ಬೆಂಗಳೂರು: ಹೂಡಿಕೆದಾರರು ಮತ್ತು ಚಿನ್ನದ ಪ್ರಿಯರಿಗೆ ವಾರಾಂತ್ಯದಲ್ಲಿ ಶಾಕ್ ಕಾದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆ ಇಂದು ಮತ್ತಷ್ಟು ಜಿಗಿತ ಕಂಡಿದೆ. ಗ್ರಾಮ್‌ಗೆ ಬರೋಬ್ಬರಿ 310 ರೂಪಾಯಿಯಷ್ಟು ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಕೇವಲ ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.
ದೇಶಾದ್ಯಂತ ಇಂದು ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಸ್ತುತ ಭಾರತದಲ್ಲಿ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ 1,35,750 ರೂಪಾಯಿ ತಲುಪಿದ್ದರೆ, ಅಪ್ಪಟ ಚಿನ್ನ ಅಂದರೆ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,48,090 ರೂಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯೂ ಪ್ರತಿ 100 ಗ್ರಾಂಗೆ 24,500 ರೂಪಾಯಿ ತಲುಪಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,35,750 ರೂಪಾಯಿ ಆಗಿದೆ. ಆದರೆ ತಮಿಳುನಾಡು ಮತ್ತು ಕೇರಳದ ಕೆಲವು ನಗರಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಂಗೆ 25,000 ರೂಪಾಯಿವರೆಗೂ ತಲುಪಿರುವುದು ವಿಶೇಷ.
ನಗರವಾರು 22 ಕ್ಯಾರಟ್ ಚಿನ್ನದ ದರ (1 ಗ್ರಾಂಗೆ):
-
ಬೆಂಗಳೂರು: 13,575 ರೂ.
-
ಚೆನ್ನೈ: 13,660 ರೂ.
-
ದೆಹಲಿ: 13,590 ರೂ.
-
ಮುಂಬೈ/ಕೋಲ್ಕತಾ: 13,575 ರೂ.
-
ಅಹ್ಮದಾಬಾದ್: 13,580 ರೂ.
ವಿದೇಶಗಳಲ್ಲಿ ಚಿನ್ನದ ಬೆಲೆ ಎಷ್ಟು? (1 ಗ್ರಾಂ 22 ಕ್ಯಾರಟ್):
ಭಾರತಕ್ಕೆ ಹೋಲಿಸಿದರೆ ದುಬೈ ಮತ್ತು ಸೌದಿ ಅರೇಬಿಯಾದಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಇದೆ.
-
ದುಬೈ: 12,934 ರೂ.
-
ಸೌದಿ ಅರೇಬಿಯಾ: 12,882 ರೂ.
-
ಅಮೆರಿಕ: 13,317 ರೂ.
-
ಕುವೇತ್: 12,774 ರೂ.
ಬೆಳ್ಳಿ ಬೆಲೆ ವಿವರ:
ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 245 ರೂಪಾಯಿ ಇದೆ. ಚೆನ್ನೈ, ಕೇರಳ ಮತ್ತು ಭುವನೇಶ್ವರದಲ್ಲಿ 250 ರೂಪಾಯಿಗೆ ಏರಿಕೆಯಾಗಿದೆ.
ಗಮನಿಸಿ: ಇಲ್ಲಿ ನೀಡಿರುವ ದರಗಳು ಮಾರುಕಟ್ಟೆಯ ಲಭ್ಯ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಆಭರಣ ಖರೀದಿಸುವಾಗ ಈ ಬೆಲೆಯ ಮೇಲೆ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (Making Charges) ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ.





