ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಕಾಂಬಿನೇಷನ್‌ನ 45 ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಟ್ರೈಲರ್ ಲಾಂಚ್‌ಗೆ ಕ್ಷಣಗಣನೆ ಬಾಕಿಯಿದ್ದು, ಪ್ರೀ-ರಿಲೀಸ್ ಬ್ಯುಸಿನೆಸ್‌ನಿಂದ ಟಾಕ್ ಆಫ್ ದಿ ಟೌನ್ ಆಗಿದೆ ಸಿನಿಮಾ. ಓಟಿಟಿ, ಸ್ಯಾಟಲೈಟ್ ಹಾಗೂ ಡಿಸ್ಟ್ರಿಬ್ಯೂಷನ್ ರೈಟ್ಸ್ ಎಷ್ಟು ಕೋಟಿಗೆ ಸೇಲ್ ಆಯ್ತು..? ಹೇಗಿದೆ ಬಝ್ ಅಂತೀರಾ..? ಈ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
- ಶಿವಣ್ಣ-ಉಪ್ಪಿ-ರಾಜ್ 45 ಪ್ರೀ-ರಿಲೀಸ್ ಬ್ಯುಸಿನೆಸ್ 100Cr ?
- ದಾಖಲೆ ಮೊತ್ತಕ್ಕೆ OTT, ಸ್ಯಾಟಲೈಟ್, ಡಿಸ್ಟ್ರಿಬ್ಯೂಷನ್ ರೈಟ್ಸ್!
- ಝೀಗೆ ಟಿವಿ & ಓಟಿಟಿ ಹಕ್ಕುಗಳು.. KVNಗೆ ವಿತರಣಾ ಹಕ್ಕು
- ಕಂಟೆಂಟ್‌ನಲ್ಲಿ ಧಮ್.. 45 ಪ್ಯಾನ್ ಇಂಡಿಯಾ ರಿಧಮ್..!
ಕಥೆಯಲ್ಲಿ ಸತ್ವ ಇದ್ದು, ಪಾತ್ರಗಳಲ್ಲಿ ಜೀವಂತಿಕೆ ಇದ್ರೆ, ಆ ಸಿನಿಮಾ ಹಿಟ್ ಮಾತ್ರ ಅಲ್ಲ, ಬ್ಲಾಕ್ ಬಸ್ಟರ್ ಹಿಟ್ ಆಗುತ್ತೆ. ಅದ್ಭುತ ಅನಿಸೋ ಯಾವುದೇ ಸಿನಿಮಾ ಇಲ್ಲಿಯವರೆಗೆ ಸೋತ ಉದಾಹರಣೆಯೇ ಇಲ್ಲ. ಸದ್ಯ ಅಂತಹ ಕಂಟೆಂಟ್‌ನಿಂಧ ನೋಡುಗರ ಕೌತುಕತೆ ಹೆಚ್ಚಿಸಿರೋ ಸಿನಿಮಾ 45. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಈ ಸಿನಿಮಾ ಇದೇ ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿದೆ.
ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಮೇಶ್ ರೆಡ್ಡಿ ಇದಕ್ಕೆ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮಹಾ ಸಂಗಮದ 45, ಕಥೆ ಹಾಗೂ ಮೇಕಿಂಗ್‌ನಿಂದ ಮೆಚ್ಚುವಂತಿದೆ. ಟ್ರೈಲರ್ ಲಾಂಚ್‌ಗೆ ಕೆಲವೇ ನಿಮಿಷಗಳು ಬಾಕಿಯಿದ್ದು, ಸದ್ಯ ಪ್ರೀ ರಿಲೀಸ್ ಬ್ಯುಸಿನೆಸ್‌ನಿಂದ ಸಂಚಲನ ಮೂಡಿಸಿದೆ 45 ಸಿನಿಮಾ.
ಬಹುನಿರೀಕ್ಷಿತ 45 ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿದೆ. ಇನ್ನು ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಝೀ ಖರೀದಿಸಿದೆ. ಇತ್ತೀಚೆಗೆ ಕನ್ನಡದ ಸಿನಿಮಾಗಳು ರಿಲೀಸ್ ಆದ ಬಳಿಕ ಕೂಡ ಬ್ಯುಸಿನೆಸ್ ಮಾಡೋದು ಕಷ್ಟಕರವಾಗಿದೆ. ಅಂಥದ್ರಲ್ಲಿ ದಾಖಳೆ ಮೊತ್ತಕ್ಕೆ ಪ್ರೀ-ರಿಲೀಸ್ ಬ್ಯುಸಿನೆಸ್‌ನಿಂದ 45 ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೂಲಗಳ ಪ್ರಕಾರ ಸ್ಯಾಟಲೈಟ್, ಓಟಿಟಿ ಹಾಗೂ ಡಿಸ್ಟ್ರಿಬ್ಯೂಷನ್‌ನಿಂದಲೇ 60 ರಿಂದ 100 ಕೋಟಿ ಬ್ಯುಸಿನೆಸ್ ಮಾಡಿದೆಯಂತೆ 45 ಚಿತ್ರ.
ಇದು ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿಗಿರೋ ಸ್ಟಾರ್‌ಡಮ್, ನಟನಾ ಸಾಮರ್ಥ್ಯ ಹಾಗೂ 45 ಚಿತ್ರದ ಕಥೆಗಿರೋ ಮೌಲ್ಯ ಅನ್ನೋದನ್ನ ಸಾರುತ್ತಿದೆ. ಅಂದಹಾಗೆ ಬೆಂಗಳೂರು ಸೇರಿದಂತೆ ರಾಜ್ಯದ ಆರೇಳು ಸೆಂಟರ್‌ಗಳಲ್ಲಿ ಟ್ರೈಲರ್ ಲಾಂಚ್ ಇವೆಂಟ್ಸ್‌ಗೆ ಪ್ಲ್ಯಾನ್ ಮಾಡಿತ್ತು ಚಿತ್ರತಂಡ. ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆದಿದ್ದು, ದಾವಣಗೆರೆಯಲ್ಲಿ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನದಿಂದ ಇವೆಂಟ್ ರದ್ದಾಗಿದೆ.
ಒಟ್ಟಾರೆ 45 ಸಿನಿಮಾ ಈ ವರ್ಷದ ಸ್ಯಾಂಡಲ್‌ವುಡ್‌ನ ಬಹುದೊಡ್ಡ ಸಿನಿಮಾ ಆಗಿ ಹೊರಹೊಮ್ಮಲಿದ್ದು, ಕಾಂತಾರ, ಸು ಫ್ರಮ್ ಸೋ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣವನ್ನು ಲೂಟಿ ಮಾಡುವ ಸೂಚನೆ ನೀಡಿದೆ. ಸುಮಾರು ವರ್ಷಗಳಿಂದ ಸಂಗೀತ ಸಂಯೋಜನೆ ಮಾಡ್ಕೊಳ್ತಾ ಬರ್ತಿದ್ದ ಅರ್ಜುನ್ ಜನ್ಯ, ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟು, ಚಿತ್ರ ನಿರ್ದೇಶನ ಮಾಡಿದ್ದಾರೆ. ಅವ್ರ ಶ್ರಮ ವ್ಯರ್ಥವಾಗಲ್ಲ ಅನ್ನೋದು ಸದ್ಯ ರಿವೀಲ್ ಆಗಿರೋ ಸ್ಯಾಂಪಲ್ಸ್‌ನಿಂದ ಮನದಟ್ಟಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





