ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಸಹೋದರ ಅಲ್ಲು ಸಿರೀಶ್ ಮದುವೆಗೂ ಮುನ್ನ ಇಂಡಸ್ಟ್ರಿಯ ಅತ್ಯಾಪ್ತರಿಗೆ ಪ್ರೈವೇಟ್ ಬ್ಯಾಚುಲರ್ ಪಾರ್ಟಿ ಕೊಡಿಸಿದ್ದಾರೆ. ರಾಮ್ ಚರಣ್ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸಾಕಷ್ಟು ಚರ್ಚೆ ಆಗ್ತಿದೆ. ಇಷ್ಟಕ್ಕೂ ಅಲ್ಲಿ ನಡೆದದ್ದು ಏನು..? ಮಾಲೇ ಧರಿಸಿ ಪಾರ್ಟಿಗೆ ಹೋದ ಚಿರು ತನಯ ಮಾಡಿದ್ದೇನು ಅನ್ನೋದಕ್ಕೆ ಉತ್ತರ ಇಲ್ಲಿದೆ.
- ಪುಷ್ಪ ಪ್ರೈವೇಟ್ ಪಾರ್ಟಿಗೆ ಚೆರ್ರಿ.. ಮಾಲೆ ಧರಿಸಿ ಮಾಡಿದ್ದೇನು?
- ಬ್ಲ್ಯಾಕ್ & ಬ್ಲ್ಯಾಕ್.. ಬರಿಗಾಲಲ್ಲೇ ಪಾರ್ಟಿಗೆ ಬಂದ ಚಿರು ತನಯ
- ಅಲ್ಲು ಸಿರೀಶ್ ಬ್ಯಾಚುಲರ್ ಪಾರ್ಟಿ.. ಚರಣ್ ರೋಲ್ ಮಾಡೆಲ್
- ಅವಳಿ ಮಕ್ಕಳ ತಂದೆಯಾದ ಚರಣ್.. ರಿಲೀಸ್ ಅಂಚಿನಲ್ಲಿ ಪೆದ್ದಿ..!
ಮೆಗಾಸ್ಟಾರ್ ಚಿರಂಜೀವಿ ತನಯ, ನಾಟು ನಾಟು ಸಾಂಗ್‌ನಿಂದ ಹಾಲಿವುಡ್ ಅಂಗಳದಲ್ಲಿ ಘಾಟು ಇಟ್ಟಂತಹ ತ್ರಿಬಲ್ ಆಲ್ ಗ್ಲೋಬಲ್ ಸ್ಟಾರ್ ರಾಮ್ ಚರಣ್, ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಹೈದ್ರಾಬಾದ್‌ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನೀಡಿದ ಆ ಒಂದು ಪಾರ್ಟಿ. ಯೆಸ್.. ಪುಷ್ಪ ಸ್ಟಾರ್ ಚಿತ್ರರಂಗದ ಹಿತೈಷಿಗಳಿಗೆ ಹಾಗೂ ಅತ್ಯಾಪ್ತರಿಗೆ ಪ್ರೈವೇಟ್ ಪಾರ್ಟಿ ನೀಡಿದ್ದಾರೆ. ಅದಕ್ಕೆ ಕಾರಣ ಅವ್ರ ಸಹೋದರ ಅಲ್ಲು ಸಿರೀಶ್ ವೆಡ್ಡಿಂಗ್.
ಹೌದು.. ಅಲ್ಲು ಸಿರೀಶ್ ಮದ್ವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯನ್ನ ಅಲ್ಲು ಅರ್ಜುನ್ ಅವರೇ ಆರ್ಗನೈಸ್ ಮಾಡಿದ್ರು. ಅಲ್ಲಿ ಟಾಲಿವುಡ್‌ನ ಸಾಕಷ್ಟು ಮಂದಿ ತಾರೆಯರು ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಕೂಡ ಅಲ್ಲಿ ಕಂಡಿದ್ದು ಇಂಟರೆಸ್ಟಿಂಗ್. ಆದ್ರೆ ಅಯ್ಯಪ್ಪನ ಮಾಲೆ ಧರಿಸಿದ್ದ ಚರಣ್, ಮಾಲೆ ಹಾಕಿಕೊಂಡು ಹೋಗುವ ಪ್ರಮೇಯ ಏನಿತ್ತು ಅಂತ ಜನ ಟ್ರೋಲ್ ಮಾಡ್ತಿದ್ದಾರೆ. ಪತ್ನಿ ಸಮೇತ ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಕಾಣಿಸಿಕೊಂಡ ಚೆರ್ರಿ, ಕಾಲಿಗೆ ಶೂ ಅಥ್ವಾ ಚಪ್ಪಲಿ ಇಲ್ಲದೆ ಬರಿಗಾಲಲ್ಲೇ ಬಂದಿರೋದು ವಿಶೇಷ.
ಮಾಲೆ ಧರಿಸಿದ ಹಿನ್ನೆಲೆ ಪಾರ್ಟಿ ಆರಂಭ ಆಗುವ ಮೊದಲೇ ಬಂದು ಫೋಟೋಗೆ ಪೋಸ್ ನೀಡಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ ಚರಣ್. ನೇರವಾಗಿ ಪಾರ್ಟಿಗೆ ನೋ ಅನ್ನುವ ಬದಲಿಗೆ ಈ ರೀತಿಯ ಬಾಂಧವ್ಯ ತೋರಿಸೋ ಮೂಲಕ ರೋಲ್ ಮಾಡೆಲ್ ಅನಿಸಿಕೊಂಡಿದ್ದಾರೆ. ಅಲ್ಲದೆ, ಚರಣ್ ವರ್ಷದ ಕನಿಷ್ಟ 100 ದಿನಗಳಾದ್ರೂ ಮಾಲೆ ಧರಿಸಿ, ಬರಿಗಾಲಲ್ಲೇ ಇರ್ತಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಇತ್ತೀಚೆಗೆ ಅವಳಿ ಮಕ್ಕಳ ತಂದೆಯಾಗಿರೋ ಚರಣ್, ತಮ್ಮ ಪೆದ್ದಿ ಸಿನಿಮಾದ ರಿಲೀಸ್ ಹಾಗೂ ಪ್ರಮೋಷನ್ಸ್‌ನಲ್ಲೂ ಬ್ಯುಸಿ ಆಗಿದ್ದಾರೆ. ಪೆದ್ದಿ ಈಗಾಗ್ಲೇ ಹಾಡುಗಳು ಹಾಗೂ ಟೀಸರ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಚರಣ್‌ಗೆ ಗೇಮ್ ಚೇಂಜರ್‌ನಲ್ಲಿ ಹೋದ ಮಾನವನ್ನ ಇಲ್ಲಿ ತಂದುಕೊಡೋ ಲಕ್ಷಣ ತೋರಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
