ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ನಾಮಕರಣ ಸಂಭ್ರಮ ಮನೆ ಮಾಡಿದೆ. ಅಂಬರೀಶ್-ಸುಮಲತಾ ದಂಪತಿಯ ಮೊಮ್ಮಗನ ನಾಮಕರಣ ಸಮಾರಂಭವನ್ನು ಬೆಂಗಳೂರಿನ ಒಂದು ಪ್ರತಿಷ್ಠಿತ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.ಅಷ್ಟಕ್ಕೂ ಮಗುವಿಗೆ ಇಟ್ಟ ಹೆಸರೇನು?
ಕುಟುಂಬದ ಆಶಯದಂತೆ ಈ ನಾಮಕರಣವನ್ನು ಗೌಪ್ಯವಾಗಿ ನಡೆಸಲಾಗಿದ್ದರೂ, ಸಮಾರಂಭಕ್ಕೆ ಸ್ಯಾಂಡಲ್ವುಡ್ ನಟ-ನಟಿಯರು, ರಾಜಕಾರಣಿಗಳು ಮತ್ತು ಸನ್ಮಾನಿತ ಅತಿಥಿಗಳು ಆಹ್ವಾನಿತರಾಗಿದ್ದರು. ಸಮಾರಂಭದ ವಿಶೇಷತೆ ಎಂದರೆ ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮತ್ತು ಇತರ ಹಲವಾರು ಪ್ರಮುಖರು ಹಾಜರಿದ್ದರು.
ಸುಮಲತಾ ಅಂಬರೀಶ್ ಅವರು ಅತಿಥಿಗಳನ್ನು ಸ್ವಾಗತಿಸಿ, ಕುಟುಂಬದ ಹೊಸ ಸದಸ್ಯನ ಪರಿಚಯವನ್ನು ಮಾಡಿಕೊಟ್ಟರು. ನಾಮಕರಣದ ವೇದಿಕೆಯನ್ನು ಪಾರಂಪರಿಕ ಶೈಲಿಯಲ್ಲಿ ಅಲಂಕರಿಸಲಾಗಿತ್ತು.
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ಮಗುವಿಗೆ “ರಾಣಾ ಅಮರ್ ಅಂಬರೀಶ್” ಎಂದು ಹೆಸರಿಡಲಾಗಿದೆ. ಈ ಹೆಸರು ಕುಟುಂಬದ ಪರಂಪರೆ ಮತ್ತು ಸಾಹಸವನ್ನು ಪ್ರತಿಬಿಂಬಿಸುತ್ತದೆ.
ಇನ್ನು ಇಂದಿನ ನಾಮಕರಣ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದಾರೆ. ಮಂಡ್ಯ ಸೇರಿದಂತೆ ಬೆಂಗಳೂರಿನ ಕೆಲವು ರಾಜಕಾರಣಿಗಳು ಸಹ ನಾಮಕರಣ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ನಟ ದರ್ಶನ್ ಸಹ ಇಂದಿನ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವರೆಗೆ ದರ್ಶನ್, ನಾಮಕರಣಕ್ಕೆ ಆಗಮಿಸಿದ ಸುದ್ದಿ ಇಲ್ಲ. ದರ್ಶನ್ ಮತ್ತು ಸುಮಲತಾ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಇದೇ ಕಾರಣಕ್ಕೆ ದರ್ಶನ್, ನಾಮಕರಣದಲ್ಲಿ ಭಾಗವಹಿಸಿಲ್ಲ ಎನ್ನಲಾಗುತ್ತಿದೆ.