ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ಅದರಲ್ಲೂ ‘ನೀನೆ ನನ್ನಂತೆ’ ಹಾಡಂತೂ ಪ್ರೇಕ್ಷರ ಹೃದಯ ಗೆದ್ದಿದೆ. ಟ್ವಿಸ್ಟ್ ಏನಂದ್ರೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡಬೇಕಿದ್ದ ಈ ಹಾಡು ಕನ್ನಡದ ಚಿಕ್ಕ ಹುಡುಗಿ ಕಂಠದಲ್ಲಿ ಮೂಡಿ ಬಂದಿದೆ. ಇನ್ಮುಂದೆ ಶ್ರೇಯಾ ಜಾಗಕ್ಕೆ ಲಹರಿ ಬರೋದು ಫಿಕ್ಸ್. ಪರಭಾಷೆ ಗಾಯಕರ ಡೇಟ್ಸ್ ಗೆ ಕಾಯೋ ಅವಶ್ಯಕತೆಯಿಲ್ಲ. ಕನ್ನಡಕ್ಕೆ ಅಪ್ಪಟ ಕನ್ನಡ ಗಾಯಕಿ ಸಿಕ್ಕಿರೋದು ಇಡೀ ಸ್ಯಾಂಡಲ್‌ವುಡ್‌ಗೆ ಖುಷಿ ತಂದಿದೆ.
ಬ್ರ್ಯಾಟ್ ಇದೊಂದು ಪಕ್ಕಾ ಲವ್ & ಎಂಟಟೈನ್ಮೆಂಟ್ ಸಿನಿಮಾ. ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದೀಗ ಸಖತ್ ಸೌಂಡ್ ಮಾಡ್ತಿದೆ. ಕಾರಣ ರಿಲೀಸ್ ಆಗಿರೋ ಸುಮಧುರ ಹಾಡು. ಫಸ್ಟ್ ರ‍್ಯಾಂಕ್ ರಾಜು ಚಿತ್ರದ ನಿರ್ಮಾಪಕ ಮಂಜುನಾಥ್ ಕಂದಕೂರ್ ಈ ಬ್ರ್ಯಾಟ್ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು, ಡಾರ್ಲಿಂಗ್ ಕೃಷ್ಣ ಪಾತ್ರ ಪೋಲಿನಾ? ತರ್ಲೆನಾ? ತುಂಟಾನಾ? ಎಂಬುದು ಬಾರೀ ಕುತೂಹಲ ಮೂಡಿಸಿದೆ.
ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತಾ ನೀಡಿದ್ದು, ಇದೀಗ ಚಿತ್ರತಂಡ 5 ಭಾಷೆಗಳಲ್ಲಿ ಮೆಲೋಡಿ ಸಾಂಗ್ ಒಂದನ್ನ ರಿಲೀಸ್ ಮಾಡಿ ಸಿನಿರಸಿಕರ ಹೃದಯ ಗೆದ್ದಿದೆ. ಸದ್ಯ ಬಿಡುಗಡೆ ಆಗಿರೋ ನೀನೆ ನನ್ನಂತೆ ಹಾಡನ್ನು ಸಿದ್ ಶ್ರೀರಾಮ್ ಕನ್ನಡ ಹಾಗು ತೆಲುಗಿನಲ್ಲಿ ಹಾಡಿದ್ದಾರೆ. ಇಂಟೆರೆಸ್ಟಿಂಗ್ ಅಂದ್ರೆ ಈ ಹಾಡಿನ ಫೀಮೇಲ್ ವರ್ಷನ್ ಶ್ರೇಯಾ ಘೋಷಲ್ ಹಾಡಬೇಕಿತ್ತು. ಆದರೆ, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಕನ್ನಡದ ಗಾಯಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿಯೇ ಶ್ರೇಯಾ ಬದಲು ಸರಿಗಮಪ ಲಹರಿ ಮಹೇಶ್ ಇದನ್ನ ಹಾಡಿದ್ದಾರೆ.
ಇಡೀ ತಂಡಕ್ಕೆ ಈ ಒಂದು ಹಾಡನ್ನ ಶ್ರೇಯಾ ಘೋಷಾಲ್ ಅವರಿಂದಲೇ ಹಾಡಿಸೋ ಪ್ಲಾನ್ ಇತ್ತು ಆದರೆ, ಅರ್ಜುನ್ ಜನ್ಯ ಒಂದು ಸಲಹೆ ಕೊಟ್ಟರು. ಅದಕ್ಕೇನೆ ಬ್ರ್ಯಾಟ್ ಚಿತ್ರದಲ್ಲಿ ನವ ಗಾಯಕಿ ಲಹರಿ ಮಹೇಶ್ ಹಾಡೋಕೆ ಸಾಧ್ಯವಾಗಿದೆ. ಸರಿಗಮಪ ಸೀಸನ್ 16ರ ಗಾಯಕಿ ಲಹರಿ ಮಹೇಶ್ ಇನ್ನು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಇಷ್ಟು ಚಿಕ್ಕ ವಯಸ್ಸಿಗೆ ದೊಡ್ಡ ಅವಕಾಶ ಸಿಕ್ಕಿದ್ದು ಲಹರಿ ಸಿಂಗಿಂಗ್ ಕರಿಯರ್ ಗೆ ಮೈಲುಗಲ್ಲಾಗಲಿದೆ.
ಶ್ರೇಯಾ ಡೇಟ್ಸ್ ಹಾಗು ಬಜೆಟ್ ಕಾಂಪ್ರೊಮೈಸ್ ಆಗದ ಕಾರಣ ಲಹರಿ ಮಹೇಶ್, ಶ್ರೇಯಾ ಜಾಗವನ್ನ ರಿಪ್ಲೇಸ್ ಮಾಡಿದ್ದಾರೆ ಸದ್ಯ ಇದುವೇ ಟಾಕ್ ಆಫ್ ದಿ ಟೌನ್ ಆಗಿದೆ.ಅರ್ಜುನ್ ಜನ್ಯ ಒಳ್ಳೆ ಮ್ಯೂಸಿಕ್ ಡೈರೆಕ್ಟರ್ ಅಷ್ಟೇ ಅಲ್ಲ. ಯುವ ಪ್ರತಿಭೆಗಳನ್ನ ಗುರುತಿಸೋ ಟ್ಯಾಲೆಂಟ್ ಹಾಗು ಒಳ್ಳೆ ಮನಸು ಕೂಡ ಅವರಿಗಿದೆ. ಹಾಗಾಗಿಯೇ ಸರಿಗಮಪ ಶೋ ಲಹರಿ ಮಹೇಶ್ ಅವರಿಗೆ ಬ್ರ್ಯಾಟ್ ಚಿತ್ರದಲ್ಲಿ ಹಾಡಲು ಅವಕಾಶ ಸಿಕ್ಕಿದೆ. ಅದನ್ನ ಲಹರಿ ಮಹೇಶ್ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಅಂದಹಾಗೆ 6 ತಿಂಗಳಲ್ಲಿ 15 ಟ್ಯೂನ್ ಕೊಟ್ಟಿದ್ರು ಅರ್ಜುನ್ ಜನ್ಯ ಎಂದು ಹೇಳಿರೋ ಶಶಾಂಕ್ ಈ ಹಾಡು ಹಿಟ್ ಆಗಲು ಲಹರಿ ಕಂಠ.. ಅರ್ಜುನ್ ಮ್ಯೂಸಿಕ್ ಕಾರಣ ಎಂದಿದ್ದಾರೆ.
ಬ್ರ್ಯಾಟ್ ಸಿನಿಮಾದ ನೀನೆ ನನ್ನಂತೆ ಹಾಡಂತೂ ಲವರ್ಸ್ಗಳ ಹೃದಯ ಗೆದ್ದಿದ್ದು, ತೆರೆಯ ಮೇಲೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮನಿಷಾ ಕಂದಕೂರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ನನ್ನ ರಿಯಲ್ ಲೈಫ್ ಕ್ಯಾರೆಕ್ಟರ್ ಇದು ಆಪ್ಪೋಸಿಟ್ ಪಾತ್ರ ಎಂದು ಕೃಷ್ಣ ಹೇಳಿಕೊಂಡಿದ್ದಾರೆ
ಒಟ್ಟಾರೆ ಬ್ರ್ಯಾಟ್ ಸಿನಿಮಾ ನೋಡಲು ಪ್ರೇಕ್ಷಕರು ಕಾತುರರಾಗಿದ್ದು, ಸಿನಿಮಾ ಆದಷ್ಟೂ ಬೇಗ ತೆರೆಗೆ ಬರಲಿ ಅಂತ ಕಣ್ ಕಣ್ ಬಡಿಯುತ್ತಿದ್ದಾರೆ.