ರಾಮಾಯಣ ಮೆಗಾ ಸೆಲೆಬ್ರೇಷನ್‌ಗೆ ಕೌಂಟ್‌ಡೌನ್..!

ಆಸ್ಕರ್ ವಿಜೇತ ‘DNEG’ ಸಂಸ್ಥೆಯಿಂದ ವಿಎಫ್‌ಎಕ್ಸ್ ಮ್ಯಾಜಿಕ್!

Untitled design 2026 06 27T181742.561

ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಬಿಗ್ಗೆಸ್ಟ್ ಗ್ಲೋಬಲ್ ಗೇಮ್ ಚೇಂಜರ್ ಆಗೋಕೆ ರೆಡಿಯಾಗ್ತಿದೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’. ಈಗ ಬಂದಿರೋ ಕ್ರೇಜಿ ಅಪ್ಡೇಟ್ ಏನಂದ್ರೆ, ಈ ದೃಶ್ಯ ವೈಭವದ ಚಿತ್ರಕ್ಕೆ ದುಬೈನಲ್ಲಿ ಇಂಟರ್ನ್ಯಾಷನಲ್ ಲೆವೆಲ್‌ನ ಅದ್ದೂರಿ ಪ್ರೀಮಿಯರ್ ಪ್ಲಾನ್ ನಡೀತಿದೆ. ಚಿತ್ರತಂಡ ಇದಕ್ಕೆ ಇಟ್ಟಿರೋ ಕೋಡ್ ನೇಮ್ ‘ನೇಮ್ ಗೊತ್ತಾ..?ಯಶ್ ಮತ್ತು ರಣ್‌ಬೀರ್ ಕಪೂರ್ ಮುಖಾಮುಖಿಯಾಗೋ ಈ ಮೆಗಾ ಇವೆಂಟ್‌ನ ಇಂಟರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ ನೋಡಿ.

ವರ್ಲ್ಡ್ ಕ್ಲಾಸ್ ಬಜೆಟ್‌ನಲ್ಲಿ ಮೂಡಿಬರ್ತಿರೋ ‘ರಾಮಾಯಣ’ ಸಿನಿಮಾ ಗ್ಲೋಬಲ್ ಮಾರ್ಕೆಟ್ ಕಣ್ಣಿಟ್ಟಿದೆ. ಅಕ್ಟೋಬರ್ 28 ರಂದು ದುಬೈನ ಪ್ರಮುಖ ಹೈ-ಪ್ರೊಫೈಲ್ ಲೊಕೇಶನ್‌ಗಳಲ್ಲಿ ಚಿತ್ರದ ಅದ್ದೂರಿ ಪ್ರೀಮಿಯರ್ ಶೋ ನಡೆಸಲು ನಿರ್ದೇಶಕ ನಿತೇಶ್ ತಿವಾರಿ ಮತ್ತು ಪ್ರೊಡ್ಯೂಸರ್ ನಮಿತ್ ಮಲ್ಹೋತ್ರಾ ಭರ್ಜರಿ ಸ್ಕೆಚ್ ಹಾಕಿದ್ದಾರೆ. ಮಿಡಲ್ ಈಸ್ಟ್‌ನಲ್ಲಿ ಭಾರತೀಯರ ಕ್ರೇಜ್ ಬಿಗ್ ಆಗಿರೋದ್ರಿಂದ ಗ್ಲೋಬಲ್ ಪ್ರಮೋಷನ್‌ಗೆ ದುಬೈ ಬೆಸ್ಟ್ ಚಾಯ್ಸ್ ಅಂತಿದೆ ಚಿತ್ರತಂಡ.

ಈ ಇಂಟರ್ನ್ಯಾಷನಲ್ ರೆಡ್ ಕಾರ್ಪೆಟ್ ಇವೆಂಟ್‌ಗೆ ವರ್ಲ್ಡ್ ಮೀಡಿಯಾ ಸಾಕ್ಷಿಯಾಗಲಿದೆ. ಚಿತ್ರದಲ್ಲಿ ರಾಮನಾಗಿ ನಟಿಸಿರೋ ಬಾಲಿವುಡ್ ಸ್ಟಾರ್ ರಣ್‌ಬೀರ್ ಕಪೂರ್, ಸೀತೆಯಾಗಿರೋ ದಕ್ಷಿಣದ ಬ್ಯೂಟಿ ಸಾಯಿ ಪಲ್ಲವಿ ಮತ್ತು ಲಂಕಾಧಿಪತಿ ರಾವಣನಾಗಿ ಅಬ್ಬರಿಸಲಿರೋ ನಮ್ಮ ಹೆಮ್ಮೆಯ ‘ರಾಕಿಂಗ್ ಸ್ಟಾರ್’ ಯಶ್ ದುಬೈ ಪ್ರೀಮಿಯರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಯಶ್ ಮತ್ತು ರಣ್‌ಬೀರ್ ಮುಖಾಮುಖಿ ನೋಡೋಕೆ ಫ್ಯಾನ್ಸ್ ಆಲ್ರೆಡಿ ಫುಲ್ ಎಕ್ಸೈಟ್ ಆಗಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಗ್ಲೋಬಲ್ ವಿಎಫ್‌ಎಕ್ಸ್ ಸಂಸ್ಥೆ ‘DNEG’ ಈ ಚಿತ್ರದ ವಿಷುವಲ್ಸ್ ಅನ್ನು ಹಾಲಿವುಡ್ ರೇಂಜ್‌ಗೆ ಡಿಸೈನ್ ಮಾಡ್ತಿದೆ. ಸದ್ಯಕ್ಕೆ ಚಿತ್ರತಂಡದಿಂದ ಅಫೀಶಿಯಲ್ ಅನೌನ್ಸ್‌ಮೆಂಟ್ ಬಾಕಿ ಇದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಈ ‘ದುಬೈ ಪ್ರೀಮಿಯರ್’ ಸುದ್ದಿ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ. ಈ ಮಾಡರ್ನ್ ರಾಮಾಯಣ ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸೋದು ಪಕ್ಕಾ ಅಂತಿದ್ದಾರೆ ಬಿ-ಟೌನ್ ಪಂಡಿತರು.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
Exit mobile version