ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗಿದ್ದಾರೆ. ರಾಜ್ಯಾದ್ಯಂತ ಅವರಿಗೆ ಭಾರಿ ಜನಪ್ರಿಯತೆ ಸಿಗುತ್ತಿದ್ದು, ಫ್ಯಾನ್ಸ್ ಮತ್ತು ನೆಟ್ಟಿಗರಲ್ಲಿ ಒಂದು ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ. ಗಿಲ್ಲಿ ನಟ ನಿಜಕ್ಕೂ ಬಡವನಾ? ಅಥವಾ ಶ್ರೀಮಂತನಾ? ಅವರ ಹಿನ್ನೆಲೆಯ ಬಗ್ಗೆ ಹಲವು ಊಹಾಪೋಹಗಳು, ಪಿಆರ್ ಪ್ರಚಾರದ ಆರೋಪಗಳು ಕೇಳಿಬರುತ್ತಿವೆ. ಆದರೆ ಇದೀಗ ಗಿಲ್ಲಿ ನಟರ ಸಂಬಂಧಿಕರೇ ಅಸಲಿ ಸತ್ಯವನ್ನು ತೆರೆದಿಟ್ಟಿದ್ದಾರೆ.
ಗಿಲ್ಲಿ ನಟರ ಹಿನ್ನೆಲೆ ಏನು?
ಗಿಲ್ಲಿ ನಟರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರ ತಂದೆ-ತಾಯಿ ಇಂದಿಗೂ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಹೊಟ್ಟೆಗೆ ಬಟ್ಟೆಗೆ, ಶಿಕ್ಷಣಕ್ಕೆ ಕೊರತೆ ಇಲ್ಲದಂತಹ ಸಾಮಾನ್ಯ ಗ್ರಾಮೀಣ ಕುಟುಂಬ. ನಿನ್ನೆಯೇ ಭತ್ತ ಕೊಯ್ಲು ಮಾಡಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ಆದರೆ ಮಳೆಯಿಂದ ಎಲ್ಲವೂ ನೆನೆದು ಹೋಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ ಎಂಬುದು ಅವರ ಪ್ರಸ್ತುತ ಸ್ಥಿತಿ.
ಗಿಲ್ಲಿ ನಟ ಬಡವನಂತೆ ನಟಿಸಿ ಪಿಆರ್ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಆದರೆ ಸಂಬಂಧಿಕರು ಸ್ಪಷ್ಟವಾಗಿ ಹೇಳಿದ್ದಾರೆ. “ಗಿಲ್ಲಿಯ ತಂದೆ-ತಾಯಿಗೆ ಪಿಆರ್ ಎಂದರೆ ಏನು ಎಂಬುದೇ ಗೊತ್ತಿಲ್ಲ. ಅವರು ಹಳ್ಳಿಗರೇ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಪಿಆರ್ ಎಂಬುದು ಅವರಿಗೆ ತಿಳಿಯದು. ಗಿಲ್ಲಿ ಏನೇ ಸಂಪಾದನೆ ಮಾಡಿದರೂ ಅವರು ತಮ್ಮ ಕಾಯಕವನ್ನು ಮುಂದುವರಿಸುತ್ತಾರೆ.”
ಗಿಲ್ಲಿ ನಟರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಸರಳತೆ, ಹಾಸ್ಯ, ಗ್ರಾಮೀಣ ಶೈಲಿಯಿಂದ ಎಲ್ಲರ ಮನ ಸೆಳೆದಿದ್ದಾರೆ. ಅವರ ಹಿನ್ನೆಲೆಯ ಬಗ್ಗೆ ಈ ಸ್ಪಷ್ಟೀಕರಣದಿಂದ ಫ್ಯಾನ್ಸ್‌ನಲ್ಲಿ ಇನ್ನಷ್ಟು ಗೌರವ ಮೂಡಿದೆ. ಗಿಲ್ಲಿ ನಟರು ನಿಜಕ್ಕೂ ಮಧ್ಯಮ ವರ್ಗದಿಂದ ಬಂದು ತಮ್ಮ ಪ್ರತಿಭೆಯಿಂದ ಮುಂದೆ ಬಂದವರು ಎಂಬುದು ಈಗ ಸ್ಪಷ್ಟವಾಗಿದೆ.





