ಭಾರತೀಯ ಚಿತ್ರರಂಗದಲ್ಲೇ ಸದ್ಯ ಹಲ್-ಚಲ್ ಎಬ್ಬಿಸಿರೋ ಚಿತ್ರ ‘ಟಾಕ್ಸಿಕ್’. ರಾಕಿ ಭಾಯ್ ಯಶ್ ಅಭಿನಯದ ಈ ಮೋಸ್ಟ್ ಅವೈಟೆಡ್ ಸಿನಿಮಾದಿಂದ ದಿನಕ್ಕೊಂದು ಮೈಂಡ್-ಬ್ಲೋಯಿಂಗ್ ಅಪ್‌ಡೇಟ್ ಹೊರಬರ್ತಾನೇ ಇದೆ. ಇದೀಗ ರಷ್ಯಾದ ಖ್ಯಾತ ಗಾಯಕಿ ಡಯಾನಾ ಅಂಕುಡಿನೋವಾ ಈ ಚಿತ್ರದ ಥೀಮ್ ಹಾಡಿಗೆ ಧ್ವನಿಯಾಗಿದ್ದು, ಇಡೀ ಇಂಡಿಯನ್ ಮ್ಯೂಸಿಕ್ ಇಂಡಸ್ಟ್ರಿಯೇ ತಿರುಗಿ ನೋಡುವಂತೆ ಮಾಡಿದೆ. ಯಾರು ಈ ಡಯಾನಾ? ರಷ್ಯಾದಿಂದ ಸ್ಯಾಂಡಲ್‌ವುಡ್‌ಗೆ ಬಂದ ಈ ವೋಕಲ್ ಕ್ವೀನ್ ಕಥೆ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…
- ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್
- ಟಾಕ್ಸಿಕ್ ಥೀಮ್ ಸಾಂಗ್‌ಗೆ ರಷ್ಯನ್ ಗಾಯಕಿ ಡಯಾನಾ ಧ್ವನಿ
- 100 ಜನ ವಾದ್ಯ ಕಲಾವಿದರ ಜೊತೆ ಟಾಕ್ಸಿಕ್ ಥೀಮ್ ಸಾಂಗ್ ರೆಕಾರ್ಡ್
- ಟಾಕ್ಸಿಕ್ನಲ್ಲಿ 10 ಸೌಂಡ್‌ಟ್ರ್ಯಾಕ್‌ಗಳ ಮ್ಯೂಸಿಕ್ ಫೀಸ್ಟ್..!
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಹೈಪ್ ಯಾವ ಹಂತದಲ್ಲಿದೆ ಅಂದ್ರೆ, ಟೀಸರ್ ಮತ್ತು ಟ್ರೇಲರ್‌ನಿಂದಲೇ ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪೀರಿಯಡ್ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಪ್ರತಿಯೊಂದು ದೃಶ್ಯವೂ ಅಷ್ಟೇ ಗ್ರಾಂಡ್ ಆಗಿದೆ. ಗೋವಾದ ಡಾರ್ಕ್ ಅಂಡರ್‌ವರ್ಲ್ಡ್ ಕ್ರೈಮ್ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ದೃಶ್ಯಗಳಿಗಷ್ಟೇ ಅಲ್ಲ, ಮ್ಯೂಸಿಕ್‌ಗೂ ನೆಕ್ಸ್ಟ್ ವೆಟೇಜ್ ಕೊಡಲಾಗಿದೆ. ಇದೀಗ ರಷ್ಯಾದ ಸೂಪರ್‌ಸ್ಟಾರ್ ಸಿಂಗರ್ ಡಯಾನಾ ಅಂಕುಡಿನೋವಾ ಅವರ ರಗಡ್ ಹಾಗೂ ಎಮೋಷನಲ್ ಧ್ವನಿ ಈ ಚಿತ್ರದ ಥೀಮ್ ಸಾಂಗ್‌ಗೆ ಹೊಸ ಲೈಫ್ ಕೊಟ್ಟಿದೆ.
2003ರಲ್ಲಿ ರಷ್ಯಾದಲ್ಲಿ ಜನಿಸಿದ ಡಯಾನಾ ಜೀವನದ ಹಾದಿ ಸುಲಭದ್ದಾಗಿರಲಿಲ್ಲ. ಚಿಕ್ಕವಯಸ್ಸಿನಲ್ಲಿಯೇ ತೀವ್ರ ಅನಾಥ ಸ್ಥಿತಿ, ತೊದಲುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ಡಯಾನಾಗೆ ಸ್ಪೀಚ್ ಥೆರಪಿಗಾಗಿ ವೈದ್ಯರು ಶಿಫಾರಸು ಮಾಡಿದ್ದೇ ‘ಹಾಡುಗಾರಿಕೆ’. ಆದರೆ ಅದೇ ಹಾಡುಗಾರಿಕೆ ಆಕೆಯನ್ನು ಜಾಗತಿಕ ರಂಗದಲ್ಲಿ ರಾಕ್ ಸ್ಟಾರ್ ಮಾಡಿತು. ರಷ್ಯಾದ ಅತ್ಯಂತ ಪ್ರಸಿದ್ಧ ಟ್ಯಾಲೆಂಟ್ ಶೋ ‘You Are Super’ ನ ಸತತ ಎರಡು ಸೀಸನ್‌ಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಈಕೆ, ರಷ್ಯನ್, ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆಕೆಯ ಯೂಟ್ಯೂಬ್ ವೀಡಿಯೊಗಳು ಕೋಟಿ ಕೋಟಿ ವೀವ್ಸ್ ಪಡೆದು ವಿಶ್ವದಾದ್ಯಂತ ಸದ್ದು ಮಾಡಿವೆ.
ಡಯಾನಾ ಅವರ ಧ್ವನಿಯಲ್ಲಿ ಏನೋ ಒಂಥರಾ ಮಾಂತ್ರಿಕತೆ ಇದೆ. ಆಕೆಯದ್ದು ಅಪರೂಪದ ಡ್ರಾಮ್ಯಾಟಿಕ್ ಕಾಂಟ್ರಾಲ್ಟೋ (Dramatic Contralto) ವಾಯ್ಸ್. ಅಂದರೆ, ಮಹಿಳಾ ಗಾಯಕಿಯರಲ್ಲಿ ಅತ್ಯಂತ ಆಳವಾದ, ಗಂಭೀರವಾದ ಮತ್ತು ಗಂಡಸರ ಧ್ವನಿಯ ಹತ್ತಿರಕ್ಕೆ ಹೋಗುವ ವಿಶಿಷ್ಟ ಬೇಸ್ ವಾಯ್ಸ್ ಇದೆ.ಡಯಾನಾ ಧ್ವನಿ ಒಮ್ಮೊಮ್ಮೆ ಇಬ್ಬರು ಗಾಯಕರು ಒಟ್ಟಿಗೆ ಹಾಡುತ್ತಿರುವಂತೆ ಭಾಸವಾಗುತ್ತದೆ. ‘ಟಾಕ್ಸಿಕ್’ ಚಿತ್ರದ ತಂದೆ-ಮಗನ ನಡುವಿನ ಭಾವುಕ ಹಾಗೂ ತೀವ್ರವಾದ ಕ್ರೈಮ್ ಸನ್ನಿವೇಶಗಳಿಗೆ ಈ ಆಳವಾದ ಧ್ವನಿ ಕಿಕ್ ಕೊಡ್ತಿದೆ ಅನ್ನೋದು ಸಂಗೀತ ಪ್ರೇಮಿಗಳು ಲೆಕ್ಕಾಚಾರ.
ಇನ್ನು ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ‘ಕೆಜಿಎಫ್’ ಶೈಲಿಯಲ್ಲೇ ಇಲ್ಲೂ ಸೌಂಡ್ ಡಿಸೈನಿಂಗ್‌ನಲ್ಲಿ ಕಾಂಪ್ರಮೈಸ್ ಆಗಿಲ್ಲ. ಬರೋಬ್ಬರಿ 100 ಜನ ನುರಿತ ವಾದ್ಯ ಕಲಾವಿದರಿರೋ ಬೃಹತ್ ಆರ್ಕೆಸ್ಟ್ರಾ ಬಳಸಿ ಈ ಥೀಮ್ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ವಿಶಾಲ್ ಮಿಶ್ರಾ, ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾರಂತಹ ಬಿಗ್ ನೇಮ್ಸ್ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಒಟ್ಟು 10 ಸೌಂಡ್‌ಟ್ರ್ಯಾಕ್‌ಗಳ ಧಮಾಕಾ ಕಾಯುತ್ತಿದೆ. ಡಯಾನಾ ಅವರ ಧ್ವನಿಗೆ ಮೆಚ್ಚುಗೆ ವ್ಯಕ್ತಪಡಿಸಿರೋ ರವಿ ಬಸ್ರೂರ್, ಆಕೆಯ ಧ್ವನಿ ಹಾಡಿಗೆ ಅಸಲಿ ಆತ್ಮ ತುಂಬಿದೆ ಎಂದು ಹಾಡಿ ಹೊಗಳಿದ್ದಾರೆ.
ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್‌ರಂತಹ ಸ್ಟಾರ್ ಕಾಸ್ಟಿಂಗ್ ಹೊಂದಿರುವ ಈ ಬಿಗ್ ಬಜೆಟ್ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ರಾಜೀವ್ ರವಿ ಅವರ ಸಿನೆಮಾಟೋಗ್ರಫಿ ಹಾಗೂ ರಷ್ಯನ್ ಸಿಂಗರ್ ಡಯಾನಾ ಅವರ ಡಿಫರೆಂಟ್ ಮ್ಯೂಸಿಕಲ್ ಗಿಫ್ಟ್ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಈ ಮಾಸ್-ಕ್ಲಾಸ್ ಮ್ಯಾಜಿಕ್ ನೋಡುವುದಷ್ಟೇ ಬಾಕಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
