ತಾಯಿಯ ಕೈಯಲ್ಲಿ ಅನುಪಮಾ ಗೌಡ ಮುಖ: ಹುಟ್ಟುಹಬ್ಬದ ಸರ್ಪ್ರೈಸ್!

Befunky collage 2025 03 20t131335.936

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ  ನಿರೂಪಕಿ ಅನುಪಮಾ ಗೌಡ ಪ್ರತಿವರ್ಷ ಸರಳವಾಗಿ ಹುಟ್ಟುಹಬ್ಬ ಸಖತ್ ಸಿಂಪಲ್ ಆಗಿ ಆಚರಿಸಿದರೂ, ಈ ವರ್ಷದ ಆಚರಣೆ ಬಾಯ್ಸ್ ವರ್ಸ್‌ ಗರ್ಲ್ಸ್‌  ರಿಯಾಲಿಟಿ ಶೋ ಸ್ಪರ್ಧಿಗಳು ಮತ್ತು ಅವರ ತಾಯಿ ನೀಡಿದ ಬಿಗ್ ಸರ್ಪ್ರೈಸ್‌‌‌ನೊಂದಿಗೆ ಅದ್ಧೂರಿಯಾಗಿ ನಡೆದಿದೆ. ರಾಜ್ಯ ಪ್ರಶಸ್ತಿ ಪ್ರಶಸ್ತಿ ಪಡೆದ ಮೇಲೆ ಅನುಪಮಾ ಗೌಡರವರಿಗೆ ಕೊಂಚ ಬೇಡಿಕೆ ಹೆಚ್ಚಾಗಿದೆ. ಈ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ಮೆರುಗನ್ನು ನೀಡಿದೆ. ಸಿನಿಮಾಗಳಿಂದ ದೂರವಿದ್ದು, ನಿರೂಪಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅನುಪಮಾ, ಈ ಸಲ 80ರ ದಶಕದ ರೆಟ್ರೋ ಲುಕ್‌‌ನಲ್ಲಿ ಹುಟ್ಟುಹಬ್ಬಕ್ಕೆ ಹೊಳಪು ಕೊಟ್ಟಿದ್ದಾರೆ.

ಅನುಪಮಾ ಗೌಡ ಈ ವರ್ಷದ ಹುಟ್ಟುಹಬ್ಬ ಆಚರಣೆ ಬಾಯ್ಸ್ ವರ್ಸ್‌ ಗರ್ಲ್ಸ್‌ ರಿಯಾಲಿಟಿ ಶೋ ಸ್ಪರ್ಧಿಗಳು ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ವೇದಿಕೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿಸಿ ಕೇಕ್ ಕಟ್ ಮಾಡಿಸಿದ್ದಾರೆ.  ಅಷ್ಟೇ ಅಲ್ಲದೆ ತಾಯಿ ವೇದಿಕೆ ಮೇಲೆ ಆಗಮಿಸಿರುವುದು ನೋಡಿ ಶಾಕ್ ಆಗಿದ್ದಾರೆ. ‘ಇದಕ್ಕಿಂತ ಹೆಮ್ಮೆ ಏನಮ್ಮಾ ಬೇಕು? ಏಳೇಳು ಜನ್ಮಕ್ಕೂ ಇದೆ ನಂಗೆ ಗಿಫ್ಟ್‌’ ಎಂದು ತಾಯಿ ತಮ್ಮ ಕೈ ಮೇಲೆ ಅನುಪಮಾ ಗೌಡ ಮುಖದ ಅಚ್ಚೆ ಹಾಕಿಸಿಕೊಂಡಿರುವ ಫೋಟೋ ರಿವೀಲ್ ಮಾಡಿದ್ದಾರೆ. ಖುಷಿಯಿಂದ ಕಣ್ಣೀರಿಡುತ್ತಲೇ ‘ಇದೇ ಮೊದಲು ನನಗೆ ಇಷ್ಟೋಂದು ಪ್ರೀತಿ ಸಿಕ್ಕಿರುವುದು’ ಎಂದು ಅನುಪಮಾ ಗೌಡ ಹೇಳಿದ್ದಾರೆ.

ಇಂಡಸ್ಟ್ರಿಗೆ ಕಾಲಿಡುವ ಮುನ್ನ ಅನುಪಮಾ ಗೌಡ ಜೀವನ ನಡೆಸಲು ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಮನೆ ಕೆಲಸ ಮಾಡಿಕೊಂಡು ಬೆಳೆದ ಹುಡುಗಿ ಈಗ ಕರ್ನಾಟಕದ ಮನೆ ಮಗಳು ಆಗಿದ್ದೀರಾ’ ಎಂದು ಮಂಜು ಪಾವಗಡ ಹೇಳುತ್ತಾರೆ. ಮಿಡಲ್ ಕ್ಲಾಸ್ ಕುಟುಂಬಕ್ಕೆ ಸೇರಿದ ಈ ಸುಂದರೆ 7ನೇ ಕ್ಲಾಸ್‌ನಲ್ಲಿ ಇದ್ದಾಗಲೇ ಕಟ್ ಪೀಸ್‌ ಕೆಲಸ ಮಾಡುತ್ತಿದ್ದರು ಆನಂತರ ಮನೆ ಕೆಲಸ ಮಾಡಿಕೊಂಡು ಕಾಲೇಜ್ ಮುಗಿಸಿದರು. ಪುಟ್ಟ ಹುಡುಗಿ ಇದ್ದಾಗ ದರ್ಶನ್ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು ಅದಾದ ಮೇಲೆ ನೇರವಾಗಿ ಸೀರಿಯಲ್‌ ಲೋಕಕ್ಕೆ ಕಾಲಿಟ್ಟರು.ಅಕ್ಕ ಸೀರಿಯಲ್‌ನ ಜನಪ್ರಿಯತೆಯಿಂದ ಬಿಗ್ ಬಾಸ್ ಆಫರ್‌ ಗಿಟ್ಟಿಸಿಕೊಂಡರು.  ಅಲ್ಲಿಂದ ಇಂಡಸ್ಟ್ರಿಗೆ ಕಾಲಿಟ್ಟರು ಅಲ್ಲಿಂದ ನಿರೂಪಣೆಗೆ ಎಂಟ್ರಿ ಕೊಟ್ಟರು. ಬಸ್‌ನಲ್ಲಿ ಓಡಾಡುತ್ತಿದ್ದ ಸುಂದರಿ ಈಗ BMW ಕಾರಿನಲ್ಲಿ ಓಡಾಡುತ್ತಿದ್ದಾರೆ. ಇದು ನಿಜಕ್ಕೂ ಪ್ರೇರಣೆ ಅಂತಿದ್ದಾರೆ ಫ್ಯಾನ್ಸ್. ಹುಟ್ಟುಹಬ್ಬದಂದು ೮೦ರ ದಶಕದ ಸಿನಿಮಾ ನಟಿಯರ ಸ್ಟೈಲ್ನಲ್ಲಿ ರೆಟ್ರೋ ಲುಕ್ ಧರಿಸಿದ್ದ ಅನುಪಮಾ, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದಾರೆ. ಫ್ಯಾನ್ಸ್ ಅವರ ಫೋಟೋಗಳನ್ನು ಕರ್ನಾಟಕದ ಮನೆಮಗಳು ಎಂದು ಪ್ರಶಂಸಿಸುತ್ತಾರೆ.

Exit mobile version