ಗುಡ್ ನ್ಯೂಸ್.. ಗುಡ್ ನ್ಯೂಸ್.. ಗುಡ್ ನ್ಯೂಸ್.. ಬಿಗ್‌ಬಾಸ್ ಸೀಸನ್-12ಗೂ ಬಾದ್‌ಷಾ ಕಿಚ್ಚ ಸುದೀಪ್ ಅವರೇ ಬಾಸ್. ಕಳೆದ ವರ್ಷವೇ ನಿರೂಪಣೆಗೆ ವಿದಾಯ ಹೇಳಿದ್ದ ಕಿಚ್ಚ, ಕೊನೆಗೂ ಮನಸ್ಸು ಬದಲಿಸಿದ್ದಾರೆ. ಬಿಗ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಈ ಬಿಗ್‌ಬಾಸ್ ಬಿಗ್ ಸರ್‌ಪ್ರೈಸ್ ಅನ್ನು ಸ್ವತಃ ಅಭಿನಯ ಚಕ್ರವರ್ತಿ ಸುದೀಪ್ ಬಾಯಿಂದಲೇ ಒಮ್ಮೆ ಕೇಳಿ.
- ದಿ ವೆಯ್ಟ್ ಈಸ್ ಓವರ್.. ಬಿಗ್ ಮನೆಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ
- ಬಿಗ್‌ಬಾಸ್ ಸೀಸನ್-12ರ ಕಥೆ ಆರಡಿ ಕಟೌಟ್ ಕಿಚ್ಚನ ಜೊತೆ
- ಮನಸ್ಸು ಬದಲಿಸಿದ ಕಿಚ್ಚ.. ಕನ್ನಡಿಗರ ದಿಲ್ ಫುಲ್ ಖುಷ್..!
- ಅಮ್ಮನ ನೆಚ್ಚಿನ ಶೋ.. ಫ್ಯಾನ್ಸ್, ಫ್ಯಾಮಿಲಿ, ವಾಹಿನಿಗಾಗಿ ಜೈ
ಯೆಸ್.. ದಿ ವೆಯ್ಟ್ ಈಸ್ ಓವರ್.. ಕೊನೆಗೂ ಬಿಗ್‌ಬಾಸ್ ವೇದಿಕೆಯಿಂದ ಗುಡ್ ನ್ಯೂಸ್ ಸಿಕ್ಕಾಗಿದೆ. ಕಲರ್ಸ್ ವಾಹಿನಿಯ ಹೆಡ್ಸ್ ಜೊತೆ ಸ್ವತಃ ಬಾದ್‌ಷಾ ಕಿಚ್ಚ ಸುದೀಪ್ ಅವರೇ ಬಂದು ಬಿಗ್‌ಬಾಸ್ ಸೀಸನ್-12 ಅಪ್ಡೇಟ್ ನೀಡಿದ್ದಾರೆ. ಇದು ಬರೀ ಕಲರ್ಸ್ ವಾಹಿನಿಗಷ್ಟೇ ಅಲ್ಲ, ಬಿಗ್‌ಬಾಸ್ ಮಾಜಿ ಕಂಟೆಸ್ಟೆಂಟ್ಸ್, ಕನ್ನಡಿಗರು ಹಾಗೂ ವಿದೇಶಗಳಲ್ಲೂ ನೋಡುವಂತಹ ಬಿಗ್‌ಬಾಸ್ ಕನ್ನಡ ವೀಕ್ಷಕರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಕಳೆದ ಬಿಗ್‌ಬಾಸ್ ಸೀಸನ್-11ರ ಗ್ರ್ಯಾಂಡ್ ಫಿನಾಲೆಗೂ ಮೊದಲೇ ತಮ್ಮ ಎಕ್ಸ್ ಖಾತೆ ಮೂಲಕ ಇದೇ ನನ್ನ ಕೊನೆಯ ನಿರೂಪಣೆಯ ಬಿಗ್‌ಬಾಸ್ ಆಗಲಿದೆ ಅಂತ ಅಧಿಕೃತವಾಗಿ ಖುದ್ದು ಕಿಚ್ಚ ಸುದೀಪ್ ಅವರೇ ಪೋಸ್ಟ್ ಮಾಡಿದ್ರು. ಇದರಿಂದ ಎಲ್ಲರ ಹೃದಯ ಒಡೆದಂತಾಗಿತ್ತು. ಇದೀಗ ವಾಹಿನಿ ಕಿಚ್ಚನ ಮನವೊಲಿಸುವಲ್ಲಿ ಯಶಸ್ವಿ ಆಗಿದೆ. ಆಡಿಯೆನ್ಸ್ ಬಹಳ ಎಕ್ಸೈಟಿಂಗ್ ಆಗಿದ್ದಾರೆ. ಕಂಟೆಸ್ಟೆಂಟ್ಸ್ ಹಾಗೂ ವೀಕ್ಷಕರು ಬದಲಿ ಇಲ್ಲ ಅಂತ ಹೇಳೋದು ಕೇಳಿ ವಾಪಸ್ ಬಂದೆ. ಹಾನೆಸ್ಟ್ ಆಗಿ ಪೋಸ್ಟ್ ಮಾಡಿದ್ದು ನಿಜ, ಈಗ ವಾಪಸ್ ಬಂದಿದ್ದೂ ನಿಜ ಎಂದಿದ್ದಾರೆ ಕಿಚ್ಚ.
IPLನಷ್ಠೇ ಜನ ಬಿಗ್‌ಬಾಸ್‌ನ ಇಷ್ಟ ಪಡ್ತಾರೆ. ನೋಡ್ತಾರೆ. ಅಲ್ಲದೆ ಬಿಗ್‌ಬಾಸ್ ತುಂಬಾ ಜನಕ್ಕೆ ಕರಿಯರ್ ಕಟ್ಟಿಕೊಟ್ಟಿದೆ. ವ್ಯಕ್ತಿತ್ವಗಳ ಜೊತೆ ಬದುಕು ರೂಪಿಸಿದೆ. ನನ್ನ ಚೈತನ್ಯ ಎಂದೂ ಕುಗ್ಗಿಲ್ಲ. ನನಗೆ ವೈಯಕ್ತಿಕವಾಗಿ ಕಂಟೆಸ್ಟೆಂಟ್ಸ್‌ನ ಕಂಟ್ರೋಲ್ ಮಾಡೋದು ಒತ್ತಡ ಆಗಬಾರದು. ವಿವಾದಿತರನ್ನ ಕರೆಯಬಾರದು ಅಂತ ಹೇಳಿಲ್ಲ. ಆದ್ರೆ ಅವರೇ ಯಾಕೆ ಅನ್ನೋ ಕ್ಲಾರಿಟಿ ಇರಬೇಕು. ಕೆಲವೊಂದು ಐಡಿಯಾಗಳನ್ನ ಇನ್ ಕಾರ್ಪೊರೇಟ್ ಆಗಿರಲಿಲ್ಲ. ಈಗ ಇನ್ ಕಾರ್ಪೋರೇಟ್ ಆಗಿವೆ. ಹಾಗಾಗಿ ವಾಪಸ್ ಬಂದೆ ಎಂದಿದ್ದಾರೆ.
ಇನ್ನು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಕೂಡ ಕೆಲವೊಂದು ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದು, ಇನ್ನೂ ಬೆಟರ್ ಆಗಿ ಮಾಡೋಣ ಅಂತ ಸುದೀಪ್ ಸರ್ ಹೇಳಿದ್ದಾರೆ. ಹಾಗಾಗಿ ಈ ಹಿಂದಿನ 11 ಸೀಸನ್‌ಗಳಿಗಿಂತ ಈ ಬಾರಿ ತುಂಬಾ ಚೆನ್ನಾಗಿ ಬರ್ತೀವಿ ಎಂದರು. ಈ ಬಾರಿಯೂ ಮೂರು ತಿಂಗಳೇ ನಡೆಯಲಿದ್ದು, ಡೇಟ್ ಇನ್ನೂ ನಿಗದಿ ಮಾಡಿಲ್ಲ ಎಂದರು.
ಒಟ್ಟಾರೆ ಯಂಗ್ ಅಂಡ್ ಎನರ್ಜಿಟಿಕ್ ಕಿಚ್ಚ ಸುದೀಪ್ ಮತ್ತೆ ಬಿಗ್‌ಬಾಸ್ ವೇದಿಕೆಯಲ್ಲಿ ಪಂಚಾಯ್ತಿ ಮಾಡೋಕೆ ಬರ್ತಿರೋದು ಇಂಟರೆಸ್ಟಿಂಗ್. ಇದು ಸುದೀಪ್ ಅವರ ತಾಯಿಯ ಅಚ್ಚುಮೆಚ್ಚಿನ ಶೋ ಕೂಡ ಆಗಿದ್ದು, ಮಗಳು, ಪತ್ನಿಗೂ ಇಷ್ಟವಾಗುವ ಶೋ. ಹಾಗಾಗಿ ಬಿಗ್‌ಬಾಸ್‌ಗೆ ಸುದೀಪ್ ಈ ಬಾರಿಯೂ ಬಾಸ್ ಆಗಿದ್ದು ಎಲ್ಲರಿಗೂ ಖುಷಿ ತಂದಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್