ಐದು ಕೋಟಿಯಲ್ಲಿ 125 ಕೋಟಿ ಲೂಟಿ ಮಾಡಿದ ಸು ಫ್ರಮ್ ಸೋ ಚಿತ್ರ, ಸದ್ಯ ಮರಾಠಿಯಲ್ಲಿ ಮಿಂಚೋಕೆ ಸಿದ್ಧವಾಗಿದೆ. ರಾಜ್ ಬಿ ಶೆಟ್ರ ಈ ಮ್ಯಾಜಿಕ್ ಹಿಂದಿನ ಲಾಜಿಕ್ ಜೊತೆ ಸದ್ಯ ಅವರು ಕನ್ನಡದಿಂದ ಹಿಡಿದು ತಮಿಳು, ಹಿಂದಿ ತನಕ ಯಾವೆಲ್ಲಾ ಪ್ರಾಜೆಕ್ಟ್ಸ್‌ನಲ್ಲಿ ಬ್ಯುಸಿ ಇದ್ದಾರೆ ಅನ್ನೋದನ್ನೂ ತೋರಿಸ್ತೀವಿ.
ಸು ಫ್ರಮ್ ಸೋ..ಕಳೆದ ವರ್ಷ ಜುಲೈ 25ರಂದು ತೆರೆಕಂಡ ಕನ್ನಡದ ಸಿನಿಮಾ. ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಜೆ ಪಿ ತುಮ್ಮಿನಾಡ್ ಆ್ಯಕ್ಷನ್ ಕಟ್ ಹೇಳಿ, ಬಣ್ಣ ಕೂಡ ಹಚ್ಚಿದ್ರು. ಶನೀಲ್ ಗೌತಮ್, ಸಂಧ್ಯಾ ಅರಕೆರೆ ಪ್ರಧಾನ ಪಾತ್ರಗಳನ್ನ ಪೋಷಿಸಿದ್ರು. ಐದೇ ಐದು ಕೋಟಿಯಲ್ಲಿ ತಯಾರಾದ ಈ ಕಾಮಿಡಿ ಡ್ರಾಮಾ, ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡಿದ್ದು ಮಾತ್ರ ಬರೋಬ್ಬರಿ 125 ಕೋಟಿ ಅಂದ್ರೆ ನೀವು ನಂಬಲೇಬೇಕು.
ಮರಾಠಿಯಲ್ಲಿ ಸು ಫ್ರಮ್ ಸೋ..ಶೆಟ್ರು ಎಲ್ಲೆಡೆ ರಾಕಿಂಗ್
‘ತುಂಬಾಡ್ಚಿ ಮಂಜುಳ’ ಟೈಟಲ್‌ನಲ್ಲಿ ಮರಾಠಿಗೆ ರಿಮೇಕ್
ಅಕ್ಷಯ್ ಕುಮಾರ್, ಅಜಯ್ ದೇವಗನ್‌ರಿಂದ ಹಿಡಿದು, ಇಡೀ ಚಿತ್ರರಂಗವೇ ಸು ಫ್ರಮ್ ಸೋನ ಕೊಂಡಾಡಿತ್ತು. ಇದೀಗ ಅದೇ ಸು ಫ್ರಮ್ ಸೋ ಚಿತ್ರ ಮರಾಠಿಗೆ ರಿಮೇಕ್ ಆಗಿದೆ. ಇದೇ ಜೂನ್ 5ಕ್ಕೆ ಬಿಡುಗಡೆ ಕೂಡ ಆಗ್ತಿದೆ. ತುಂಬಾಡ್ಚಿ ಮಂಜುಳ ಅನ್ನೋ ಟೈಟಲ್ ಮರಾಠಿ ಚಿತ್ರಕ್ಕೆ ಇಟ್ಟಿದ್ದು, ವಿವಿದ್ ಕೊರಗೋಂವ್ಕರ್ ನಿರ್ದೇಶನದಲ್ಲಿ ಸಾಯಿ ತಮ್ಹನ್ಕರ್, ಜಿತೇಂದ್ರ ಜೋಶಿ ಹಾಗೂ ಓಂ ಬುಟ್ಕರ್ ಲೀಡ್‌ನಲ್ಲಿ ನಟಿಸಿದ್ದಾರೆ. ಟೀಸರ್, ಟ್ರೈಲರ್ ಇಂಪ್ರೆಸ್ಸೀವ್ ಆಗಿದ್ದು, ಮರಾಠಿಗರು ಕಾತರರಾಗಿದ್ದಾರೆ ಮಂಜುಳ ಮ್ಯಾಜಿಕ್ ನೋಡೋಕೆ.
ರಾಜ್ ಬಿ ಶೆಟ್ರಿಗೆ ಪರಭಾಷೆಗಳಲ್ಲಿ ಭಾರೀ ಡಿಮ್ಯಾಂಡ್
ಕಾಲಿವುಡ್ & ಬಾಲಿವುಡ್‌ಗೆ ಶೆಟ್ರು ಜಬರ್ದಸ್ತ್ ಎಂಟ್ರಿ
ಮಲಯಾಳಂಗೆ ಪಾದಾರ್ಪಣೆ ಮಾಡಿದ್ದ ರಾಜ್ ಶೆಟ್ರು, ಅಲ್ಲಿನ ಮೆಗಾಸ್ಟಾರ್ ಮಮ್ಮುಟ್ಟಿ ಜೊತೆ ಟರ್ಬೋ ಚಿತ್ರದಲ್ಲಿ ಖಡಕ್ ಖಳನಾಯಕನಾಗಿ ಅಬ್ಬರಿಸಿದ್ರು. ಅದಾದ ಬಳಿಕ ಇದೀಗ ಬಾಲಿವುಡ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಬಾಬಿ ಡಿಯೋಲ್ ನಟನೆಯ ಬಂದರ್ ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡು ಡಿಢೀರ್ ಸರ್‌ಪ್ರೈಸ್ ನೀಡಿದ್ರು ಶೆಟ್ರು. ಅಲ್ಲಿ ಜೈಲು ಕೈದಿಯಾಗಿ ಮತ್ತೊಂದು ಮಜಲು ತೋರಿಸೋಕೆ ಹೊರಟಿದ್ದಾರೆ.
ವಿಜಯ್ ಸೇತುಪತಿ, ಬಾಬಿ ಡಿಯೋಲ್ ಜೊತೆ ನಟನೆ
ಇದೀಗ ಪಕ್ಕದ ಕಾಲಿವುಡ್‌ಗೂ ಕಾಲಿಟ್ಟಿದ್ದು, ವಿಜಯ್ ಸೇತುಪತಿ ನಟನೆಯ ಪಾಕೆಟ್ ನಾವೆಲ್ ಚಿತ್ರದಲ್ಲಿ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಪಾಕೆಟ್ ನಾವೆಲ್ ಸಿನಿಮಾಗೆ ಈ ಹಿಂದೆ ಸೇತುಪತಿಯ ಸೂಪರ್ ಡಿಲಕ್ಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ತಿಯಾಗರಾಜನ್ ಕುಮಾರರಾಜ ನಿರ್ದೇಶನ ಮಾಡ್ತಿರೋದು ಇಂಟರೆಸ್ಟಿಂಗ್. ವಿಜಯ್ ಸೇತುಪತಿ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್‌ಗಳೇ. ಹಾಗಾಗಿ ಇವರಿಬ್ಬರೂ ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡ್ರೆ ಅದರ ಮಜಾ ನೆಕ್ಸ್ಟ್ ಲೆವೆಲ್‌ಗೆ ಇರಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
