ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಆಭಿನಯದ ಘಾಟಿ ಸಿನಿಮಾ ಬಾಕ್ಸ್ಫೀಸ್ನಲ್ಲಿ ಹೀನಾಯವಾಗಿ ಸೋತು ಹೋಗಿದೆ. ಸ್ವೀಟಿಯ ಪರ್ಫಾಮೆನ್ಸ್ ಪ್ರೇಕ್ಷಕರಿಗೆ ಇಷ್ಟವಾದ್ರೂ ಸಿನಿಮಾ ಸದ್ದು ಮಾಡಲಿಲ್ಲ..ಅನುಷ್ಕಾ ಪ್ರಚಾರಕ್ಕೆ ಬಾರದೇ ಇದ್ದಿದ್ದೇ ಘಾಟಿ ಸೋಲಿಗೆ ಕಾರಣವಾಯ್ತು ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಘಾಟಿ ಫ್ಲಾಪ್ ಆದ ಬೆನ್ನಲ್ಲೆ ಅನುಷ್ಕಾ ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ದು, ಅವರ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.. ಅಷ್ಟಕ್ಕೂ ಸ್ವೀಟಿಯ ಈ ಬ್ರೇಕ್ಗೆ ಕಾರಣ ಏನು ಅಂತೀರಾ ಈ ಸ್ಟೋರಿ ನೋಡಿ.
- ಸೋಶಿಯಲ್ ಮೀಡಿಯಾಗೆ ಅನುಷ್ಕಾ ಶೆಟ್ಟಿ ಗುಡ್ ಬೈ..!
- ಘಾಟಿ ಸೋಲಿನಿಂದ ಸ್ವೀಟಿ ಶಾಕಿಂಗ್ ನಿರ್ಧಾರ..?!
- ಮತ್ತೆ ವಾಪಸ್ ಬರ್ತೀನಿ.. ದೇವಸೇನಾ ಲೆಟರ್ ಪೋಸ್ಟ್
- ಎಲ್ಲೂ ಕಾಣಿಸಿಕೊಳ್ಳದ ಸ್ವೀಟಿ.. ಫ್ಯಾನ್ಸ್ ಗೆ ಹೆಚ್ಚಿದ ಆತಂಕ..!
ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಘಾಟಿ ಸಿನಿಮಾ ಕಳೆದ ವಾರವಷ್ಟೇ ತೆರೆಗಪ್ಪಳಿಸಿತ್ತು. ರಿಲೀಸ್ಗೂ ಮುನ್ನ ಭಾರೀ ಹೈಪ್ ಸೃಟ್ರಿಸಿದ ಸಿನಿಮಾ ಬಿಡುಗಡೆ ಆದ್ಮೇಲೆ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ.. ಅನುಷ್ಕಾ ಆ್ಯಕ್ಟಿಂಗ್ ಚೆನ್ನಾಗಿದ್ರು.. ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಸೋತ್ತು ಹೋಗಿದೆ.. 60 ಕೋಟಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಕೇವಲ 10 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ಆಫೀಸ್ನಲ್ಲಿ ಮುಗರಿಸಿದೆ.
ಯೆಸ್, ಘಾಟಿ ಚಿತ್ರದಲ್ಲಿ ಅನುಷ್ಕಾ, ಹಿಂದೆಂದೂ ಕಾಣಿಸಿಕೊಳ್ಳದ ರಗಡ್ ಲುಕ್ನಲ್ಲಿ ಮಿಂಚಿದ್ರು.. ಅವರ ಪಾತ್ರ ಸಖತ್ ಪವರ್ಫುಲ್ ಆಗೇ ಮೂಡಿಬಂದಿತ್ತು.. ಆದ್ರೆ ಸಿನಿಮಾದ ರಿಲೀಸ್ ಡೇಟ್ ಹತ್ತಿವಾದ್ರೂ ಅನುಷ್ಕಾ ಒಮ್ಮೇಯೂ ಚಿತ್ರದ ಪ್ರಚಾರಕ್ಕೆ ಬರಲೇ ಇಲ್ಲ.. ಒಂದು ಸಂರ್ದಶನದಲ್ಲೂ ಮಾತನಾಡಲಿಲ್ಲ.. ಸಿನಿಮಾದ ಮುಖ್ಯ ಪಾತ್ರವೇ ಪ್ರಮೋಷನ್ನಲ್ಲಿ ಭಾಗಿಯಾಗದೇ ಇರೋದು ಚಿತ್ರದ ಸೋಲಿಗೆ ಕಾರಣವಾಯ್ತು.. ನೆರವಾಗಿ ಪ್ರವಾರದಲ್ಲಿ ಭಾಗಿಯಾಗುವ ಬದಲು ಅನುಷ್ಕಾ ಕೇವಲ ಫೋನ್ ಕಾಲ್ನಲ್ಲೇ ಸಂದರ್ಶನ ಕೊಟ್ಟು ಪ್ರಚಾರ ಮಾಡಿದ್ರು.
ಇದೀಗ ಘಾಟಿ ಸೋಲಿನ ಬೆನ್ನಲ್ಲೆ ಅನುಷ್ಕಾ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಾರ್ವಜನಿಕವಾಗ ಕಾಣಿಸಿಕೊಳ್ಳದ ಅನುಷ್ಕಾ ಈಗ ಸೋಷಿಯಲ್ ಮೀಡಿಯಾದಿಂದಲೂ ಬ್ರೇಕ್ ಪಡೆದಿದ್ದಾರೆ. “ಸಾಮಾಜಿಕ ಮಾಧ್ಯಮದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ, ಸ್ಕ್ರೋಲಿಂಗ್ ಅನ್ನು ಮೀರಿ ಕೆಲಸ ಮಾಡಲು ಹಾಗೂ ಜಗತ್ತಿನ ಜೊತೆ ಮತ್ತೆ ಸಂಪರ್ಕ ಸಾಧಿಸಲು ಈ ನಿರ್ಧಾರ. ನಾವೆಲ್ಲರೂ ಸೋಶಿಯಲ್ ಮೀಡಿಯಾ ಇಲ್ಲದೇ ಹೇಗೆ ಇದ್ದೆವೋ ಅದೇ ರೀತಿ ಮತ್ತೆ ಜರ್ನಿ ಆರಂಭಿಸಲು ಸಿದ್ಧಳಾಗಿದ್ಧೇನೆ. ಇನ್ನಷ್ಟು ಸ್ಟೋರಿ ಮತ್ತು ಪ್ರೀತಿಯೊಂದಿಗೆ ಮತ್ತೆ ವಾಪಸ್ ಬರ್ತೀನಿ” ಅಂತ ತಾವೇ ಕೈಬರಹದಲ್ಲಿ ಬರೆದ ಲೆಟರ್ವೊಂದರ ಫೋಟೊವನ್ನು ಅನುಷ್ಕಾ ಶೆಟ್ಟಿ ಹಂಚಿಕೊಂಡಿದ್ದಾರೆ.
ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಅಷ್ಟೇನು ಆಕ್ವೀವ್ ಆಗಿ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಏನಾದರೂ ಪೋಸ್ಟ್ ಮಾಡುತ್ತಿದ್ದರು. ಇನ್‌ಸ್ಟಾ ಸ್ಟೋರಿ ಹಾಕಿಕೊಳ್ಳುತ್ತಿದ್ದರು. ತಮ್ಮ ಇತ್ತೀಚಿನ ಯಾವುದೇ ಫೋಟೊವನ್ನು ಆಕೆ ಹಂಚಿಕೊಳ್ಳುತ್ತಿರಲಿಲ್ಲ. ಬಹಳ ದಿನಗಳ ಬಳಿಕ ಕ್ರಿಶ್ ನಿರ್ದೇಶನದ ‘ಘಾಟಿ’ ಚಿತ್ರದಲ್ಲಿ ಸ್ವೀಟಿ ಶೆಟ್ಟಿ ನಟಿಸಿದ್ದರು. ಆದರೆ ಸಿನಿಮಾ ಕೈಹಿಡಿಯಲಿಲ್ಲ. ಆಕೆಯ ಕ್ರೇಜ್ ಕೊಂಚ ಕಮ್ಮಿ ಆಗಿದೆ. ಅದೇ ಕಾರಣಕ್ಕೆ ಮತ್ತೆ ದೇಹದ ತೂಕ ಇಳಿಸಿ ಕಂಬ್ಯಾಕ್ ಮಾಡಲು ಪ್ರಯತ್ನದಲ್ಲಿ ಇರುವಂತೆ ಕಾಣ್ತಿದೆ.
ಘಾಟಿ ಸಿನಿಮಾ ಓಟಿಟಿಗೆ ಬರ್ತಿದೆ. ನಿರೀಕ್ಷೆ ಮಾಡಿದ ಡೇಟ್‌ಗಿಂತಲೂ ಮೊದಲೇ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ.ಜನಕ್ಕೆ ಈ ಚಿತ್ರ ಅಷ್ಟೆನೂ ಹಿಡಿಸಲಿಲ್ಲ, ಅಷ್ಟರಲ್ಲಿಯೇ ಈ ಚಿತ್ರ ಸೆಪ್ಟೆಂಬರ್ ಕೊನೆಯ ವಾರದಲ್ಲಿಯೇ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಅನ್ನುವ ಸುದ್ದಿ ಕೇಳಿ ಬರ್ತಿದೆ. ಆದ್ರೆ ಅಧಿಕೃತ ಘೋಷಣೆಗೆ ಕಾಯಬೇಕಿದೆ.
ಒಟ್ನಲ್ಲಿ ಅನುಷ್ಕಾ ಹೇಗೆ ಎಲ್ಲದಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.. ಯಾರನ್ನೂ ಭೇಟಿಯೂ ಆಗುತ್ತಿಲ್ಲ.. ಅಷ್ಟೇ ಅಲ್ಲದೇ ತಮ್ಮ ಸಿನಿಮಾದ ಪ್ರಚಾರಕ್ಕೂ ಬಂದಿಲ್ಲ..ಈಗ ಸಡನ್ ಆಗಿ ಸೋಷಿಯಲ್ ಮೀಡಿಯಾದಿಂದಲೂ ಬ್ರೇಕ್ ಪಡೆದಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆ ನೋಡಿ ಸ್ವೀಟಿ ಫ್ಯಾನ್ಸ್ ಅನುಷ್ಕಾಗೆ ಏನಾಯ್ತು ಅಂತ ಆತಂಕ್ಕೀಡಾಗಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್