ಬಲರಾಮನ ದಿನಗಳು.. ಇದು ರೆಟ್ರೋ ಅಂಡರ್‌‌ವರ್ಲ್ಡ್ ಸಿನಿಮಾ!

Untitled design 2026 06 30T214931.789

ಅಂದು ಆ ದಿನಗಳು.. ಇಂದು ಬಲರಾಮನ ದಿನಗಳು. ಯೆಸ್.. ಬ್ಲಾಕ್ ಬಸ್ಟರ್ ಹಿಟ್ಸ್ ಇಲ್ಲದೆ ಸೊರಗಿ ಹೋಗಿದ್ದ ಚಂದನವಕ್ಕೆ ಕಲ್ಟ್ ಕ್ಲಾಸಿಕ್ ಚಿತ್ರದ ಮೂಲಕ ಭರವಸೆಯ ಆಶಾಕಿರಣ ಆಗಿದ್ದಾರೆ ವಿನೋದ್ ಪ್ರಭಾಕರ್. ಕೆ ಎಂ ಚೈತನ್ಯ ಡೈರೆಕ್ಷನ್ ಸ್ಕಿಲ್ಸ್‌‌ಗೆ ಪ್ರೇಕ್ಷಕರಷ್ಟೇ ಅಲ್ಲ, ಚಿತ್ರರಂಗದ ಮಂದಿ ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾಗಾದ್ರೆ ಸೆಲೆಬ್ರಿಟಿ ಶೋನಲ್ಲಿ ಸಿನಿಮಾನ ಕಣ್ತುಂನಿಕೊಂಡ ಸ್ಟಾರ್ಸ್ ಹೇಳಿದ್ದೇನು..?

 ಬಲರಾಮ ವಿನೋದ್‌ಗೆ ಇಂಡಸ್ಟ್ರಿ ಸ್ಟಾರ್ಸ್ ಬಹುಪರಾಕ್

ಅಂದು ‘ಆ ದಿನಗಳು’.. ಇಂದು ‘ಬಲರಾಮನ ದಿನಗಳು’

ಕಲ್ಟ್ ಕ್ಲಾಸಿಕ್ ರೆಟ್ರೋ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ

ಕಾಲ್ಪನಿಕ ಅಂದ್ರೂ 80-90ರ ಭೂಗತ ಲೋಕದ ಕೈಗನ್ನಡಿ

ಬಲರಾಮನ ದಿನಗಳು.. ಇದು ರೆಟ್ರೋ ಅಂಡರ್‌‌ವರ್ಲ್ಡ್ ಸಿನಿಮಾ. ಆರಂಭದಲ್ಲೇ ಇದೊಂದು ಕಾಲ್ಪನಿಕ ಕಥೆ ಎನ್ನಲಾಗಿದೆ. ಆದ್ರೆ ಪ್ರತಿ ಪಾತ್ರ, ಪ್ರತಿ ಸೀನ್ ಕೂಡ ಕಣ್ಣಿಗೆ ಕಟ್ಟಿದಂತಿದೆ. 80-90ರ ದಶಕದ ಬೆಂಗಳೂರಿನ ಭೂಗತಲೋಕದ ದಿನಗಳ ಕೈಗನ್ನಡಿಯಂತಿದೆ. ಜೈರಾಜ್, ಕೊತ್ವಾಲ್ ರಾಮಚಂದ್ರ, ಅಗ್ನಿ ಶ್ರೀಧರ್, ಮುತ್ತಪ್ಪ ರೈ ಸುತ್ತ ಈ ಕಥೆ ಸುತ್ತಲಿದೆ. ಅಚಾನಕ್ಕಾಗಿ ರೌಡಿಸಂಗೆ ಇಳಿಯೋ ನಾಯಕನಟ ಏನೆಲ್ಲಾ ತನ್ನ ಜೀವನದಲ್ಲಿ ನೋಡ್ತಾನೆ ಅನ್ನೋದೇ ಈ ಸಿನಿಮಾ.

ಆಗ ಆ ದಿನಗಳು ಸಿನಿಮಾನ ಕಟ್ಟಿಕೊಟ್ಟಿದ್ದ ಅದೇ ಕೆ ಎಂ ಚೈತನ್ಯ ಅವರು ಈಗ ಬಲರಾಮನ ದಿನಗಳು ಸಿನಿಮಾ ಮಾಡಿದ್ದಾರೆ. ನೋಡೋಕೆ ಕಲ್ಟ್ ಸಿನಿಮಾ ಅನಿಸಿದ್ರೂ, ಅದ್ರಲ್ಲೊಂದು ಕ್ಲಾಸಿಕ್ ಕಥೆಯಿದೆ. ನಿವೃತ್ತ ಆರ್ಮಿ ಆಫೀಸರ್‌ಗೆ ನ್ಯಾಯ ದೊರಕಿಸಿಕೊಡೋಕೆ ಬಲರಾಮ ಏನೆಲ್ಲಾ ಮಾಡ್ತಾನೆ ಅನ್ನೋದ್ರ ಜೊತೆ ಒಂದು ನವಿರಾದ ಪ್ರೇಮಕಥೆ ಕೂಡ ಸಾಗುತ್ತೆ. ವಿನೋದ್ ಪ್ರಭಾಕರ್ ಜೊತೆ ಪ್ರಿಯಾ ಆನಂದ್ ನಟಿಸಿದ್ದು, ಅವಿನಾಶ್, ಆನೆ ವಿನಯ್, ರಜತ್, ಡ್ರ್ಯಾಗನ್ ಮಂಜು, ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ.. ಹೀಗೆ ಬಹುದೊಡ್ಡ ತಾರಾಗಣವಿದೆ.

ಶ್ರೇಯಸ್ ನಿರ್ಮಾಣದ ಬಲರಾಮನ ದಿನಗಳು ಮಕ್ಕಳಿಂದ ಮುದುಕರ ವರೆಗೂ ನೋಡಬಹುದಾದ ಸಾಮಾಜಿಕ ಸಂದೇಶದ ಸಿನಿಮಾ ಆಗಿದೆ. ಈ ಸಿನಿಮಾಗೆ ಬರೀ ಚಿತ್ರಪ್ರೇಮಿಗಳಷ್ಟೇ ಅಲ್ಲ, ಚಿತ್ರರಂಗದ ಖ್ಯಾತ ನಟ, ನಟಿಯರು ಹಾಗೂ ನಿರ್ದೇಶಕರುಗಳು ಕೂಡ ಭೇಷ್ ಅಂದಿರೋದು ವಿಶೇಷ.

ಒಟ್ಟಾರೆ ಇಷ್ಟೆಲ್ಲಾ ಮಂದಿ ಬಂದು ಬಲರಾಮನ ಬಲ ಹೆಚ್ಚಿಸಿರೋದು, ಅದರ ಬಗ್ಗೆ ಹಾಡಿ ಹೊಗಳಿರೋದು ಗ್ರೇಟ್. ಯಶಸ್ವಿ ಎರಡೇ ವಾರದತ್ತ ನಾಗಾಲೋಟ ಮುಂದುವರೆಸಿರೋ ಈ ಸಿನಿಮಾ ಅನ್ನದಾತರ ಜೋಳಿಗೆ ತುಂಬಿಸಲಿ. ಬಾಕ್ಸ್ ಆಫೀಸ್‌ ಜೋಶ್ ಹೆಚ್ಚಿಸಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version