ಸ್ಯಾಂಡಲ್‌ವುಡ್‌ನ ಕ್ರೇಜಿ ಕಾಂಬೋ ಮೂವಿ 45 ರಿಲೀಸ್‌ಗೆ ಸಜ್ಜಾಗ್ತಿದೆ. ಲಿವಿಂಗ್ ಲೆಜೆಂಡ್ ಡಾ. ಶಿವಣ್ಣ ಜೊತೆ ಉಪೇಂದ್ರ, ರಾಜ್ ಬಿ ಶೆಟ್ಟಿಯ ಮಹಾಸಂಗಮದ ಚಿತ್ರ ಇದಾಗಿದ್ದು, ಸದ್ಯ ಆಫ್ರೋ ಟಪಾಂಗ್ ಅನ್ನೋ ಪ್ರಮೋಷನಲ್ ಸಾಂಗ್‌ನಿಂದ ಸಂಚಲನ ಮೂಡಿಸಿದೆ. ಉಗಾಂಡದ ಘೆಟ್ಟೋ ಕಿಡ್ಸ್ ಜೊತೆ ನಮ್ಮ ಸ್ಟಾರ್ಸ್ ಸ್ಟೆಪ್ ಹಾಕಿರೋ ಝಲಕ್ ಜೊತೆ ಹೈಲೈಟ್ಸ್ ಇಲ್ಲಿದೆ ನೋಡಿ.
ಇದು 45 ಸಿನಿಮಾದ ಆಫ್ರೋ ಟಪಾಂಗ್ ಅನ್ನೋ ಪ್ರಮೋಷನಲ್ ಸಾಂಗ್ ಝಲಕ್. ಹಾಡು ನೋಡ್ತಿದ್ರೆ ಸಿಕ್ಕಾಪಟ್ಟೆ ವಿಚಿತ್ರವಾಗಿದೆಯಲ್ವಾ ಅಂತ ನಿಮಗೆ ಅನಿಸಬಹುದು. ಯೆಸ್.. ನಿಮ್ಮ ಗೆಸ್ 100% ನಿಜ. ಆದ್ರೆ ವಿಚಿತ್ರ ಅನ್ನೋದಕ್ಕಿಂತ ಡಿಫರೆಂಟ್ ಅಂದ್ರೆ ಸಮಂಜಸ. ಅದಕ್ಕೆ ಕಾರಣ ಡೈರೆಕ್ಟರ್ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವ್ರ ವಿಭಿನ್ನ ಶೈಲಿಯ ಪ್ರಮೋಷನಲ್ ಸ್ಟ್ರ್ಯಾಟಜಿ.
ಉಗಾಂಡ ಕಿಡ್ಸ್ ಜೊತೆ ಶಿವಣ್ಣ-ಉಪ್ಪಿ-ರಾಜ್ ಟಪಾಂಗ್..!
ಬಜೆಟ್ ಕೇಳಿದ್ರೆ ಬೆರಗಾಗ್ತೀರಾ.. ಪ್ರೊಡ್ಯೂಸರ್ ಕೂಡ ಸ್ಟೆಪ್
ಇದೇ ಮೊದಲ ಬಾರಿಗೆ ಕನ್ನಡದ ಲಿವಿಂಗ್ ಲೆಜೆಂಡ್ ಡಾ ಶಿವರಾಜ್‌ಕುಮಾರ್ ಜೊತೆ ಬಹುಮುಖ ಪ್ರತಿಭೆಗಳಾದ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಬಣ್ಣ ಹಚ್ಚಿರೋ ಸಿನಿಮಾ ಈ 45. ಶಿವಣ್ಣ-ಉಪ್ಪಿ-ರಾಜ್‌ರ ಈ ಕಾಂಬೋ ಕ್ರೇಜಿ ಕಾಂಬೋ ಅನಿಸಿಕೊಂಡಿದ್ದು, ಸದ್ಯ ಈ ಹಾಡೊಂದರಿಂದ ಅದ್ರ ಅಸಲಿ ಗತ್ತು, ಗಮ್ಮತ್ತು ಅರಿಯಬಹುದಾಗಿದೆ. ಸ್ಟೈಲಿಶ್ ಲುಕ್ಸ್‌ನಲ್ಲಿ ಮೂವರೂ ಸ್ಟಾರ್ಸ್ ಮಿಂಚುತ್ತಿದ್ದು, ಸ್ಟೆಪ್ಸ್ ಮಾತ್ರ ಮೈ ಕೈ ಕುಣಿಸುವಂತಿವೆ.
ಸ್ಟೈಲಿಶ್ ಲುಕ್ಸ್.. ಮಸ್ತ್ ಮ್ಯೂಸಿಕ್.. ಡ್ಯಾನ್ಸ್ ಧಮಾಕ..!
ಡಿ-25ಕ್ಕೆ 45 ಚಿತ್ರ ತೆರೆಗೆ.. ಶಿವಣ್ಣ ನೆಕ್ಸ್ಟ್ ಲೆವೆಲ್ ಎನರ್ಜಿ
ಇತ್ತೀಚೆಗೆ ಈ ಹಾಡನ್ನ ಕೋಣನಕುಂಟೆ ಕ್ರಾಸ್ ಬಳಿ ಇರೋ ಫೋರಂ ಮಾಲ್‌ನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಉಪೇಂದ್ರ ಬೇರೆ ಸಿನಿಮಾದ ಶೂಟಿಂಗ್ ನಿಮಿತ್ತ ಗೈರಾಗಿದ್ರು. ಉಳಿದಂತೆ ಶಿವಣ್ಣ, ರಾಜ್ ಬಿ ಶೆಟ್ಟಿ, ಅರ್ಜುನ್ ಜನ್ಯ ಹಾಗೂ ರಮೇಶ್ ರೆಡ್ಡಿ ಸೇರಿದಂತೆ ಇಡೀ ಟೀಮ್‌ನ ಉಪಸ್ಥಿತಿಯಿತ್ತು. ವೇದಿಕೆ ಮೇಲೆ ಆಫ್ರೋ ಟಪಾಂಗ್ ಹಾಡಿಗೆ ಅರ್ಜುನ್ ಜನ್ಯ, ಶಿವಣ್ಣ, ರಾಜ್ ಬಿ ಮಸ್ತ್ ಸ್ಟೆಪ್ ಹಾಕಿದ್ರು. ನಿರ್ಮಾಪಕ ರಮೇಶ್ ರೆಡ್ಡಿಯನ್ನ ಕೂಡ ಕುಣಿಯುವಂತೆ ಮಾಡಿದ್ರು ಡೈರೆಕ್ಟರ್ ಜನ್ಯ.
ಇನ್ಸ್ಟಾ ಮೂಲಕ ಆಫ್ರಿಕಾದ ಘೆಟ್ಟೋ ಕಿಡ್ಸ್‌ನ ಕಾಂಟ್ಯಾಕ್ಟ್ ಮಾಡಿದ್ವಿ. 2 ತಿಂಗಳು ಆಗಿತ್ತು ಆ ಹುಡುಗರನ್ನ ಬೆಂಗಳೂರಿಗೆ ಕರೆಸೋದು. ರಾಜ್ ಬಿ ಒಳ್ಳೆ ಡ್ಯಾನ್ಸರ್. ಇಂಡಿಯಾದಲ್ಲಿ ಇದೇ ಮೊದಲ ಬಾರಿಗೆ ಘೆಟ್ಟೋ ಕಿಡ್ಸ್ 45 ಚಿತ್ರದಲ್ಲಿ ಡಾನ್ಸ್ ಮಾಡಿದ್ದಾರೆ ಅಂತ ಪ್ರೊಡ್ಯೂಸರ್ ಖುಷಿ ಹೊರಹಾಕಿದ್ರು.
ಅಪರೂಪಕ್ಕೆ ಅರ್ಜುನ್ ಜನ್ಯ ಫೋನ್ ಮಾಡ್ತಾರೆ. ಮನುಷ್ಯ ನೋಡಿ ಊರು ಬಿಡ್ಬೇಕು. ಆ ತರಹದ ಡಾನ್ಸ್ ಸ್ಟೆಪ್ಸ್ ಇರುತ್ತೆ. ಕನ್ನಡಕ್ಕೆ ಒಳ್ಳೆ ಸಿನಿಮಾ ಆದ್ರೆ ಆಗಲ್ಲ.. ಭಾರತಕ್ಕೆ ಒಳ್ಳೆ ಸಿನಿಮಾ ಇದಾಗ್ಬೇಕು. ಶಿವಣ್ಣ..ಉಪೇಂದ್ರ ಸೀನ್‌ಗೆ ನಾನು ವಿಜಲ್ ಹೊಡಿಬೇಕು. ಆಫ್ರಿಕಾದ ಘೆಟ್ಟೋ ಕಿಡ್ಸ್‌ಗೂ ಹುಲಿವೇಷ ಡಾನ್ಸ್ ಗೊತ್ತಿದೆ. ಅವರಲ್ಲೂ ಈ ತರ ಡಾನ್ಸ್ ಇದೆ. ಶೂಟಿಂಗ್ ವೇಳೆ ಶಿವಣ್ಣ ಕಾಲಿಗೆ ಸಣ್ಣ ಪೆಟ್ಟಾಗಿತ್ತು, ಅದನ್ನ ಕೇರ್ ಮಾಡದೇ ಶೂಟ್ ಮಾಡ್ತಿದ್ರು ಅಂದ್ರು ರಾಜ್ ಬಿ ಶೆಟ್ಟಿ.
ಡಿಕೆಡಿ ವೇಳೆ ಈ ಕಥೆ ಹುಟ್ಟಿದ್ದು. ಆಗ್ಲೇ ಕಥೆ ಹೇಳಿದ್ರು. ನಾವ್ಯಾರೂ ಸಹ ಇಲ್ಲಿ ಓವರ್ ಟೇಕ್ ಮಾಡ್ಕೊಂಡು ಆ್ಯಕ್ಟಿಂಗ್ ಮಾಡಿಲ್ಲ. ದುಡ್ಡು ಜಾಸ್ತಿ ಆದ್ರೆ ಎಮೋಷನ್ ಆಗ್ತಾರೆ.. ಆದ್ರೆ ಘೆಟ್ಟೋ ಕಿಡ್ಸ್ ಪ್ರಮೋಷನ್ ಮಾಡ್ತಾರೆ. ಮಕ್ಕಳ ತರಹ ಬಂದು ಆಕ್ಟ್ ಮಾಡಿ ಹೋಗಿದೀವಿ ಅಷ್ಟೇ. ದೇವರ ಬಗ್ಗೆನೇ ಸಿನಿಮಾ ಇದು..ಕ್ರಿಸ್ಮಸ್ ದಿನ ರಿಲೀಸ್ ಆಗ್ತಿದೆ ಅಂತ ಶಿವಣ್ಣ 45 ಚಿತ್ರದ ಕಥೆ, ಸಾಂಗ್ ಹಾಗೂ ಕೋ ಆರ್ಟಿಸ್ಟ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.
45 ಚಿತ್ರದಿಂದ ಡೈರೆಕ್ಟರ್ ಆಗ್ತಿರೋ ಅರ್ಜುನ್ ಜನ್ಯ, ನಾನು ನಿರ್ದೇಶಕನಾಗಲು ಶಿವಣ್ಣ ಕಾರಣ. ಚಿತ್ರದಲ್ಲಿ ಈ ಹಾಡಿಲ್ಲ. ಆದ್ರೆ ಪ್ರಮೋಷನಲ್ ಸಾಂಗ್ ಮಾಡಬೇಕೆಂಬ ಆಸೆ ಇತ್ತು. ಮಾಮೂಲಿ ತರಹ ಮಾಡುವುದು ಬೇಡ ಅಂದುಕೊಂಡೆವು. ಆಗ ನನಗೆ ಉಗಾಂಡದ ಘೆಟ್ಟೋ ಕಿಡ್ಸ್ ಈ ಪ್ರಮೋಷನ್ ಸಾಂಗ್ ನಲ್ಲಿ ಅಭಿನಯಿಸಿದರೆ ಚೆಂದ ಎನಿಸಿತು. ಕಷ್ಟಪಟ್ಟು ಅವರನ್ನು ಸಂಪರ್ಕ ಮಾಡಿದೆವು ಎಂದ್ರು.
VFX ಉಸ್ತುವಾರಿ ವಹಿಸಿಕೊಂಡಿರುವ ಕೆನಡಾದ ಯಶ್ ಶೆಟ್ಟಿ ಸಿನಿಮಾಟೋಗ್ರಾಫರ್ ಸತ್ಯ ಹೆಗ್ಡೆ ಕೂಡ ಚಿತ್ರದ ಬಗ್ಗೆ ಮಾತನಾಡಿದ್ರು. ಅಂದಹಾಗೆ ಈ ಆಫ್ರೋ ಟಪಾಂಗ್ ಸಾಂಗ್‌ಗೆ ಹಾಕಿರೋ ಬಂಡವಾಳ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯಾಕಂದ್ರೆ ಈ ಬಜೆಟ್‌ಗೆ ಒಂದು ಸಣ್ಣ ಸಿನಿಮಾನೇ ನಿರ್ಮಾಣ ಮಾಡಬಹುದಿತ್ತಂತೆ. ಒಟ್ಟಾರೆ ಡಿಸೆಂಬರ್ 25ಕ್ಕೆ 45 ಸೀಕ್ರೆಟ್ ಬಯಲಾಗಲಿದೆ.
