ಪ್ರಭಾಸ್ ಫ್ಯಾನ್ಸ್‌‌ಗೆ ಗುಡ್ ನ್ಯೂಸ್..ಬರ್ತಿದೆಯಾ ಬಾಹುಬಲಿ-3..?

ಬಾಹುಬಲಿ-3 ಬಗ್ಗೆ ಅನುಷ್ಕಾ-ಪ್ರಭಾಸ್ ಕೊಟ್ಟ ಮೆಗಾ ಕ್ಲೂ..!

Untitled design 2026 06 27T172714.549

ಇಂಡಿಯನ್ ಸಿನಿಮಾ ಹಿಸ್ಟರಿಯನ್ನೇ ಚೇಂಜ್ ಮಾಡಿ, ಪ್ಯಾನ್ ಇಂಡಿಯಾ ಕ್ರೇಜ್ ಹುಟ್ಟುಹಾಕಿದ್ದ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ರಾಜಮೌಳಿ ಕಾಂಬಿನೇಷನ್‌ನ ‘ಬಾಹುಬಲಿ’ ನೆನಪಿದೆಯಲ್ಲಾ..? ಎಷ್ಟೇ ಸಿನಿಮಾಗಳು ಬಂದ್ರೂ ಬಾಹುಬಲಿ ರೇಂಜ್ ರೀಚ್ ಮಾಡೋಕೆ ಯಾರಿಂದಲೂ ಸಾಧ್ಯವಾಗಿಲ್ಲ ಅನ್ನೋದು ಸದ್ಯದ ಟಾಕ್. ಆದ್ರೆ ಈಗ ಇಡೀ ಚಿತ್ರರಂಗವೇ ಶೇಕ್ ಆಗೋ ಬಿಗ್ಗೆಸ್ಟ್ ಗುಸುಗುಸು ಒಂದು ಟಿ-ಟೌನ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಹೌದು, ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ 2 ಭಾಗಗಳ ಬೆನ್ನಲ್ಲೇ, ಈಗ ‘ಬಾಹುಬಲಿ ಪಾರ್ಟ್-3’ ಬರೋದು ಪಕ್ಕಾ ಅನ್ನೋ ಗಾಸಿಪ್ ವೈರಲ್ ಆಗ್ತಿದೆ. ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ…

ಬಾಹುಬಲಿ.. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾ.. ಬಾಹುಬಲಿ ಸಿನಿಮಾದ ಮೇಕಿಂಗ್​ ಕ್ಯಾಮೆರಾ ವರ್ಕ್​ ಅದ್ಭುತ ವಿಎಫಎಕ್ಸ್​ ಕಣ್ಣಿಗೆ ಹಬ್ಬದಂತೆ ಇತ್ತು.. ಎಷ್ಟೇ ಸಿನಿಮಾಗಳಯ ಬಂದು ಹೋದರು ಯಾರೂ ಕೂಡ ಬಾಹುಬಲಿ ರೇಂಜ್​ಗೆ ಸಿನಿಮಾ ಮಾಡೋಕಾಗೋದಿಲ್ಲ ಅಂತ ಅನೇಕರು ಹೇಳಿದ್ದಾರೆ.. ಯಾಕಂದ್ರೆ ಪ್ಯಾನ್​ ಇಂಡಿಯಾ ಟ್ರೆಂಡ್​ ಹುಟ್ಟುಹಾಕಿದ್ದ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್​ ಮಾಡಿದ್ದ ದಾಖಲೆ ಅಂತಿತದ್ದಲ್ಲ.

ಯೆಸ್​, ಭಾರತೀಯ ಚಿತ್ರರಂಗದಲ್ಲಿ ಸಿಕ್ವೇಲ್​ ಸಿನಿಮಾಗಳ ಟ್ರೆಂಡ್​ ಶುರುವಾಗಿದೆ ಇಲ್ಲಿಂದ..ಒಂದು ಸಿನಿಮಾ ಮಾಡಲು ಬರೆದಿದ್ದ ಕಥೆಯನ್ನು ಹಿಗ್ಗಿಸಿ ಎರಡು ಭಾಗಗಳಾಗಿ ‘ಬಾಹುಬಲಿ’ ಸರಣಿ ಚಿತ್ರಗಳನ್ನು ತೆರೆಗೆ ತರಲಾಗಿತ್ತು. ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಅಮರೇಂದ್ರ ಬಾಹುಬಲಿ ಮಗ ಮಹೇಂದ್ರ ಬಾಹುಬಲಿ ರಾಜನಾಗಿ ಪಟ್ಟಾಭಿಷೇಕ ಮಾಡುವುದರೊಂದಿಗೆ 2ನೇ ಭಾಗ ಮುಕ್ತಾಯವಾಗಿತ್ತು. ಸಾಕಷ್ಟು ಜನ ಕಥೆಯನ್ನು ಮುಂದುವರೆಸಬೇಕು, ಪಾರ್ಟ್- 3 ಬರುತ್ತಾ ಎಂದು ಕೇಳಿದ್ದರು. ರಾಜಮೌಳಿ ಕಥೆ ಇಲ್ಲ, ನೋಡೋಣ, ಮಾಡೋಣ ಎನ್ನುತ್ತಲೇ ಬಂದಿದ್ದರು. ಆದ್ರೆ ಈಗ ರಾಜಮೌಳಿ ಮನಸು ಮಾಡಿ ಕೊನೆಗೂ ಬಾಹುಬಲಿ3 ಕಟ್ಟಿಕೊಡಲು ತಯಾರಾಗುತ್ತಿದ್ದಾರೆ ಅಂತ ಹೇಳಲಾಗಿದೆ.

ಯೆಸ್​,, ಅರೇ ಬಾಹುಬಲಿ -3 ಬರುತ್ತೆ ಅಂತ ಹೇಳಿದ ತಕ್ಷಣ ನೀವು ಕೂಡ ಥ್ರಿಲ್​ ಆದ್ರಿ ಅಲ್ವಾ.. ಬಟ್​ ಇದು ನಿಜನಾನೇ ಯಾಕಂದ್ರೆ ಇದನ್ನ ರಿವೀಲ್​ ಮಾಡಿರೋದು ಬಹುಬಲೊ ಸಿನಿಮಾ ಬಳಾಲ್ಲದೇವ ಮತ್ತು ದೇವಸೇನಾ.  ‘ಬಾಹುಬಲಿ: ದಿ ಟಾರ್ಚ್‌ಬೇರರ್’ ಹೆಸರಿನಲ್ಲಿ ಡಾಕ್ಯುಮೆಂಟರಿ ನಿರ್ಮಾಣವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಬಾಹುಬಲಿ ಕಲ್ಪನೆ, ಮೇಕಿಂಗ್, ರಿಲೀಸ್, ಬಾಕ್ಸಾಫೀಸ್ ಹೀಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಾಜಮೌಳಿ, ರಮಾ ರಾಜಮೌಳಿ ಹೀಗೆ ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲವೂ ಮಾತನಾಡಿದ್ದಾರೆ. ಇದೇ ವೇಳೆ ‘ಬಾಹುಬಲಿ- 3’ ಬಗ್ಗೆ ನಟ ರಾಣಾ ಸುಳಿವು ನೀಡಿದ್ದಾರೆ.

ರಾಣಾ ಮಾತನಾಡುತ್ತಾ “ನಾನು ಈ ವಿಚಾರವನ್ನು ಪಬ್ಲಿಕ್ ಆಗಿ ಹೇಳಬೇಕೊ ಬೇಡವೋ ಗೊತ್ತಿಲ್ಲ.. ರಾಜಮೌಳಿ ಹಾಗೂ ನಿರ್ಮಾಪಕ ಶೋಭು ಇಲ್ಲಿ ಇಲ್ಲದೇ ಇರುವುದರಿಂದ ನನ್ನ ಮನಸ್ಸಿಲ್ಲಿರುವುದನ್ನು ಹೇಳ್ತೀನಿ. ಜಗತ್ತು ಇದಕ್ಕೆ ಸಿದ್ಧವಾಗದೇ ಇರಬಹುದು. ಆದರೆ ‘ಬಾಹುಬಲಿ’ ಬರಲಿದೆ, ಎಂದು ಹೇಳಿ ನಿಲ್ಲಿಸುತ್ತಿದ್ದಂತೆ ಪ್ರಭಾಸ್ ಹಾಗೂ ಅನುಷ್ಕಾ ‘ಬಾಹುಬಲಿ’-3 ಎಂದು ಕುತೂಹಲ ಮೂಡಿಸಿದ್ದಾರೆ. ಅಲ್ಲಿಗೆ ಮತ್ತೊಂದು ಭಾಗದಲ್ಲಿ ಮಾಹಿಷ್ಮತಿ ಕಥೆ ತೆರೆಮೇಲೆ ಬರುತ್ತದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

‘ಬಾಹುಬಲಿ’-2 ಚಿತ್ರದಲ್ಲಿ ಬಲ್ಲಾಳದೇವನಾಗಿ ರಾಣಾ ಪಾತ್ರ ಮುಕ್ತಾಯವಾಗಿದೆ. ಒಂದು ವೇಳೆ ಕಥೆಯನ್ನು ಮುಂದುವರೆಸಿದರೆ ದೇವಸೇನಾ ಆಗಿ ಅನುಷ್ಕಾ, ಮಹೇಂದ್ರ ಬಾಹುಬಲಿಯಾಗಿ ಪ್ರಭಾಸ್ ಮುಂದುವರೆಯಲಿದ್ದಾರೆ ಎಂದು ಕೆಲವರು ನಿರೀಕ್ಷೆ ಮಾಡುತ್ತಿದ್ದಾರೆ. ಸದ್ಯಕ್ಕೆ ಮತ್ತೊಂದು ಸೀಕ್ವೆಲ್ ಮಾಡುವುದು ಅನುಮಾನ ಅಂತಲೂ ಕೆಲವರು ಹೇಳಿದ್ರೆ, ಇನ್ನು ಕೆಲವರು ಮಹೇಂದ್ರ ಬಾಹುಬಲಿ ಆಡಳಿತ ಹೇಗಿರುತ್ತೆ, ಆತನಿಗೆ ಮುಂದೆ ಎದುರಾಗುವ ಸವಾಲುಗಳೇನು, ಅದನ್ನು ಹೇಗೆ ನಿವಾರಿಸಿಕೊಳ್ಳುತ್ತಾನೆ, ಇದರ ಹಿನ್ನೆಲೆಯಲ್ಲಿ ಅಮರೇಂದ್ರ ಬಾಹುಬಲಿ, ಬಲ್ಲಾಳದೇವ, ದೇವಸೇನಾ, ಕಟ್ಟಪ್ಪ ಹಾಗೂ ಶಿವಗಾಮಿ ಪಾತ್ರಗಳನ್ನು ಫ್ಲ್ಯಾಶ್‌ಬ್ಯಾಕ್ ತಂತ್ರ ಅನುಸರಿಸಿ ಕಥೆ ಹೇಳಲು ಅವಕಾಶವಿದೆ ಅಂತಲೂ ಕಾಮೆಂಟ್​ ಮಾಡುತ್ತಿದ್ದಾರೆ.. ಸೋ ಬಾಹುಬಲಿ 3 ಬರುತ್ತಾ ಇಲ್ವಾ ಅನೊದನ್ನ ಕಾದುನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version