ಇಂಡಸ್ಟ್ರಿ ಉದ್ಧಾರ ಮಾಡಲು ಟೊಂಕ ಕಟ್ಟಿ ನಿಂತಿರೋ ಜೂನಿಯರ್ ಟೈಗರ್ ವಿನೋದ್ ಪ್ರಭಾಕರ್, ಬಲರಾಮನ ದಿನಗಳು ಸಾಂಗ್ ಲಾಂಚ್ ಇವೆಂಟ್‌ನಲ್ಲಿ ಭರವಸೆಯ ಮಾತುಗಳನ್ನಾಡಿದ್ದಾರೆ. ಅನ್ನದಾತನ ಬೆನ್ನಿಗೆ ನಿಂತಿರೋ ಟೈಸನ್, ಇತರರಿಗೂ ಮಾದರಿ ಆಗುವಂತೆ ಮಾತನಾಡಿದ್ದಾರೆ. ಇಷ್ಟಕ್ಕೂ ಅವರು ಹೇಳಿದ್ದಾದ್ರೂ ಏನು..? ಹೇಗಿದೆ ಹೊಚ್ಚ ಹೊಸ ಐಟಂ ನಂಬರ್ ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ..
- ಅನ್ನದಾತನ ಬೆಂಬಲಕ್ಕೆ ಟೈಸನ್.. 7ಕೋಟಿಯಲ್ಲಿ ಬಲರಾಮ
- ಬಲರಾಮನ ದಿನಗಳ ‘ಕ್ವಾಟ್ರು’ ಸಾಂಗ್ ಸಖತ್ ಗ್ಲಾಮರ್..!
- ರೆಟ್ರೋ ಅಂಡರ್ವರ್ಲ್ಡ್ ಚಿತ್ರದಲ್ಲಿ ಹಾಟ್ ಐಟಂ ನಂಬರ್
- ಭೂಗತ ಲೋಕದಲ್ಲಿ ನಟ ವಿನೋದ್.. ಜೂನ್ 26ಕ್ಕೆ ತೆರೆಗೆ
ಕೆ. ಎಂ. ಚೈತನ್ಯ ನಿರ್ದೇಶನದ ಬಲರಾಮನ ದಿನಗಳು ಚಿತ್ರದ ರೆಟ್ರೋ ಶೈಲಿಯ ಕ್ವಾಟರ್ರು ಸಾಂಗ್‌ನ ಹಿರಿಯನಟಿ ತಾರಾ ಅನುರಾಧಾ ಬಿಡುಗಡೆ ಮಾಡಿದರು. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿರೋ ಈ ಹಾಡಿಗೆ ನಟಿ ವಂದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ಪಡ್ಡೆ ಹೈಕ್ಳ ನಿದ್ದೆ ಕೆಡಿಸೋ ಐಟಂ ನಂಬರ್ ಇದಾಗಿದ್ದು, ಸಖತ್ ಗ್ಲಾಮರಸ್ ಆಗಿ ಮೂಡಿಬಂದಿದೆ.
ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಅಭಿನಯದ ಈ ಚಿತ್ರವನ್ನು ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ನಿರ್ಮಿಸಿದ್ದಾರೆ. ಈ ವೇಳೆ ನಟಿ ತಾರಾ ಮಾತನಾಡುತ್ತಾ ಈ ಪೆಪ್ಪಿ ಸಾಂಗ್ ತುಂಬಾ ಚೆನ್ನಾಗಿದೆ. ಶ್ರೇಯಸ್ ತುಂಬಾ ಪ್ಯಾಷನ್ ಇರೋ ನಿರ್ಮಾಪಕ. ಆತನಿಗೆ ವಿನೋದ್ ಕಂಡ್ರೆ ತುಂಬಾ ಪ್ರೀತಿ, ಅಲ್ಲದೆ ಪದ್ಮಮ್ಮ ಕೂಡ ಒಳ್ಳೇ ಪ್ರೊಡ್ಯೂಸರ್. ಅವರು ಇಡೀ ತಂಡಕ್ಕೆ ತಾಯಿ ಅಂದ್ರೆ ತಪ್ಪಾಗಲ್ಲ. ಮೂರು ಜನ ಸೇರಿ ಇಡೀ ಚಿತ್ರವನ್ನು ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ವೇಣು ಕ್ಯಾಮೆರಾ ವರ್ಕ್ ಸಹ ಚೆನ್ನಾಗಿದೆ. ಸಿನಿಮಾ ತುಂಬಾ ಕ್ಲಾಸಿಕ್ ಆಗಿ ಮೂಡಿಬಂದಿದೆ ಎಂದರು.
ನಿರ್ಮಾಪಕ ಶ್ರೇಯಸ್ ಮಾತನಾಡಿ ಇವತ್ತು ನಮ್ಮ ಸಿನಿಮಾದ ಮೂರನೇ ಹಾಡನ್ನು ರಿಲೀಸ್ ಮಾಡಿದ್ದೇವೆ. ಸದ್ಯದಲ್ಲೇ ಮತ್ತೊಂದು ಸಾಂಗ್ ಹಾಗೂ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು. ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ, ಚಿತ್ರದ ಬಗ್ಗೆ ನನಗೆ ಯಾವುದೇ ರೀತಿಯ ಭಯವಿಲ್ಲ. ಯಾಕಂದ್ರೆ ನಿರ್ದೇಶಕರ ಮೇಲೆ ತುಂಬಾ ವಿಶ್ವಾಸವಿದೆ. ಇಂಥ ಸೀನಿಯರ್‌ಗಳನ್ನೆಲ್ಲಾ ನನ್ನ ಮಗ ಕರೆತಂದಿದ್ದಾನೆಂಬ ಖುಷಿಯಿದೆ ಎಂದರು.
ಬಲರಾಮನ ದಿನಗಳು ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ವಿನೋದ್ ಪ್ರಭಾಕರ್ ತುಂಬಾ ಟ್ಯಾಲೆಂಟ್ ಇರುವ ಕಲಾವಿದ. ಈ ಚಿತ್ರವನ್ನು ಥಿಯೇಟರಿನಲ್ಲೇ ನೋಡಬೇಕು. ಆಗಲೇ ಫೀಲ್ ಬರೋದು. ಆ ದಿನಗಳು ಚಿತ್ರ ಬಿಡುಗಡೆಯಾದ 19 ವರ್ಷಗಳ ನಂತರ ಈ ಸಿನಿಮಾ ಮಾಡಲು ಸಾಕಷ್ಟು ಪುಸ್ತಕಗಳನ್ನು ಸ್ಟಡಿ ಮಾಡಿ, ಅಂಡರ್‌ವರ್ಡ್ಲ್ ಬಗ್ಗೆ ತಿಳಿದುಕೊಂಡು ಕಥೆ ಬರೆದೆ. ಅದರ ಮತ್ತೊಂದು ವರ್ಷನ್ ಇದು ಅಂದ್ರು ನಿರ್ದೇಶಕ ಚೈತನ್ಯ.
ನಾಯಕ ವಿನೋದ್ ಪ್ರಭಾಕರ್ ಮಾತನಾಡಿ.. ಮಾದೇವ ನಂತರ ಕಮಿಟ್ ಆದ ಚಿತ್ರವಿದು. ಒಬ್ಬ ನಟನಾಗಿ ಯಾವುದೇ ಪಾತ್ರ ಮಾಡಲು ನಾನು ಸಿದ್ದ. ಅದರಲ್ಲೂ ಇದೊಂದು ಕಾಲ್ಪನಿಕ ಕಥೆ, ಬಯೋಪಿಕ್ ಮಾಡುವಾಗ ಭಯ ಇದ್ದೇ ಇರುತ್ತದೆ. ನನ್ನ ಸಿನಿ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಚಿತ್ರವಿದು. ಕೆವಿಎನ್ ಮೂಲಕ ರಿಲೀಸ್ ಆಗ್ತಿರುವುದು ನಮ್ಮ ಚಿತ್ರಕ್ಕೆ ಆನೆಬಲ ಸಿಕ್ಕಂತಾಗಿದೆ ಎಂದರು.
ಅಷ್ಟೇ ಅಲ್ಲ, ನನ್ನ ಮೇಲೆ ಜಾಸ್ತಿ ಬಂಡವಾಳ ಹಾಕಬೇಡಿ.. ಸಿನಿಮಾದ ಬಜೆಟ್ 7 ಕೋಟಿ ಮೀರಬಾರದು ಅಂದಿದ್ರಂತೆ ವಿನೋದ್ ಪ್ರಭಾಕರ್.
ಈ ಮಾತು ನಿಜಕ್ಕೂ ಗ್ರೇಟ್. ಯಾಕಂದ್ರೆ ಈಗಿನ ಬಹುತೇಕ ಹೀರೋಗಳು ನಿರ್ಮಾಪಕರುಗಳಿಂದ ತಮ್ಮ ಕೆಪ್ಯಾಸಿಟಿಗಿಂತ ಜಾಸ್ತಿ ಬಜೆಟ್ ಹಾಕಿಸ್ತಾರೆ. ರಿಟರ್ನ್ಸ್ ಇರಲ್ಲ. ಹಾಗಾಗಿ ನಿರ್ಮಾಪಕರುಗಳು ಬೀದಿಗೆ ಬರುವಂತಾಗ್ತಿದೆ. ಹಾಗಾಗಿ ಅಂಥವರುಗಳ ನಡುವೆ ಇಂಡಸ್ಟ್ರಿ ಉದ್ಧಾರಕ್ಕೆ ನಿಂತಿರೋ ಮರಿ ಟೈಗರ್ ನಡೆ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಅನಿಸಿದೆ. ಹಾಗಂತ ಈಗ ಬಲರಾಮನ ದಿನಗಳು ಚಿತ್ರ ಏನೂ 7 ಕೋಟಿಯಲ್ಲೇ ಕಂಪ್ಲೀಟ್ ಆಗಿಲ್ಲ. ಅದನ್ನ ಮೀರಿದ ಬಜೆಟ್ ಆಗಿದೆ ಅನ್ನೋದು ಅಚ್ಚರಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
