ಬೆಂಗಳೂರು ಪಬ್‌ನಲ್ಲಿ ಮಿಡಲ್ ಫಿಂಗರ್ ತೋರಿಸಿ ಅಸಭ್ಯ ಸನ್ನೆ ಮಾಡಿದ ಶಾರೂಖ್ ಪುತ್ರ

Untitled design 2025 12 04T160445.730

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬೆಂಗಳೂರಿನ ಒಂದು ಹೈ-ಎಂಡ್ ಪಬ್‌ನಲ್ಲಿ ಸಾರ್ವಜನಿಕವಾಗಿ ಮಿಡಲ್ ಫಿಂಗರ್ ತೋರಿಸಿದ್ದಾರೆ. ಈ ಘಟನೆಯ ವೀಡಿಯೊ ಕೆಲವೇ ಗಂಟೆಗಳಲ್ಲಿ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿ,  ಟೀಕೆಗೆ ಗುರಿಯಾಗಿದೆ.

ವೀಡಿಯೊದಲ್ಲಿ ಆರ್ಯನ್ ಖಾನ್ ತಮ್ಮ ಸ್ನೇಹಿತರೊಂದಿಗೆ ಪಬ್‌ನಿಂದ ಹೊರಬರುತ್ತಿರುವುದು ಕಂಡುಬಂದಿದೆ. ಹೊರಗೆ ಕಾಯುತ್ತಿದ್ದ ಅಭಿಮಾನಿಗಳು ಮತ್ತು ಪಾಪರಾಜಿಗಳು ಫೋಟೋ-ವೀಡಿಯೊ ತೆಗೆದಿದ್ದಾರೆ. ಆ ವೇಳೆ ಆರ್ಯನ್ ಕೈ ಬೀಸಿದ ನಂತರ ಮಿಡಲ್ ಫಿಂಗರ್ ತೋರಿಸುತ್ತಾರೆ.

ಆರ್ಯನ್ ಖಾನ್‌‌ ಅವರು ಆ ರಾತ್ರಿ ತಮ್ಮ ಆಪ್ತ ಸ್ನೇಹಿತರಾದ ಜೈದ್ ಖಾನ್ ಹಾಗೂ ಬೆಂಗಳೂರಿನ ಪ್ರಮುಖ ಬಿಲ್ಡರ್ ಹಾಗೂ ರಾಜಕೀಯ ಮುಖಂಡನ ಪುತ್ರ ಮೊಹಮದ್ ನಲಪಾಡ್ ಜೊತೆಯಲ್ಲಿದ್ದರು. ಮೂವರೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ, ನಂತರ ಆ ಪಬ್‌ಗೆ ತೆರಳಿದ್ದರು. ಈ ವೀಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶದ ಅಲೆ ಎದ್ದಿದೆ.

Exit mobile version