ್ಮಾಪಕರು ಇದ್ರಿಂದ ನೊಂದುಕೊಳ್ಳುವ ಅವಶ್ಯಕತೆ ಇಲ್ಲ ಅಂತ ಪೋಸ್ಟ್ ಮಾಡಿದ್ದಾರೆ.

ಕಮೋಡ್ ಟು ಕಾಂಡೋಮ್ ಅನ್ನೋ ಉಪಮೆ ಬಳಸಿದ್ದೇನಷ್ಟೇ. ಆದ್ರೆ ಅದು ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ ಅಂತಲೂ ಅವ್ರ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ ಚಂದ್ರಚೂಡ್. ಅಂದಹಾಗೆ ನಿರ್ಮಾಪಕರನ್ನ ನಟಸಾರ್ವಭೌಮ ಡಾ ರಾಜ್‌ಕುಮಾರ್ ಅನ್ನದಾತ ಅಂತ ಕರೆದಿದ್ರು. ಆದ್ರೆ ಇಲ್ಲಿ ಚಂದ್ರಚೂಡ್ ಅವರು ಇಂಡೈರೆಕ್ಟ್ ಆಗಿ ತಲೆ ಹಿಡುಕರು ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ. ಅದೇ ಇಷ್ಟು ದೊಡ್ಡ ವಿವಾದಕ್ಕೆ ಮುನ್ನುಡಿ ಬರೆದಿದೆ. ಒಂದ್ಕಡೆ ದರ್ಶನ್ ಅವರ ಆಪ್ತ ರಾಮಮೂರ್ತಿ ನಿರ್ಮಾಪಕರ ಸಂಘದ ಅಧ್ಯಕ್ಷರು. ಮತ್ತೊಂದ್ಕಡೆ ಚಂದ್ರಚೂಡ್ ಸುದೀಪ್ ಆಪ್ತರು. ಚಕ್ರಿ ಕಿಚ್ಚ ಸುದೀಪ್ ಆಪ್ತ ಅನ್ನೋ ಕಾರಣಕ್ಕೇನೇ ಇಷ್ಟು ದೊಡ್ಡ ರೂಪ ಪಡೆಯುತ್ತಿದೆಯಾ ಅನ್ನೋದು ಕೂಡ ಪ್ರಮುಖ ಅಂಶ ಆಗಲಿದೆ.

ಒಟ್ಟಾರೆ ವಿವಾದ ಹೇಗೆ ಬಗೆ ಹರಿಯುತ್ತೆ..? ಯಾರು ಬಗೆ ಹರಿಸುತ್ತಾರೆ..? ಠಾಣೆಗೆ ಹೋಗಿ ಚಂದ್ರಚೂಡ್ ಸ್ಪಷ್ಟನೆ ನೀಡ್ತಾರಾ ಇಲ್ವಾ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.

 

Exit mobile version