ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಈ ವರ್ಷದ ಆರಂಭವು ಅನೇಕರಿಗೆ ಹೊಸ ಆಸೆಗಳು ಮತ್ತು ಕನಸುಗಳನ್ನು ತಂದಿದೆ. ಕೆಲವು ತಾರೆಯರು ವಿದೇಶದಲ್ಲಿ ವಿಶ್ರಾಂತಿ ತೆಗೆದುಕೊಂಡು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ, ಇನ್ನು ಕೆಲವರು ಸ್ಪೂರ್ತಿದಾಯಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಯಾವ ಯಾವ ನಟ ನಟಿಯರು ತಮ್ಮ ನ್ಯೂ ಇಯರ್ ಹೇಗೆಲ್ಲ ಸೆಲೆಬ್ರೇಟ್ ಮಾಡಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ.
2025 ಕಳೆದು 2026ಬಂದೆ ಬಿಡ್ತು.. ಪ್ರತಿ ವರ್ಷದಂತೆ ಈ ವರ್ಷವೂ ಚಿತ್ರರಂಗದ ನಟ ನಟಿಯರು ಅದ್ದೂರಿಯಾಗಿ ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ. ಪ್ರತೀ ವರ್ಷ ಹೊಸ ವರ್ಷದ ಮೊದಲ ದಿನ ನಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ಮಾಡುತ್ತೇವೆ. ನಿರ್ಧಾರ ಮಾಡುವ ಮೊದಲು ನಟ ರಮೇಶ್ ಅರವಿಂದ್ ಅವರ ಈ ಸ್ಪೂರ್ತಿಯುತ ಮೂರು ಮಾತುಗಳನ್ನು ಪಾಲಿಸಬೇಕು.
ಹೊಸ ವರ್ಷಕ್ಕೆ ಶುಭಕೋರಿದ ಸಿನಿ ತಾರೆಯರು..!
ರಮೇಶ್ ಅರವಿಂದ್ ಸ್ಪೂರ್ತಿಯುತ ಸಂದೇಶ..!
ಯೆಸ್, ಜೀವನದಲ್ಲಿ ಅಂದುಕೊಂಡಿದ್ದು ಆಗೋದಿಲ್ಲ ಎನ್ನುವವರು ರಮೇಶ್ ಹೇಳಿರೋ ಈ ಮೂರು ಮಾತು ಪಾಲಿಸಿದರೆ ಸಾಕು. ಎಲ್ಲರಿಗೂ ಗೊತ್ತಿರುವ ಹಾಗೆ, ರಮೇಶ್ ಅರವಿಂದ್ ಆಕ್ಟರ್ ಮಾತ್ರವಲ್ಲ. ಚಿಂತಕ, ಸ್ಪೂರ್ತಿಯ ಮಾತನಾಡುವ ಮಾತುಗಾರ. ಹೊಸ ವರ್ಷಕ್ಕೆ ಅವರು ಜನತೆಗೆ ಈ ಒಂದು ಸಂದೇಶ ತಿಳಿಸಿದ್ದಾರೆ.
ಪ್ರತಿವರ್ಷದ ಆರಂಭದಲ್ಲಿ ಈ ವರ್ಷ ಅದು ಮಾಡಬೇಕು, ಇದು ಮಾಡಬೇಕು ಈ ಥರಾ ಆಗ್ಬೇಕು, ಆ ಥರಾ ಆಗ್ಬೇಕು ಅಂದುಕೊಳ್ತೀವಿ. ಆದರೆ ಆ ವರ್ಷ ಏನೂ ಆಗಲ್ಲ. ಅದಕ್ಕೇ ಈ ವರ್ಷ ಒಂದು ಡಿಸೈಡ್ ಮಾಡೋಣ. ನಮ್ಮ ಕನಸು ಏನಿದೆಯೋ, ನಾವು ಏನು ಮಾಡಬೇಕೆಂದಿದ್ದೇವೋ ಅದರ ಬಗ್ಗೆ ಮೂರು ವಿಷಯಗಳಾಗಬೇಕು ಕಣ್ರೀ.
ಒಂದು ಮನಸ್ಸು ಮಾಡಬೇಕು. ಎರಡು ಮನಸ್ಸು ಮಾಡಿದ್ದನ್ನು ಶುರು ಮಾಡಬೇಕು. ಶುರು ಮಾಡಿದ್ದನ್ನು ಈ ವರ್ಷದೊಳಗೆ ಅಚ್ಚುಕಟ್ಟಾಗಿ ಮುಗಿಸಬೇಕು. ಈ ಮೂರ ವಿಚಾರಗಳು ನೆನಪಿರಲಿ. ಹ್ಯಾಪೀ ನ್ಯೂ ಇಯರ್’ ಎಂದು ಹೇಳಿದ್ದಾರೆ. ಅವರ ಈ ಮಾತು ಪ್ರತಿಯೊಬ್ಬರಿಗೂ ಸ್ಪೂರ್ತಿ.
ದುಬೈನಲ್ಲಿ ಪತಿ ಜತೆ ದೀಪಿಕಾ ದಾಸ್ ಹೊಸ ವರ್ಷ ಸೆಲೆಬ್ರೇಷನ್
‘ರೋಮ್’ನಲ್ಲಿ ವಿಜಯ್-ರಶ್ಮಿಕಾ ನ್ಯೂ ಇಯರ್
ಇನ್ನು ಹೊಸ ವರ್ಷಕ್ಕೆ ಶುಭಕೋರಿದ ನಟ ರವಿತೇಜ ಹಾಗೂ ಆಶಿಕಾ ರಂಗನಾಥ್ ತಮ್ಮ ಮುಂದಿನ ಸಿನಿಮಾ ‘ಭರ್ತಾ ಮಹಾಶಯಲಕು ವಿಘ್ನಪ್ತಿ’ ಚಿತ್ರದ ರಿಲೀಸ್ ಡೇಟ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದೆ ಜನವರಿ 13ಕ್ಕೆ ಈ ಸಿನಿಮಾ ಬಿಡುಗಡೆ ಆಗ್ತಿದೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಭಾರ್ಗವ’ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು ಇದೆ ವರ್ಷ ಈ ಸಿನಿಮಾ ಬಿಡುಗಡೆ ಆಗುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಂದಹಾಗೆ ನಟಿ ಎಕ್ಕ ಚಿತ್ರದ ನಟಿ ಸಂಜನಾ ಆನಂದ್ ಕಳೆದ ವರ್ಷ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡಿದ್ದಾರೆ.
ಇನ್ನು ದುಬೈನಲ್ಲಿ ಪತಿ ಜತೆ ಹೊಸ ವರ್ಷ ಆಚರಿಸಿರೊ ನಟಿ ದೀಪಿಕಾ ದಾಸ್ ತಮ್ಮ ಫ್ಯಾನ್ಸ್ ಗೆ ನ್ಯೂ ಇಯರ್ ವಿಶ್ ಮಾಡಿದ್ದಾರೆ. ಹಾಗೆ ಈ ವರ್ಷ ಎಲ್ಲರ ಜಿವನದಲ್ಲಿ ಸಂತೋಷ, ನೆಮ್ಮದಿ ತರಲಿ ಎಂದು ನಟಿ ಆದಿತಿ ರಾವ್ ಹೈದರಿ, ಸಿದ್ಧಾರ್ಥ್ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಮೋಸ್ಟ್ hyped ಕಪಲ್ ಅಂದ್ರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಈ ಜೋಡಿ ಬಹಳ ಸುದ್ದಿಯಲ್ಲಿದೆ.
ಆಗಾಗ ಪ್ರವಾಸಕ್ಕೆ ಹೋಗುವ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.ಕೆಲವು ದಿನಗಳ ಹಿಂದೆ, ರಶ್ಮಿಕಾ ಮಂದಣ್ಣ ರೋಮ್ ಗೆ ಟ್ರಿಪ್ ಹೋಗಿದ್ದು, ಹೊಸ ವರ್ಷವನ್ನು ಅಲ್ಲೇ ಬರಮಾಡಿಕೊಂಡಿದ್ದಾರೆ.
ಆದ್ರೆ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ರೋಮ್ ಗೆ ಟ್ರಿಪ್ ಹೋಗಿದ್ದಾರೆ ಎಂಬ ಗಾಸಿಪ್ ಹರಡಿದೆ ಇದಕ್ಕೆ ಸಾಕ್ಷಿ ಕೆಲವು ಫೋಟೋಗಳು ಕೂಡ ವೈರಲ್ ಆಗಿದೆ. ಒಟ್ನಲ್ಲಿ 2026 ನ ಎಲ್ರು ವಿಜೃಂಭಣೆ ಯಿಂದ ಸೆಲೆಬ್ರೇಟ್ ಮಾಡಿದ್ದಾರೆ.





