• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದೇಶಭಕ್ತಿ ಕಿಚ್ಚತ್ತಿಸೋ ಇಂಡೋ- ಪಾಕ್ ವಾರ್ ಮೂವೀಸ್

ಗ್ಯಾರಂಟಿ ನ್ಯೂಸ್‌‌ನಲ್ಲಿ ಐತಿಹಾಸಿಕ ಯುದ್ಧಗಳ ಕಿರು ನೋಟ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 7, 2025 - 7:44 pm
in ಸಿನಿಮಾ
0 0
0
Untitled design (58)

ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡು 78 ವರ್ಷಗಳಾದ್ರೂ, ಪಕ್ಕದಲ್ಲಿ ದೇಶ ಕಟ್ಟಿದ ಪಾಕಿಗಳ ದ್ವೇಶ, ಅಸೂಯೆ, ಕೋಮುತನದಿಂದ ಮುಕ್ತಿ ಪಡೆಯಲಾಗುತ್ತಿಲ್ಲ. ನೇರವಾಗಿ ಮುಖಾಮುಖಿ ಗುದ್ದಾಡೋ ಶಕ್ತಿ ಇಲ್ಲದ ನರಸತ್ತ ಪಾಕಿ ಪಾಪಿಗಳು, ಉಗ್ರರ ಮೂಲಕ ಪಾಪದ ಕೊಡ ತುಂಬಿಸಿಕೊಳ್ತಿದ್ದಾರೆ. ಅದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡಿದ್ದು, ಇಡೀ ದೇಶ ಭಾರತ್ ಮಾತಾ ಕಿ ಜೈ ಅಂತಿದೆ. ದೇಶಪ್ರೇಮದ ಕಿಚ್ಚತ್ತಿಸೋ ಸಾಲು ಸಾಲು ಇಂಡೋ-ಪಾಕ್ ಯುದ್ಧಗಳು ಬೆಳ್ಳಿತೆರೆ ಬೆಳಗಿವೆ. ಅವುಗಳ ಝಲಕ್ ಇಲ್ಲಿದೆ.

RelatedPosts

ಮೂರು ವರ್ಷಗಳ ಗ್ಯಾಪ್..ಕಿಂಗ್ ಶಾರೂಖ್ ಖಾನ್ ರೀ-ಎಂಟ್ರಿ..!

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ

ರಥಾವರ ಡೈರೆಕ್ಟರ್‌‌ ಜೊತೆ ಪೃಥ್ವಿ-ಧನ್ಯಾ ರಾಮ್‌‌ಕುಮಾರ್..!

ಡಾಲಿ ಧನಂಜಯ ದೊನ್ನೆ ಬಿರಿಯಾನಿ ತಿಂದಿದ್ದೇ ತಪ್ಪಾ..!

ADVERTISEMENT
ADVERTISEMENT

ಸಮಸ್ತ ಭಾರತೀಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೌದು.. ನಮ್ಮ ಪಾಲಿಗೆ ಇಂದೇ ದೀಪಾವಳಿ. ಶತ್ರು ಸಂಹಾರ ಯಾವಾಗೆಲ್ಲಾ ನಡೆಯುತ್ತೋ ಅದೇ ನಿಜವಾದ ದೀಪಾವಳಿ. ಮೊನ್ನೆ ಮಡಿದ 26 ಮಂದಿ ಭಾರತೀಯರಿಗೆ ನಿಜವಾಗಿಯೂ ಮುಕ್ತಿ ಸಿಕ್ಕಿರೋದು ಇಂದೇ. ಭಾರತಾಂಬೆಯನ್ನ ಕೆಣಕಿ ಉಳಿದವರುಂಟೆ..? ಸಿಂಧೂರ ನಮ್ಮ ಭಾರತೀಯ ಹೆಣ್ಣು ಮಕ್ಕಳ ಆಸ್ತಿ, ಸಂಸ್ಕೃತಿ. ಅದನ್ನು ಅಳಿಸಿಹಾಕಿದ್ರೆ, ಅದರ ಪರಿಣಾಮ ಹೇಗಿರುತ್ತೆ ಅನ್ನೋದೇ ಆಪರೇಷನ್ ಸಿಂಧೂರ.

ಹೌದು.. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಭಾರತೀಯರು ಜೀವ ತೆತ್ತಿದ್ದರು. ಅದಕ್ಕೆ ಪ್ರತೀಕಾರವಾಗಿ ನಮ್ಮ ಭಾರತ ಸರ್ಕಾರ ಪಾಕಿಸ್ತಾನದಲ್ಲಿ ಅಡಗಿದ್ದ 9 ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ, 21 ಉಗ್ರರ ಕ್ಯಾಂಪ್‌ಗಳನ್ನ ಉಡೀಸ್ ಮಾಡಿದೆ. ಉಗ್ರ ಕಮಾಂಡರ್‌ಗಳನ್ನ ಹತ್ಯೆಗೈದಿದೆ. ಅಂದಹಾಗೆ ನುಗ್ಗಿ ಹೊಡೆಯೋದ್ರಲ್ಲಿ ನಮ್ಮ ಇಂಡಿಯನ್ ಆರ್ಮಿ ಎತ್ತಿದ ಕೈ. ಅದನ್ನ ಆಪರೇಷನ್ ಸಿಂಧೂರ ಮೂಲಕ ಮತ್ತೊಮ್ಮೆ ಪ್ರೂವ್ ಮಾಡಿದೆ.

ಹಗಲಿರುಳು ಭಾರತದ ಮೇಲೆ ಪಿತೂರಿ ನಡೆಸೋ ರಕ್ತಬೀಜಾಸುರರಿಗೆ ನರ ಕಟ್ ಮಾಡಿ, ಬೀಜ ಒಡೆಯೋ ಮೂಲಕ ಪಾಕಿಗಳ ಪಾಪದ ಕೊಡಕ್ಕೆ ಆಗಿಂದಾಗ್ಗೆ ತಕ್ಕ ಶಾಸ್ತಿ ಮಾಡುತ್ತಾ ಬರ್ತಿದೆ ಭಾರತ ಸರ್ಕಾರ. ಭಾರತ- ಪಾಕ್ ವಿಭಜನೆ ಆದ ದಿನದಿಂದ ಇಂಡೋ-ಪಾಕ್ ವಾರ್‌‌ಗಳು ನಡೆದಿರೋದು ಒಂದಾ ಎರಡಾ..? ಲೆಕ್ಕವಿಲ್ಲದಷ್ಟು. ಭಾರತೀಯರ ಪ್ರೀತಿ, ಗೌರವ, ವಿಶ್ವಾಸ, ಸ್ನೇಹಗಳಿಗೆ ಅವರ ದ್ವೇಷ, ಅಸೂಯೆ, ಪಿತೂರಿ, ಹಗೆತನ ತಣ್ಣಗಾಗ್ತಿಲ್ಲ. ಕಾಲ್ಕೆರೆದು ಬರುವ ಪಾಪಿ ಪಾಕಿಗಳಿಗೆ ಈ ರೀತಿಯ ಆಪರೇಷನ್‌ಗಳಿಂದ ತಕ್ಕ ಉತ್ತರ ಕೊಡ್ತಿರೋದು ನಿಜಕ್ಕೂ ಹೆಮ್ಮೆ ತರಿಸುತ್ತೆ.

ದಶಕಗಳಿಂದ ಇಂಡಿಯಾ- ಪಾಕಿಸ್ತಾನ್ ನಡುವೆ ನಿಲ್ಲದ ನಿರಂತರ ಸಮರಗಳು ನಡೀತಾನೇ ಇವೆ. ಇತಿಹಾಸದ ಪುಟಗಳು ಸೇರಿರುವ ಅಂತಹ ಹತ್ತು ಹಲವು ಯುದ್ಧಗಳು ಸಿನಿಮಾಗಳ ಮೂಲಕ ಬೆಳ್ಳಿತೆರೆ ಬೆಳಗಿವೆ. ದೇಶಪ್ರೇಮದ ಕಿಚ್ಚು ಹೊತ್ತಿಸುವ, ನೋಡುಗರ ರಕ್ತ ಕುದಿಯುವಂತೆ ಮಾಡುವ, ತ್ಯಾಗ ಬಲಿದಾನಗಳ ಮೂಲಕ ದೇಶದ ಭದ್ರತೆಗಾಗಿ ಪ್ರಾಣ ಹೊತ್ತೆ ಇಟ್ಟಂತಹ ರಿಯಲ್ ಹೀರೋಗಳ ಕಥೆಗಳು ಇಲ್ಲಿವೆ. ಅವುಗಳಲ್ಲಿ ಒಂದಷ್ಟು ರಿಯಲ್ ಬೇಸ್ಡ್ ಸಿನಿಮಾಗಳನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ಭಾರತದ ಮುಂದೆ ನಡೆಯಲ್ಲ ಪಾಕಿಸ್ತಾನ್ ಆಟ. ಇಲ್ಲಿದೆ ಒಂದಷ್ಟು ಹಿಸ್ಟಾರಿಕಲ್ ವಾರ್‌ಗಳ ಇಣುಕು ನೋಟ. ಯೆಸ್.. ಇಲ್ಲಿಯವರೆಗೆ ಏಳೆಂಟು ದಶಕಗಳಲ್ಲಿ ನಡೆದ ಇಂಡೋ-ಪಾಕ್ ವಾರ್‌‌ಗಳಲ್ಲಿ ನಮ್ಮ ಭಾರತದ ಸೋತ ನಿದರ್ಶನವೇ ಇಲ್ಲ. ಅದೆಷ್ಟೋ ಮಂದಿ ಸೈನಿಕರು ತಮ್ಮ ಪ್ರಾಣ ಪಣಕ್ಕಿಟ್ಟು ದೇಶವನ್ನು ರಕ್ಷಿಸಿದ್ದಾರೆ. ಮಡಿದ ಸೈನಿಕರಿಗೆ ಹ್ಯಾಟ್ಸಾಫ್ ಹೇಳ್ತಾ ಒಂದಷ್ಟು ದಿ ಬೆಸ್ಟ್ ಸಿನಿಮಾಗಳ ಝಲಕ್ ತೋರಿಸ್ತೀವಿ, ನೋಡ್ತಾ ಜೈ ಹಿಂದ್ ಹೇಳಿ.

ಜೆಪಿ ದತ್ತ ನಿರ್ದೇಶಿಸಿ, ನಿರ್ಮಿಸಿದ 90ರ ದಶಕದ ಭಾರತೀಯ ಸಿನಿಮಾ ಬಾರ್ಡರ್, ಅದೆಷ್ಟೋ ವಾರ್ ಮೂವೀಸ್‌ಗೆ ಸ್ಫೂರ್ತಿ. 1971ರಲ್ಲಿ ಲಾಂಗೇವಾಲಾ ಕದನದ ಇಂಡೋ-ಪಾಕ್ ವಾರ್‌‌ನ ಚಿತ್ರಣವಾಗಿರೋ ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ಜಾಕಿಶ್ರಾಫ್, ನಮ್ಮ ಕನ್ನಡದ ಸುನೀಲ್ ಶೆಟ್ಟಿ, ಅಕ್ಷಯ್ ಖನ್ನಾ ಮುಖ್ಯಭೂಮಿಕೆಯಲ್ಲಿದ್ದರು. ಈ ಸಿನಿಮಾ ಯುದ್ಧದ ಸನ್ನಿವೇಶಗಳನ್ನ ಕಣ್ಣಿಗೆ ಕಟ್ಟಿದಂತೆ ಜನರ ಮುಂದೆ ತಂದಿಟ್ಟಿತ್ತು.

ಆ ಕಾಲದಲ್ಲೇ ಕೋಟ್ಯಂತರ ರೂಪಾಯಿ ಸುರಿದು ಈ ತರಹದ ಸಿನಿಮಾ ಮಾಡೋಕೆ ದತ್ತ ಅವ್ರಿಗೆ ಎರಡು ಗುಂಡಿಗೆ ಬೇಕಿತ್ತು. ದೇಶಪ್ರೇಮದಿಂದ ಮಾಡಿದ ಈ ಸಿನಿಮಾನ ಭಾರತೀಯರು ಕೈ ಬಿಡಲಿಲ್ಲ. 90ರ ದಶಕದಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಆಗಿ ಹೊರಹೊಮ್ಮಿತು. ಮೇಕಿಂಗ್, ಕಲಾವಿದರ ನಟನೆ, ನಿರ್ದೇಶಕರ ಎಫರ್ಟ್‌ನ ಎಲ್ಲರೂ ಕೊಂಡಾಡಿದ್ರು. 3 ನ್ಯಾಷನಲ್ ಅವಾರ್ಡ್ಸ್ ಜೊತೆಗೆ 11 ಫಿಲ್ಮ್ ಫೇರ್ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡಿತ್ತು. 2017ರಲ್ಲಿ 20 ವರ್ಷ ಪೂರೈಸಿದ ಬಾರ್ಡರ್ ಸಿನಿಮಾನ 70ನೇ ಸ್ವಾತಂತ್ಯೋತ್ಸವ ಹಿನ್ನೆಲೆ ರಕ್ಷಣಾ ಸಚಿವಾಲಯ ಸ್ಪೆಷಲ್ ಸ್ಕ್ರೀನಿಂಗ್ ಕೂಡ ಮಾಡಿತ್ತು.

ಪಾಕಿಸ್ತಾನದ ನಾಲ್ವರು ಜೈಶ್ ಎ ಮೊಹಮ್ಮದ್ ಉಗ್ರರು ಭಾರತದ ಜಮ್ಮು & ಕಾಶ್ಮೀರದ ಉರಿ ಪಟ್ಟಣದ ಬಳಿಯ ಭಾರತೀಯ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಯ ಮೇಲೆ ಸೆಪ್ಟೆಂಬರ್ 18, 2016ರಂದು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 19 ಮಂದಿ ಭಾರತೀಯ ಸೈನಿಕರು ಸಾವನ್ನಪ್ಪಿದರು. 19ರಿಂದ 30 ಮಂದಿ ಸೈನಿಕರು ಗಾಯಗೊಂಡಿದ್ದರು. ಆ ನಂತ್ರ ಅದಕ್ಕೆ ಪ್ರತೀಕಾರವಾಗಿ ಪಿಓಕೆನಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನ Mi-17 ಹೆಲಿಕಾಪ್ಟರ್‌‌ಗಳಲ್ಲಿ ತೆರಳಿದ ಇಂಡಿಯನ್ ಕಮಾಂಡೋಗಳು ಅವ್ರ ಬಂಕರ್‌ಗಳನ್ನ ಉಡೀಸ್ ಮಾಡ್ತಾರೆ. ಅದೇ ಉರಿ- ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ.

ಕರ್ನಲ್ ಕಪಿಲ್ ಯಾದವ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಟೀಂನ ಲೀಡ್ ಮಾಡಿ, ಯಶಸ್ವಿ ಕಾರ್ಯಾಚರಣೆ ಮಾಡ್ತಾರೆ. ಅಜಿತ್ ದೋವಲ್ ಪಾತ್ರದಲ್ಲಿ ಪರೇಶ್ ರಾವಲ್ ಮಿಂಚು ಹರಿಸಿದ್ರು. 2019ರಲ್ಲಿ ತೆರೆಕಂಡ ಈ ಸಿನಿಮಾ, ಭಾರತೀಯರಿಗೆ ರೋಮಾಂಚನ ನೀಡಿತ್ತು. ಸಿನಿಮಾದ ಕ್ಲೈಮ್ಯಾಕ್ಸ್‌‌ನಲ್ಲಿ ಎಲ್ಲರೂ ಎದ್ದು ನಿಂತು ಭಾರತ್ ಮಾತಾ ಕಿ ಜೈ ಅಂತ ಘೋಷಣೆಗಳನ್ನ ಕೂಗಿದ್ರು. 44 ಕೋಟಿಯಲ್ಲಿ ತಯಾರಾದ ಚಿತ್ರ 343 ಕೋಟಿ ಗಳಿಸಿ, 4 ನ್ಯಾಷನಲ್ ಅವಾರ್ಡ್‌ಗಳನ್ನ ಮುಡಿಗೇರಿಸಿಕೊಂಡಿತ್ತು. ಹೌ ಈಸ್ ದ ಜೋಶ್ ಅಂದ್ರೆ ಹೈ ಸರ್ ಅನ್ನೋ ಡೈಲಾಗ್ ಕಿಕ್ ನೀಡಿತ್ತು.

1971ರಲ್ಲಿ ಭಾರತ- ಪಾಕಿಸ್ತಾನ್ ಯುದ್ಧದ ಸಮಯದಲ್ಲಿ PNS ಘಾಜಿ ಮುಳುಗಿದ ಘಟನೆಗಳಿಂದ ಪ್ರೇರಿತವಾದ ಸಿನಿಮಾ ‘ದಿ ಘಾಜಿ ಅಟ್ಯಾಕ್’. ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆ, ಕಾರ್ಯನಿರ್ವಾಹಕ ನೌಕಾಧಿಕಾರಿ ಮತ್ತು ಅವರ ತಂಡ ಸುಮಾರು 18 ದಿನಗಳ ಕಾಲ ನೀರಿನೊಳಗೆ ಇದ್ದು ಬಹುದೊಡ್ಡ ಸಾಹಸ ಮಾಡಿದರು. ಇದು ಭಾರತೀಯ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕರಂಜ್(ಎಸ್ 21)ನಲ್ಲಿರುವ ಸಿಬ್ಬಂದಿಯ ಶೌರ್ಯದ ಕುರಿತಾದ ಕಥೆಯಾಗಿದೆ.

ಭಾರತದ ಹಕ್ಕುಗಳ ಪ್ರಕಾರ ವಿಶಾಖಪಟ್ಟಣಂ ತೀರದಲ್ಲಿ ನಮ್ಮ INS ವಿಕ್ರಾಂತ್‌‌ನ ನಾಶಮಾಡಲು ಭಾರತೀಯ ನೀರಿನೊಳಗೆ ನುಗ್ಗಿದ ಪಾಕಿಸ್ತಾನಿ PNS ಘಾಜಿ ಜಲಾಂತರ್ಗಾಮಿಯನ್ನು ನಮ್ಮ ನೌಕಾಧಿಕಾರಿಗಳು ನಾಶಮಾಡಿದರು. ಸಂಕಲ್ಪ ರೆಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ಕೆ ಕೆ ಮೆನನ್ & ಅತುಲ್ ಕುಲಕರ್ಣಿ ಮುಖ್ಯಭೂಮಿಕೆಯಲ್ಲಿದ್ದರು. ನ್ಯಾಷನಲ್ ಅವಾರ್ಡ್‌ ಪಡೆಯೋದ್ರ ಜೊತೆಗೆ ಬಾಕ್ಸ್ ಆಫೀಸ್ ಜೊತೆ ಭಾರತೀಯರ ಮನದಲ್ಲಿ ಸ್ಥಾನ ಪಡೆಯಿತು ದಿ ಘಾಜಿ ಅಟ್ಯಾಕ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (72)

ರಾತ್ರಿಯಿಡೀ ನಿದ್ದೆ ಬರದೇ ಒದ್ದಾಡುತ್ತಿದ್ದೀರಾ? ಇದೇ ಕಾರಣಕ್ಕೆ ಇರಬಹುದು

by ಶ್ರೀದೇವಿ ಬಿ. ವೈ
January 25, 2026 - 11:24 pm
0

BeFunky collage (71)

ಈ ತರಕಾರಿಗಳನ್ನು ಸಿಪ್ಪೆ ತೆಗೆಯಬೇಡಿ ಹಾಗೆ ತಿನ್ನಿ, ಆರೋಗ್ಯದ ರಹಸ್ಯ ನೋಡಿ!

by ಶ್ರೀದೇವಿ ಬಿ. ವೈ
January 25, 2026 - 11:13 pm
0

BeFunky collage (70)

ಸ್ನೇಹಿತರೇ ರೌಡಿಶೀಟರ್ ಆಟೋ ನಾಗನ ಭೀಕರ ಮರ್ಡರ್: ಹಣದ ವಿಚಾರಕ್ಕೆ ಹರಿದ ನೆತ್ತರು

by ಶ್ರೀದೇವಿ ಬಿ. ವೈ
January 25, 2026 - 10:46 pm
0

BeFunky collage (69)

IND vs NZ: ಅಭಿ-ಸೂರ್ಯ ಸಿಡಿಲಬ್ಬರದ ಅರ್ಧಶತಕ, ಟಿ20 ಸರಣಿ ಜಯಿಸಿದ ಟೀಂ ಇಂಡಿಯಾ!

by ಶ್ರೀದೇವಿ ಬಿ. ವೈ
January 25, 2026 - 10:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (62)
    ಮೂರು ವರ್ಷಗಳ ಗ್ಯಾಪ್..ಕಿಂಗ್ ಶಾರೂಖ್ ಖಾನ್ ರೀ-ಎಂಟ್ರಿ..!
    January 25, 2026 | 0
  • BeFunky collage (61)
    ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ
    January 25, 2026 | 0
  • BeFunky collage (60)
    ರಥಾವರ ಡೈರೆಕ್ಟರ್‌‌ ಜೊತೆ ಪೃಥ್ವಿ-ಧನ್ಯಾ ರಾಮ್‌‌ಕುಮಾರ್..!
    January 25, 2026 | 0
  • Untitled design 2026 01 25T144631.478
    ಡಾಲಿ ಧನಂಜಯ ದೊನ್ನೆ ಬಿರಿಯಾನಿ ತಿಂದಿದ್ದೇ ತಪ್ಪಾ..!
    January 25, 2026 | 0
  • Untitled design 2026 01 25T141826.538
    ತಮಿಳಿನ ಶಿವಕಾರ್ತಿಕೇಯನ್‌ಗೆ ಸಂತು ಆ್ಯಕ್ಷನ್ ಕಟ್..!
    January 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version