ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಬರ್ತ್ ಡೇಗೆ ಇನ್ನೊಂದೇ ಒಂದು ದಿನ ಬಾಕಿಯಿದೆ. ಇದೀಗ ಪರಪ್ಪನ ಅಗ್ರಹಾರದತ್ತ ತೆರಳಿರೋ ರಚ್ಚುಗೆ ದಾಸ ದರ್ಶನ್ ದರ್ಶನ ಸಿಕ್ತಾ ಇಲ್ವಾ..? ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಚಿತಾಗೆ ತಮ್ಮ ಗುರುಗಳನ್ನ ನೋಡುವ ಹಂಬಲ ಏತಕ್ಕೆ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
- ಪರಪ್ಪನ ಅಗ್ರಹಾರಕ್ಕೆ ರಚಿತಾ.. ಗುರುಗಳನ್ನ ನೋಡೋಕೆ ಗುರು.!
- ಜೈಲು ಬಳಿ ಕಾದು ಕಾದು ವಾಪಸ್.. ಸಿಗ್ಲೇ ಇಲ್ಲ ದಾಸನ ದರ್ಶನ
- ಅ-3ಕ್ಕೆ ರಚ್ಚು ಬರ್ತ್ ಡೇ.. ಅದಕ್ಕೂ ಮುನ್ನ ದಚ್ಚುಗಾಗಿ ತೆರಳಿದ್ರು
- ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ.. ರಚ್ಚುಗೆ ಸಿಗದ ಅನುಮತಿ
ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಲೇಡಿ ಸೂಪರ್ ಸ್ಟಾರ್. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿರೋ ಕನ್ನಡದ ನಂ.1 ನಟಿಮಣಿ. ಕನ್ನಡದ ಜೊತೆ ಜೊತೆಗೆ ಪರಭಾಷೆಗಳಲ್ಲೂ ಡಿಮ್ಯಾಂಡ್ ಇರೋ ಕನ್ನಡ ಚೆಲುವೆ. ಅಂದಹಾಗೆ ಇಂದು ರಚಿತಾ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಒನ್ & ಓನ್ಲಿ ಡಿಬಾಸ್ ದರ್ಶನ್. ಹೌದು.. ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಟಿಯನ್ನಾಗಿ ರಚ್ಚುನ ಲಾಂಚ್ ಮಾಡಿದ್ದೇ ದಾಸ ದರ್ಶನ್.
ಬುಲ್ ಬುಲ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅಂಬರೀಶ ಹಾಗೂ ಕ್ರಾಂತಿ ಸಿನಿಮಾಗಳಲ್ಲೂ ಈ ಜೋಡಿ ಮತ್ತೆ ಮತ್ತೆ ಮೋಡಿ ಮಾಡಿತ್ತು. ರಚಿತಾ ನಟ ದರ್ಶನ್‌ರನ್ನ ಸದಾ ಗೌರವದಿಂದ ಹಾಗೂ ಅಭಿಮಾನದಿಂದ ನೋಡ್ತಾರೆ. ತನ್ನ ಮೆಂಟರ್, ಗುರು ಅವರೇ ಎನ್ನುವ ರಚ್ಚು, ಆತ ಬೇಗ ಕಾನೂನು ಸಂಕಷ್ಟದಿಂದ ಮುಕ್ತರಾಗಿ ಹೊರಬರಲಿ ಅಂತ ಸಾಕಷ್ಟು ಸಲ ಪೋಸ್ಟ್ ಹಾಖಿದ್ದೂ ಉಂಟು. ಯಾವುದೇ ಶಿಷ್ಯಗೆ ತಮ್ಮ ಗುರುಗಳ ಮೇಲೆ ಅಂಥದ್ದೇ ಒಂದು ಭಾವನೆ ಇರೋಕೆ ಸಾಧ್ಯ. ನಾನು ವ್ಯಕ್ತಿ ಪೂಜೆ ಮಾಡೋದ್ರಲ್ಲಿ ತಪ್ಪೇನಿದೆ. ನನ್ನ ಕೊನೆಯ ಉರಿಸಿರೋ ತನಕ ದರ್ಶನ್ ಸರ್ ಹೆಸರು ಹೇಳ್ತಾನೇ ಇರ್ತೀನಿ ಅಂದಿದ್ರು ಕೂಡ.
ಅದೇ ಕಾರಣಕ್ಕೆ ಇದೇ ಅಕ್ಟೋಬರ್ 3ರಂದು ತಮ್ಮ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಳ್ಳೋಕೂ ಮುನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಡಿಬಾಸ್ ದರ್ಶನ್ ದರ್ಶನ ಪಡೆದು, ಕುಶಲೋಪರಿ ಹಂಚಿಕೊಂಡು ಬರಲು ನಿರ್ಧರಿಸಿದ್ರು ರಚ್ಚು. ಅದರಂತೆ ಜೈಲಿನ ಬಳಿ ತೆರಳಿದ್ದ ರಚ್ಚು, ಬಂದ ದಾರಿಗೆ ಸುಂಕವಿಲ್ಲ ಅಂದಂತೆ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಜೈಲಾಧಿಕಾರಿಗಳ ಅನುಮತಿ ಸಿಕ್ಕರೂ, ದರ್ಶನ್ ಅವರೇ ಈ ಪರಿಸ್ಥಿತಿಯಲ್ಲಿ ಭೇಟಿ ಸಮಂಜಸವಲ್ಲ ಅಂತ ಮೀಟ್ ಮಾಡದೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಕಾರ್‌ನಲ್ಲೇ ಸಾಕಷ್ಟು ಹೊತ್ತು ಜೈಲು ಬಳಿ ಕಾದಂತಹ ರಚಿತಾ, ನಿರಾಸೆಯಿಂದ ಹಿಂದಿರುಗಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ.
ಒಟ್ಟಾರೆ ರಚಿತಾ ರಾಮ್ ಬರ್ತ್ ಡೇಗೆ ದರ್ಶನ್ ಶುಭಾಶಯ ಸಿಕ್ಕಿಲ್ಲ. ಆದ್ರೆ ಆ ವ್ಯಕ್ತಿ ಮೇಲೆ ರಚ್ಚುಗಿರೋ ಗ್ರ್ಯಾಟಿಟ್ಯೂಡ್ ಮಾತ್ರ ಮೆಚ್ಚುವಂಥದ್ದು. ಸದ್ಯ ಮೆಗಾಸ್ಟಾರ್ ಚಿರಂಜೀವಿ ಕಾಕ ಚಿತ್ರದಲ್ಲಿ ಅಭಿನಯಿಸ್ತಿರೋ ರಚ್ಚು, ತಾನಾಯ್ತು ತಮ್ಮ ಕೆಲಸ ಆಯ್ತು ಅಂತ ಬ್ಯುಸಿ ಆಗಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
