ಬಿಜೆಪಿಯಿಂದ ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರಗೆ ಮಹತ್ವದ ಹುದ್ದೆ..ಏನದು?

Untitled design 2026 03 02T181758.290

ಬೆಂಗಳೂರು: ಕರ್ನಾಟಕ ಬಿಜೆಪಿ ವತಿಯಿಂದ ಬೆಂಗಳೂರು ಕೇಂದ್ರ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಎ.ಆರ್. ಸಪ್ತಗಿರಿ ಗೌಡ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಗಳಲ್ಲಿ ನಟಿ ಅಮೂಲ್ಯ ಪತಿ ಜಗದೀಶ್ ಆರ್. ಚಂದ್ರ ಅವರಿಗೆ ನೀಡಲಾದ ಹುದ್ದೆ  ಗಮನ ಸೆಳೆದಿದೆ.

ಜಗದೀಶ್ ಆರ್. ಚಂದ್ರ ಅವರನ್ನು ಬೆಂಗಳೂರು ಕೇಂದ್ರ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಇದೀಗ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕವಾಗಿದ್ದು, ರಾಜಕೀಯ ಪಯಣದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ರಾಜಕೀಯ ಹಿನ್ನೆಲೆ

ಜಗದೀಶ್ ಆರ್. ಚಂದ್ರ ಅವರ ಕುಟುಂಬಕ್ಕೂ ರಾಜಕೀಯ ಹಿನ್ನೆಲೆ ಇದೆ. ಅವರ ತಂದೆ ಜಿ.ಎಚ್. ರಾಮಚಂದ್ರ ಉದ್ಯಮಿ ಹಾಗೂ ರಾಜಕಾರಣಿಯಾಗಿದ್ದಾರೆ. ಕುಟುಂಬದ ರಾಜಕೀಯ ಅನುಭವ ಜಗದೀಶ್ ಅವರಿಗೂ ಮಾರ್ಗದರ್ಶಕವಾಗಿದೆ ಎನ್ನಲಾಗುತ್ತಿದೆ.

2018ರ ವೇಳೆಯಲ್ಲಿ ಅವರು ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಸೇರಿ, ಬಳಿಕ ಮತ್ತೆ ಬಿಜೆಪಿಗೆ ವಾಪಸ್ಸಾಗಿದ್ದರು. ವಿಧಾನಸಭೆ ಟಿಕೆಟ್‌ಗಾಗಿ ಅವರು ಆಕಾಂಕ್ಷಿಯಾಗಿದ್ದರೂ, ಅವಕಾಶ ಕೈತಪ್ಪಿತ್ತು. ಆದರೂ ಪಕ್ಷದೊಂದಿಗೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

ಸಮಾಜ ಸೇವೆ 

ಕೊರೊನಾ ಮಹಾಮಾರಿಯ ಸಮಯದಲ್ಲಿ ಅಮೂಲ್ಯ ಕುಟುಂಬವು ಹಲವು ಜನರಿಗೆ ನೆರವು ನೀಡಿದ ಘಟನೆಗಳು ಗಮನ ಸೆಳೆದಿದ್ದವು. ಆಹಾರ ಕಿಟ್‌ಗಳ ವಿತರಣೆ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಸೇವಾ ಕಾರ್ಯಗಳಲ್ಲಿ ಜಗದೀಶ್ ಭಾಗವಹಿಸಿದ್ದರು. ಆರ್‌ಆರ್‌ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ದನಿ ಎತ್ತಿ, ಸಾರ್ವಜನಿಕರ ಗಮನ ಸೆಳೆದಿದ್ದರು.

ಬೆಂಗಳೂರು ಕೇಂದ್ರ ಜಿಲ್ಲೆಯ ಮೋರ್ಚಾ ಅಧ್ಯಕ್ಷರು

ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಕೆಳಕಂಡಂತೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ:

ಈ ನೇಮಕಾತಿಗಳ ಮೂಲಕ ಪಕ್ಷ ಸಂಘಟನೆಗೆ ಹೊಸ ಚೈತನ್ಯ ತುಂಬಲು ಬಿಜೆಪಿ ಮುಂದಾಗಿದೆ.

ಹೊಸ ಜವಾಬ್ದಾರಿ

ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಗದೀಶ್ ಅವರು ಯುವಜನರೊಂದಿಗೆ ಸಂಪರ್ಕ ಬೆಳೆಸಿ, ಪಕ್ಷದ ತತ್ವಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ನಟಿ ಅಮೂಲ್ಯ ಕೂಡ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ಕುಟುಂಬವೇ ಬಿಜೆಪಿಯ ಸಕ್ರಿಯ ಬೆಂಬಲಿಗರಾಗಿ ಗುರುತಿಸಿಕೊಂಡಿದೆ. ಇದೀಗ ಪತಿಗೆ ಮಹತ್ವದ ಹುದ್ದೆ ಲಭಿಸಿರುವ ಹಿನ್ನೆಲೆಯಲ್ಲಿ, ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Exit mobile version