2026ರ ಹೊಸ ವರ್ಷದ ಆರಂಭದಲ್ಲೇ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಮದುವೆ ಸಂಭ್ರಮಕ್ಕೆ ಸಿದ್ಧವಾಗಿರುವ ಮನೆಗಳಲ್ಲಿ ಆತಂಕ ಹೆಚ್ಚಿಸಿದೆ. ಜನವರಿ ಮೊದಲ ವಾರದಲ್ಲೇ ಚಿನ್ನದ ದರ 10 ಗ್ರಾಂಗೆ ₹1.35 ಲಕ್ಷ ಗಡಿ ತಲುಪಿರುವುದು ಎಲ್ಲರ ಗಮನ ಸೆಳೆದಿದೆ. ವಿಶೇಷವಾಗಿ ಮದುವೆ, ಮುಂಜಿ, ಗೃಹಪ್ರವೇಶದಂತಹ ಶುಭಕಾರ್ಯಗಳಿಗಾಗಿ ಚಿನ್ನ ಖರೀದಿಸಲು ಮುಂದಾಗಿರುವವರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ.
ಇಂದು ಭಾನುವಾರವಾಗಿರುವುದರಿಂದ ಮಾರುಕಟ್ಟೆ ರಜೆ ಇದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರಿಂದಾಗಿ ಕನಿಷ್ಠ ಇಂದು ಬೆಲೆ ಏರಿಕೆ ಇಲ್ಲದೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. ಆದರೆ ನಾಳೆಯಿಂದ ಮಾರುಕಟ್ಟೆ ತೆರೆಯುತ್ತಿದ್ದಂತೆ ಮತ್ತೆ ಬೆಲೆ ಏರಿಕೆಯಾಗುತ್ತದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ
ಜನವರಿ 4, 2026ರ ಬೆಳಿಗ್ಗೆ 7 ಗಂಟೆಗೆ ಪರಿಶೀಲಿಸಿದ ಮಾರುಕಟ್ಟೆ ದರದ ಪ್ರಕಾರ,
-
24 ಕ್ಯಾರಟ್ (10 ಗ್ರಾಂ) ಚಿನ್ನದ ಬೆಲೆ – ₹1,35,820
-
22 ಕ್ಯಾರಟ್ (10 ಗ್ರಾಂ) ಚಿನ್ನದ ಬೆಲೆ – ₹1,24,500
-
ಬೆಳ್ಳಿ (1 ಕೆಜಿ) ಬೆಲೆ – ₹2,57,900
ಚಿನ್ನದ ದರ ಇತಿಹಾಸದಲ್ಲೇ ಅಪರೂಪದ ಮಟ್ಟ ತಲುಪುತ್ತಿರುವುದು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಹೊಡೆತವಾಗಿದೆ.
ಕರ್ನಾಟಕದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ
-
18 ಕ್ಯಾರೆಟ್ ಆಭರಣ ಚಿನ್ನ- ₹10,187
-
22 ಕ್ಯಾರೆಟ್ ಆಭರಣ ಚಿನ್ನ- ₹12,450
-
24 ಕ್ಯಾರೆಟ್ ಅಪರಂಜಿ ಚಿನ್ನ- ₹13,582
ಎಂಟು ಗ್ರಾಂ (8GM) ಚಿನ್ನದ ಬೆಲೆ
-
18 ಕ್ಯಾರೆಟ್- ₹81,496
-
22 ಕ್ಯಾರೆಟ್- ₹99,600
-
24 ಕ್ಯಾರೆಟ್- ₹1,08,656
ಹತ್ತು ಗ್ರಾಂ (10GM) ಚಿನ್ನದ ಬೆಲೆ
-
18 ಕ್ಯಾರೆಟ್- ₹1,01,870
-
22 ಕ್ಯಾರೆಟ್- ₹1,24,500
-
24 ಕ್ಯಾರೆಟ್- ₹1,35,820
ನೂರು ಗ್ರಾಂ (100GM) ಚಿನ್ನದ ಬೆಲೆ
-
18 ಕ್ಯಾರೆಟ್- ₹10,18,700
-
22 ಕ್ಯಾರೆಟ್- ₹12,45,000
-
24 ಕ್ಯಾರೆಟ್- ₹13,58,200
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನ (1 ಗ್ರಾಂ) ದರ
ಚೆನ್ನೈ ₹12,439 | ದೆಹಲಿ ₹12,396 | ಮುಂಬೈ ₹12,381 | ಬೆಂಗಳೂರು ₹12,381 | ಹೈದರಾಬಾದ್ ₹12,381 | ಕೋಲ್ಕತ್ತಾ ₹12,381
ನಗರದಿಂದ ನಗರಕ್ಕೆ ಅಲ್ಪ ವ್ಯತ್ಯಾಸ ಇದ್ದರೂ ಒಟ್ಟಾರೆ ದರಗಳು ಗಗನಕ್ಕೇರಿವೆ.
ಬೆಳ್ಳಿ ದರ (100 ಗ್ರಾಂ)
ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ- ₹23,790
ಚೆನ್ನೈ, ಕೇರಳ, ಹೈದರಾಬಾದ್- ₹25,590
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ, “ಈಗಲೇ ಖರೀದಿ ಮಾಡಬೇಕಾ?” ಅಥವಾ “ಸಂಕ್ರಾಂತಿ ಹಬ್ಬದವರೆಗೂ ಕಾಯಬೇಕಾ?” ಎಂಬ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುತ್ತಿದೆ. ತಜ್ಞರ ಪ್ರಕಾರ ಅಂತರರಾಷ್ಟ್ರೀಯ ಮಾರುಕಟ್ಟೆ, ಡಾಲರ್ ಮೌಲ್ಯ ಮತ್ತು ಜಿಯೋ-ಪಾಲಿಟಿಕಲ್ ಟೆನ್ಷನ್‌ಗಳು ಬೆಲೆ ಮೇಲೆ ಪ್ರಭಾವ ಬೀರುತ್ತಿವೆ.
ಮದುವೆ ಮನೆಯವರು ತಮ್ಮ ಬಜೆಟ್‌ನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಚಿನ್ನ ಖರೀದಿಸುವುದು ಉತ್ತಮ ಎಂಬ ಸಲಹೆ ಕೂಡ ಕೇಳಿಬರುತ್ತಿದೆ.





