ಮಲಯಾಳಂ ಕುಟ್ಟಿ ಅನುಪಮಾ ಪರಮೇಶ್ವರನ್ ಕೈ ಹಿಡಿಯುತ್ತಾರಂತೆ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮಗ ಧ್ರುವ್. ಅದಕ್ಕೆ ಬೈಸನ್ ಮೂವಿ ಮುನ್ನುಡಿ ಬರೆದಿದೆ. ಅರೇ ಇವರುಗಳ ನಡುವೆ ಏಜ್ ಡಿಫರೆನ್ಸ್ ಇದೆಯಲ್ವಾ ಅಂತ ಹುಬ್ಬೇರಿಸಬೇಡಿ. ಯಾಕಂದ್ರೆ ಅದೆಲ್ಲವನ್ನ ಮೀರಿದ ಪ್ರೇಮಲೋಕದಲ್ಲಿ ಅವರ ಸಂಚಾರ ಶುರುವಾಗಿದೆ. ಈ ಕುರಿತ ಪ್ರೇಮ್ ಕಹಾನಿ ನಿಮಗಾಗಿ ಕಾಯ್ತಿದೆ ನೋಡಿ.
ನಟಸಾರ್ವಭೌಮ..2019ರಲ್ಲಿ ತೆರೆಕಂಡ ರಾಜರತ್ನ ಅಪ್ಪು ನಟನೆಯ ಸಿನಿಮಾ. ಈ ಚಿತ್ರದಲ್ಲಿ ಮಲಯಾಳಂ ಪೋರಿ ಅನುಪಮಾ ಪರಮೇಶ್ವರನ್ ಬಣ್ಣ ಹಚ್ಚಿದ್ರು. ಇವ್ರ ತಾಜಾ ಸಮಾಚಾರ ಸಾಂಗ್ ಇಂದಿಗೂ ಎವರ್‌ಗ್ರೀನ್. ನಮ್ಮ ಕನ್ನಡಿಗರಿಗೂ ಅಚ್ಚುಮೆಚ್ಚು ಆಗಿದ್ದ ಅನುಪಮಾ, ಬಹುಭಾಷಾ ನಟಿಯಾಗಿ, ಸಾಲು ಸಾಲು ಎಕ್ಸ್‌ಪೆರಿಮೆಂಟಲ್ ರೋಲ್‌ಗಳಲ್ಲಿ ಮಿಂಚು ಹರಿಸಿದ್ದಾರೆ.
ಚಿಯಾನ್ ವಿಕ್ರಮ್ ಪುತ್ರನ ತೆಕ್ಕೆಗೆ ಅಪ್ಪು ಹೀರೋಯಿನ್ ಅನು
30 ವರ್ಷದ ನಟಿಯ ಕೈ ಹಿಡಿಯುತ್ತಾರಾ 28 ವರ್ಷದ ನಟ..?!
ಅನುಪಮಾ ಚಿತ್ರರಂಗಕ್ಕೆ ಬಂದು ದಶಕ ಆಗಿದೆ ಅಷ್ಟೇ. 2015ರಲ್ಲಿ ಪ್ರೇಮಂ ಚಿತ್ರದಿಂದ ಬಣ್ಣದ ಲೋಕಕ್ಕೆ ಬಂದಂತಹ ಈಕೆ, ಮಲಾರೆ ಸಾಂಗ್‌ನಿಂದಲೇ ಎಲ್ಲರ ಮನೆ ಮಗಳಾದ್ರು. ಇದೀಗ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮನೆ ಬೆಳಗುವ ಮಹಾಲಕ್ಷ್ಮೀಯಾಗಿ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಹೌದು.. ವಿಕ್ರಮ್ ಮಗ ಧ್ರುವ್ ವಿಕ್ರಮ್ ಪ್ರೇಮ ಪಂಜರದ ಪಕ್ಷಿಯಾಗಿರೋ ಈಕೆ, ಧ್ರುವ್ ಜೊತೆ ಸಪ್ತಪದಿ ತುಳಿಯೋ ಧಾವಂತದಲ್ಲಿದ್ದಾರಂತೆ.
ಅರೇ ಧ್ರುವ್ ವಯಸ್ಸು 28. ಆದ್ರೆ ಅನುಪಮಾ ಪರಮೇಶ್ವರನ್ ಏಜ್ 30 ಅಲ್ವಾ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಪತಿಗಿಂತ ಪತ್ನಿಯ ವಯಸ್ಸು ಜಾಸ್ತಿ ಇರೋ ಸಚಿನ್ ತೆಂಡೂಲ್ಕರ್ ಅಂತಹ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಸೋ ಇಲ್ಲಿ ಏಜ್ ಮ್ಯಾಟರ್ ಆಗಿಲ್ಲ. ಅವರಿಬ್ಬರ ನಡುವೆ ಪ್ರೇಮಾಂಕುರಿಸಿದೆ. ಡೀಪ್ ಲವ್‌ನಲ್ಲಿರೋ ಈ ತಾರಾ ಜೋಡಿ, ಕದ್ದು ಮುಚ್ಚಿ ಡೇಟಿಂಗ್ ಕೂಡ ಮಾಡ್ತಿದ್ದಾರೆ.
ಎಲ್ಲೆಡೆ ಇವ್ರ ಪ್ರೇಮ ಪಲ್ಲಕ್ಕಿಯ ತೇರು.. ಮದ್ವೆ ಆಗೋದು ಫಿಕ್ಸ್
‘ಬೈಸನ್’ ಚಿತ್ರದಿಂದ ಪ್ರೇಮಾಂಕುರ.. ಡೇಟಿಂಗ್ ಗುಟ್ಟು ರಟ್ಟು..!
ಅಂದಹಾಗೆ ಧ್ರುವ್-ಅನುಪಮಾ ಮದುವೆ ಸುದ್ದಿ ಸದ್ಯ ಎಲ್ಲೆಡೆ ಚಾಲ್ತಿಯಲ್ಲಿದೆ. ಸದ್ಯದಲ್ಲೇ ಈ ಜೋಡಿ ಸಪ್ತಪದಿ ತುಳಿಯೋ ಮೂಲಕ ಸತಿ-ಪತಿ ಆಗಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅದಕ್ಕೆಲ್ಲಾ ಮುನ್ನುಡಿ ಬರೆದಿರೋದು ಮಾತ್ರ ಇತ್ತೀಚೆಗೆ ತೆರೆಕಂಡ ತಮಿಳು ಸಿನಿಮಾ ಬೈಸನ್ ಅಂದ್ರೆ ತಪ್ಪಾಗಲ್ಲ. ಹೌದು.. ಕಬಡ್ಡಿ ಪ್ಲೇಯರ್ ರೋಲ್ ಮಾಡಿರೋ ಧ್ರುವ್‌ಗೆ ಆ ಚಿತ್ರದಲ್ಲಿ ಅನುಪಮಾ ನಾಯಕನಟಿ. ತೆರೆ ಮೇಲೆ ಕೂಡ ಅನು ಧ್ರುವ್‌ಗಿಂತ ಹಿರಿಯಳು. ಈಗ ನಿಜ ಜೀವನದಲ್ಲಿ ಈ ವಯಸ್ಸಿನ ಅಂತರದ ಎಲ್ಲೆ ಮೀರಿ ಶುಭಕಾರ್ಯಕ್ಕೆ ಸಜ್ಜಾಗ್ತಿರೋದು ಇಂಟರೆಸ್ಟಿಂಗ್.
30 ಕೋಟಿಯಲ್ಲಿ ತಯಾರಾದ ಬೈಸನ್ ಮೂವಿ, ಬಾಕ್ಸ್ ಆಫೀಸ್‌ನಲ್ಲಿ 75 ಕೋಟಿ ಬ್ಯುಸಿನೆಸ್ ಮಾಡಿತ್ತು. ಧ್ರುವ್ ಕರಿಯರ್‌ಗೆ ಇದೊಂದು ಬೂಸ್ಟರ್ ಡೋಸ್ ಕೂಡ ಆಯ್ತು. ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಮೂವಿ ಹಾಗೂ ಮಹಾನ್ ಚಿತ್ರಗಳಿಂದ ಪ್ರಾಮಿಸಿಂಗ್ ಹೀರೋ ಅನಿಸಿಕೊಂಡಿದ್ದ ಧ್ರುವ್, ಸದ್ಯ ಬೈಸನ್‌ನಿಂದ ಭವಿಷ್ಯದ ಭರವಸೆಯ ಸೂಪರ್ ಸ್ಟಾರ್ ಅನಿಸಿಕೊಂಡಿದ್ದಾರೆ. ಆ ಜೋಶ್‌ನಲ್ಲೇ ಒಂಟಿಯಾಗಿದ್ದ ಧ್ರುವ್ ತನ್ನ ಬಾಳಿಗೆ ಬಲಗಾಲಿಟ್ಟು ಬಾ ಅಂತ ಅನುಪಮಾಗೆ ಆಫರ್ ಮಾಡಿದ್ದಾರೆ ಅನ್ನೋದು ಗಲ್ಲಿ ಗಲ್ಲಿಗಳಲ್ಲಿ ಮಾತನಾಡಿಕೊಳ್ತಿರೋ ಬಿಗ್ ಬ್ರೇಕಿಂಗ್ ನ್ಯೂಸ್.
