‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ರಕ್ಷಿತಾ ಶೆಟ್ಟಿ ಮೊದಲ ದಿನವೇ ಎಲಿಮಿನೇಟ್ ಆಗಿದ್ದು, ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು. ಈ ನಡುವೆ, ಆ್ಯಂಕರ್ ಜಾನ್ವಿಯವರ “ಫ್ಲೂಕ್‌ನಿಂದ ಫೇಮಸ್” ಎಂಬ ಟೀಕೆಗೆ ರಕ್ಷಿತಾ ಶೆಟ್ಟಿ ತಮ್ಮ ಹಳೆಯ ವಿಡಿಯೋ ಮೂಲಕ ಭಾವುಕ ಉತ್ತರ ನೀಡಿದ್ದಾರೆ. ಈ ವಿಡಿಯೋದಲ್ಲಿ, ಯೂಟ್ಯೂಬ್‌ನಲ್ಲಿ ತಮ್ಮ ಪಯಣದ ಕಷ್ಟ, ತ್ಯಾಗ ಮತ್ತು ಶ್ರಮವನ್ನು ರಕ್ಷಿತಾ ತೆರೆದಿಟ್ಟಿದ್ದಾರೆ. ಸಧ್ಯ ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ ಆರಂಭವಾದ ಮೊದಲ ದಿನವೇ ಸ್ಪಂದನಾ ಸೋಮಣ್ಣ, ಮಾಳು, ಮತ್ತು ರಕ್ಷಿತಾ ಶೆಟ್ಟಿ ಅವರಲ್ಲಿ ಒಬ್ಬರು ಹೊರಬೀಳಬೇಕೆಂದು ಬಿಗ್ ಬಾಸ್ ಘೋಷಿಸಿದರು. ಒಂಟಿ ಸ್ಪರ್ಧಿಗಳಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶವಿತ್ತು. ಆಗ ಎಲ್ಲರೂ ರಕ್ಷಿತಾ ಶೆಟ್ಟಿಯ ಹೆಸರನ್ನು ಆಯ್ಕೆ ಮಾಡಿದರು, ಇದರಿಂದ ಅವರು ಮೊದಲ ದಿನವೇ ಎಲಿಮಿನೇಟ್ ಆದರು.
ಜಾನ್ವಿಯವರು, “ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾತನಾಡಿ ಫ್ಲೂಕ್‌ನಿಂದ ಫೇಮಸ್ ಆಗೋ ಚಾನ್ಸ್ ಇರುತ್ತದೆ. ಆದರೆ, ಸ್ಪಂದನಾ ಅವರದ್ದು ಆ ರೀತಿಯಲ್ಲ. ಅವರು ಶ್ರಮ ಹಾಕಿದ್ದಾರೆ. ಜರ್ನಿ ಅಂತ ನೋಡಿದಾಗ, ರಿಯಲ್ ಟ್ಯಾಲೆಂಟ್ ಎಂದರೆ ಅದು ಸ್ಪಂದನಾ” ಎಂದು ಹೇಳಿದ್ದರು. ಈ ಹೇಳಿಕೆ ರಕ್ಷಿತಾ ಶೆಟ್ಟಿಯವರಿಗೆ ಬೇಸರ ತಂದಿತು. ಇದಕ್ಕೆ ಉತ್ತರವಾಗಿ, ರಕ್ಷಿತಾ ತಮ್ಮ ಯೂಟ್ಯೂಬ್ ಆರಂಭದ ದಿನಗಳ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ರಕ್ಷಿತಾ ತಮ್ಮ ಕಷ್ಟದ ಪಯಣವನ್ನು ವಿವರಿಸಿದ್ದಾರೆ. “ನಂಗೆ ಬೇಕಾಗಿದ್ದು ಸಿಗಲ್ಲ. ಕೆಲವೊಮ್ಮೆ ತ್ಯಾಗ ಮಾಡಬೇಕು. ಏನು ಆಗಬೇಕು ಅಂದುಕೊಂಡಿರುತ್ತೇವೆಯೋ ಅದು ಆಗಲ್ಲ. ಜೀವನದಲ್ಲಿ ಮುಂದೆ ಸಾಗಲೇಬೇಕು. ನನ್ನ ಟ್ಯಾಲೆಂಟ್ ಇಲ್ಲಿಯೇ ಮುಗಿಯಿತು. ನಾನು ಇನ್ನೂ ಟ್ರೈ ಮಾಡಬೇಕು. ಇನ್ನೂ ಹೆಚ್ಚು ಜನರ ತಲುಪಲು ಪ್ರಯತ್ನ ಮಾಡಬೇಕು” ಎಂದು ಭಾವುಕರಾಗಿ ಮಾತನಾಡಿದ್ದಾರೆ.