ಅಲ್ಲು ಅರ್ಜುನ್‌‌ಗೆ ಸಂಕಷ್ಟ..ಚಾರ್ಜ್‌‌ಶೀಟ್‌‌ನಲ್ಲಿ ಹೆಸರು..!

BeFunky collage (49)

ಪುಷ್ಪ-2 ಸಿನಿಮಾ ಕಾಲ್ತುಳಿತ ಪ್ರಕರಣದಿಂದ ಅಲ್ಲು ಅರ್ಜುನ್‌ಗೆ ತಪ್ಪಿಲ್ಲ ಸಂಕಷ್ಟ. ಆ ಘಟನೆ ನಡೆದು ಒಂದು ವರ್ಷವಾದ ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಆಗಿದ್ದು, ಚಾರ್ಜ್‌ಶೀಟ್‌‌ನಲ್ಲಿ ಐಕಾನ್ ಸ್ಟಾರ್ ಹೆಸರು ಕೂಡ ಸೇರ್ಪಡೆ ಆಗಿದೆ. ಅಲ್ಲು ಅರ್ಜುನ್‌ಗೆ ಡಿಸಿಎಂ ಪವನ್ ಕಲ್ಯಾಣ್ ಪವರ್, ತನ್ನ ಸ್ಟಾರ್‌ಡಮ್ ಖದರ್, ಹಣ ಯಾವುದೂ ವರ್ಕ್‌ ಆಗ್ತಿಲ್ಲ.

ಪುಷ್ಪ ಸಿನಿಮಾ ಸಕ್ಸಸ್ ಆದ ಬಳಿಕ ನಿರ್ದೇಶಕ, ನಿರ್ಮಾಪಕರಿಗಿಂತ ಹೆಚ್ಚಾಗಿ ನಾಯಕನಟ ಅಲ್ಲು ಅರ್ಜುನ್‌ಗೆ ಪುಷ್ಪ-2ನ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ತರುವ ತುಡಿತ ಹೆಚ್ಚಾಯ್ತು. ಅದೇ ಕಾರಣದಿಂದ ಸಿಕ್ಕಾಪಟ್ಟೆ ಎಫರ್ಟ್ ಹಾಕಿ, ಪುಷ್ಪ-2ನ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ತಂದರು. ಅದು ಬಾಹುಬಲಿ-2 ಬಾಕ್ಸ್ ಆಫೀಸ್ ರೆಕಾರ್ಡ್‌ನ ಕೂಡ ಬ್ರೇಕ್ ಮಾಡಿ, ಇಂಡಿಯಾದಲ್ಲಿ ಅತಿಹೆಚ್ಚು ಗಳಿಸಿದ ಎರಡನೇ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಯ್ತು.

ಅಲ್ಲು ಅರ್ಜುನ್‌‌ಗೆ ಸಂಕಷ್ಟ..ಚಾರ್ಜ್‌‌ಶೀಟ್‌‌ನಲ್ಲಿ ಹೆಸರು..!

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ..11ನೇ ಆರೋಪಿ

ಹೈದ್ರಾಬಾದ್‌‌ನ ಚಿಕ್ಕಡಪಲ್ಲಿಯಲ್ಲಿರೋ ಸಂಧ್ಯಾ ಥಿಯೇಟರ್‌‌ನಲ್ಲಿ ಪುಷ್ಪ-2 ಸಿನಿಮಾದ ಫ್ಯಾನ್ಸ್ ಶೋ ನಡೆಸಲಾಗಿತ್ತು. ಅಲ್ಲಿಗೆ ಅಂದು ಅಲ್ಲು ಅರ್ಜುನ್ ಭೇಟಿ ನೀಡಿದ ಹಿನ್ನೆಲೆ, ಕಾಲ್ತುಳಿತ ಆಗಿತ್ತು. ಆ ಕಾಲ್ತುಳಿತದಲ್ಲಿ ರೇವತಿ ಅನ್ನೋ 35 ವರ್ಷದ ಮಹಿಳೆ ನಿಧನರಾಗಿದ್ದರು. ಕೂಡಲೇ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಟ ಅಲ್ಲು ಅರ್ಜುನ್‌‌ನ ಕಸ್ಟಡಿಗೆ ಪಡೆದು, ಚಂಚಲಗೂಡ ಜೈಲಿಗೆ ಕೂಡ ಕಳಿಸಿದ್ರು.

10 ಪುಟಗಳ ಚಾರ್ಜ್‌ಶೀಟ್..ಅರೆಸ್ಟ್ ಆಗ್ತಾರಾ ಪುಷ್ಪರಾಜ್?

DCM ಪವನ್ ಪವರ್..ಸ್ಟಾರ್‌‌ಡಮ್ ಖದರ್..ಎಲ್ಲಾ ವೇಸ್ಟ್

ಕೂಡಲೇ ಬೇಲ್ ಪಡೆದು ಹೊರಗೆ ಬಂದಿದ್ದ ಅಲ್ಲು ಅರ್ಜುನ್, ಆ ಕುಟುಂಬದ ಪರ ನಾವಿದ್ದೇವೆ. ಉದ್ದೇಶಪೂರ್ವಕವಾಗಿ ಆಗಿರೋದಲ್ಲ. ಆಕ್ಸಿಡೆಂಟಲಿ ಆಗಿದೆ ಅನ್ನೋ ಸ್ಟೇಟ್‌‌ಮೆಂಟ್ ನೀಡಿ, ಕುಟುಂಬಕ್ಕೆ ಕೋಟ್ಯಂತರ ರೂಪಾಯಿ ಆರ್ಥಿಕ ಸಹಾಯ ಕೂಡ ಮಾಡಿದ್ರು. ಆದ್ರೆ ಅದಾದ ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮೇಲೆ ಕೆರಳಿದ್ದರು. ಕೇಸ್‌ನ ತುಂಬಾ ಸೀರಿಯಸ್ ಆಗಿ ಪರಿಗಣಿಸಲಾಗಿತ್ತು.

ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ ನಡೆದಿದ್ದು 2024ರ ಡಿಸೆಂಬರ್ 4ರ ರಾತ್ರಿ. ಆದ್ರೆ ಒಂದು ವರ್ಷದ ಬಳಿಕ ಇದೀಗ ಪೊಲೀಸರು ಆ ಪ್ರಕರಣ ಕೊರ್ಟ್‌ಗೆ ಚಾರ್ಜ್‌‌ಶೀಟ್ ಸಲ್ಲಿಸಿದ್ದಾರೆ. ಸುಮಾರು 23 ಮಂದಿ ಆರೋಪಿಗಳ ಪಟ್ಟಿ ಸಲ್ಲಿಸಿದ್ದು, 11ನೇ ಆರೋಪಿಯಾಗಿ ಅಲ್ಲು ಅರ್ಜುನ್ ಹೆಸರು ಕೂಡ ಅದರಲ್ಲಿದೆ. 10 ಪುಟಗಳ ಆ ಜಾರ್ಚ್‌ಶೀಟ್ ಸಲ್ಲಿಕೆ ಆಗ್ತಿದ್ದಂತೆ ಅಲ್ಲುಗಷ್ಟೇ ಅಲ್ಲ, ಇಡೀ ಮೆಗಾಸ್ಟಾರ್ ಫ್ಯಾಮಿಲಿಗೆ ಟೆನ್ಷನ್ ಶುರುವಾಗಿದೆ. ಎನೀ ಟೈಂ ಪುಷ್ಪರಾಜ್ ಅರೆಸ್ಟ್ ಆಗುವ ಸಾಧ್ಯತೆಯಿದೆ.

ಒಂದ್ಕಡೆ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿದ್ರೂ, ಮತ್ತೊಂದ್ಕಡೆ ತನಗೆ ಅಷ್ಟು ದೊಡ್ಡ ಫ್ಯಾನ್ ಫಾಲೋಯಿಂಗ್ ಇದ್ದರೂ ಕೂಡ ಅಲ್ಲು ಅರ್ಜುನ್‌ಗೆ ಈ ಸಮಸ್ಯೆಯಿಂದ ಪಾರಾಗಲು ಆಗದೇ ಇರೋದು ಅಚ್ಚರಿ. ಇದ್ರಿಂದ ಕಾನೂನು ಎಲ್ಲರಿಗೂ ಒಂದೇನೇ ಅನ್ನೋದು ಸಾಬೀತಾಗ್ತಿದೆ.

 

 

Exit mobile version