ಹಿಟ್ ಸೆಕೆಂಡ್ ಕೇಸ್ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಅಡವಿ ಶೇಶ್, ಇದೀಗ ಬರೋಬ್ಬರಿ 4 ವರ್ಷಗಳ ನಂತ್ರ ಡಕಾಯಿತನಾಗಿ ಹೊಸ ಅವತಾರ ತಾಳಿದ್ದಾರೆ. ಒಂದ್ಕಡೆ ಕಳ್ಳ-ಪೊಲೀಸ್ ಆಟ.. ಮತ್ತೊಂದ್ಕಡೆ ಮೃಣಾಲ್ ಪ್ರೀತಿಗಾಗಿ ನಾಯಕನಟನ ಓಟ.. ನೋಡೋಕೆ ಮಸ್ತ್ ಮನರಂಜನೆ.
ಇದೇ ಏಪ್ರಿಲ್ 10ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿರೋ ಡಕಾಯಿತ್, ಪ್ಯಾನ್ ಇಂಡಿಯಾ ಸಿನಿಮಾ ಆಗಿ ತಯಾರಾಗಿದ್ದು, ಟೀಸರ್ ಹಾಗೂ ಸಾಂಗ್ಸ್‌ನಂತೆ ಟ್ರೈಲರ್ ಕೂಡ ಸಖತ್ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿದೆ. ತೆಲುಗಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕಮ್ ಮಲ್ಟಿ ಟ್ಯಾಲೆಂಟ್ ಅಡಿವಿ ಶೇಶ್ ಕಥೆ, ಚಿತ್ರಕಥೆ ಬರೆದು ಲೀಡ್‌ನಲ್ಲಿ ನಟಿಸಿದ್ದಾರೆ.
ಕಳ್ಳ- ಪೊಲೀಸ್ ಆಟ.. ಮೃಣಾಲ್ ಪ್ರೀತಿಗಾಗಿ ‘ಡಕಾಯಿತ್’ ಓಟ
ಕ್ರೈಂ, ಜೈಲು & ಪ್ರೇಮ್ ಕಹಾನಿ.. ರಕ್ಷಿತ್ ‘ಸಪ್ತ ಸಾಗರ’ದ ನೆರಳು
ಟೈಟಲ್ ಕೇಳಿದಾಕ್ಷಣ ಇದೊಂದು ಪಕ್ಕಾ ಕ್ರೈಂ ಥ್ರಿಲ್ಲರ್ ಆ್ಯಕ್ಷನ್ ಪ್ಯಾಕ್ಡ್ ಮೂವಿ ಅನಿಸಲಿದೆ. ಆದ್ರೆ ಇದೊಂದು ಪ್ಯೂರ್ ಲವ್ ಸ್ಟೋರಿ. ಇಂಟೆನ್ಸ್ ಪ್ರೇಮ್ ಕಹಾನಿಯ ಈ ಚಿತ್ರದಲ್ಲಿ ಎಮೋಷನಲ್ ವಿಷಯಗಳು ಸಾಕಷ್ಟಿವೆ. ಅಂದಹಾಗೆ ನಾಯಕನಟ ಅಡವಿ ಶೇಶ್‌ಗೆ ಜೋಡಿಯಾಗಿ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಬಣ್ಣ ಹಚ್ಚಿದ್ದು, ಇವ್ರ ಕಾಂಬಿನೇಷನ್ & ಕೆಮಿಸ್ಟ್ರಿ ಸಖತ್ ಫ್ರೆಶ್ ಅಂಡ್ ಮನಸ್ಸಿಗೆ ನಾಟುವಂತಿದೆ.
ಟ್ರೈಲರ್ ನೋಡ್ತಿದ್ರೆ ನಮ್ಮ ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೆನಪಾಗಲಿದೆ. ಹೌದು.. ಅಲ್ಲಿನಂತೆ ಇಲ್ಲಿಯೂ ಕ್ರೈಂ ಸೀನ್‌ಗಳಿವೆ. ಜೈಲು, ಪೊಲೀಸ್, ಕಾನೂನು ವ್ಯವಸ್ಥೆ ಇದೆ. ಮಿಗಿಲಾಗಿ ನವಿರಾದ ಪ್ರೇಮಕಥೆ ಇದೆ. ಸೋ.. ಎಲ್ಲೋ ಒಂದು ಕಡೆ ನಮ್ಮ ಸಪ್ತಸಾಗರ ಮೂವಿಯ ನೆರಳು ಈ ಚಿತ್ರದ ಮೇಲಿದೆ ಅಂದ್ರೆ ತಪ್ಪಾಗಲ್ಲ.
ಥ್ರಿಲ್ಲಿಂಗ್ ಎಲಿಮೆಂಟ್ಸ್.. ಅದ್ಭುತ ಮೇಕಿಂಗ್.. ಮಸ್ತ್ ಮನರಂಜನೆ
ಬಿಗ್ ಕ್ಯಾನ್ವಾಸ್.. ಅನುರಾಗ್ ಕಶ್ಯಪ್ ಜೊತೆ ಪ್ರಕಾಶ್ ರೈ ಕಮಾಲ್
ಸಾಕಷ್ಟು ಥ್ರಿಲ್ಲಿಂಗ್ ಎಲಿಮೆಂಟ್ಸ್ ಜೊತೆ ಅದ್ಭುತ ಮೇಕಿಂಗ್ ಇರೋ ಡಕಾಯಿತ್ ಮೂವಿ, ತೆಲುಗಿನ ಜೊತೆ ಜೊತೆಗೆ ಇಂಡಿಯನ್ ಲಾಂಗ್ವೇಜಸ್‌ನಲ್ಲಿ ಬಿಡುಗಡೆ ಆಗ್ತಿದೆ. ಇಲ್ಲಿ ಅಡವಿ ಶೇಶ್, ಮೃಣಾಲ್ ಠಾಕೂರ್ ಜೊತೆ ಬಹುದೊಡ್ಡ ತಾರಾಗಣವಿದೆ. ಬಾಲಿವುಡ್‌ನ ಅನುರಾಗ್ ಕಶ್ಯಪ್, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ನುರಿತ, ಬಹುಭಾಷಾ ಕಲಾವಿದರ ದಂಡಿದೆ. ಅದೆಲ್ಲವೂ ಡಕಾಯಿತ್ ಸಿನಿಮಾದ ಸಕ್ಸಸ್‌ಗೆ ಪ್ಲಸ್ ಆಗಲಿದೆ.
ಶನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಹೀರೋ ಯಾಕೆ ಡಕಾಯಿತನಾಗ್ತಾನೆ. ಯಾರಿಗಾಗಿ ಜೈಲು ಪಾಲಾಗ್ತಾನೆ..? ನಂತ್ರ ತಪ್ಪಿಸಿಕೊಂಡು ದುಬೈಗೆ ಹಾರೋಕೆ ಸಜ್ಜಾಗೋ ಆತ, ಅದಕ್ಕೂ ಮುನ್ನ ಪ್ರೀತಿಸಿ, ಮೋಸ ಮಾಡಿದಾಕೆಯ ಅಂತ್ಯ ನೋಡಲು ಮುಂದಾಗೋದ್ಯಾಕೆ..? ನಂತ್ರೆ ಏನೆಲ್ಲಾ ನಡೆಯುತ್ತೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ಅಂದಹಾಗೆ ಈ ಟ್ರೈಲರ್ ನೋಡಿ ಫಿದಾ ಆಗಿರೋ ಸೂಪರ್ ಸ್ಟಾರ್ ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಸ್ ಅಡವಿ ಶೇಶ್ ನಟನೆ, ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿ ಪೋಸ್ಟ್ ಮಾಡಿದ್ದಾರೆ.
