ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೀಕ್ಷಕರ ಅಚ್ಚುಮೆಚ್ಚಿನ ಜೋಡಿ ಎನ್ನಿಸಿಕೊಂಡಿದ್ದ ಕಾವ್ಯ ಶೈವ ಮತ್ತು ಗಿಲ್ಲಿ ನಟ ನಡುವೆ ಈಗ ಬಿರುಕು ಮೂಡಿದಂತೆ ಕಾಣುತ್ತಿದೆ. ಆಟದ ಮನೆಯೊಳಗೆ “ಬೆಸ್ಟ್ ಫ್ರೆಂಡ್ಸ್” ಎಂದೇ ಗುರುತಿಸಿಕೊಂಡಿದ್ದ ಈ ಜೋಡಿಯೇ ಈ ವಾರಾಂತ್ಯದಲ್ಲಿ ಒಬ್ಬರಿಗೊಬ್ಬರು ಗಾಯ ಮಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.
ಟಾಸ್ಕ್ ಸಂದರ್ಭದಲ್ಲಿ ಗಿಲ್ಲಿ, “ಕಾವ್ಯಾ ಲೀಡರ್ ಅಲ್ಲ, ಫಾಲೋವರ್” ಎಂದು ಹೇಳಿಬಿಟ್ಟಿದ್ದರು. ಇದು ಕಾವ್ಯಾಗೆ ತೀವ್ರ ನೋವು ತಂದಿತು. ಸಂಚಿಕೆ ಮುಗಿದ ಬಳಿಕವೂ ಗಿಲ್ಲಿಯ ಬಳಿ ಈ ವಿಷಯ ಚರ್ಚಿಸಿದ್ದರು. ಆದರೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಎಲ್ಲರ ಮುಂದೆ ಒಂದು ಬಾಂಬ್ ಸಿಡಿಸಿದರು. “ಗಿಲ್ಲಿ, ಕಾವ್ಯಾ ಅವರನ್ನು ಸಲುಗೆಯಾಗಿ ತೆಗೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಎಸ್/ನೋ ಬೋರ್ಡ್ ತೋರಿಸುವ ಲಿಂಕ್‌ನಲ್ಲಿ ಕಾವ್ಯಾ ಸೇರಿದಂತೆ ಹಲವು ಸ್ಪರ್ಧಿಗಳು “ಹೌದು” ಎಂಬ ಬೋರ್ಡ್ ಎತ್ತಿಹಿಡಿದರು. ಇದು ಗಿಲ್ಲಿಗೆ ಆಘಾತವಾಯಿತು. ಆದರೆ ಕಾವ್ಯಾ ನಿಂತಲ್ಲೇ ನಿಲ್ಲಲಿಲ್ಲ. ತಕ್ಷಣವೇ ತಮ್ಮ ನೋವನ್ನು ಒಪ್ಪಿಕೊಂಡು ಮಾತನಾಡಿದರು.
“ಈ ಹಿಂದೆಯೂ ಟಾಸ್ಕ್ ಸಮಯದಲ್ಲಿ ಇದೇ ಆಗಿದೆ. ನಾನು ಗಿಲ್ಲಿಯ ಬಳಿ ಹೋಗಿ ‘ಯಾರೆಲ್ಲಾ ಆಟ ಆಡ್ತಿದ್ದಾರೆ?’ ಅಂತ ಕೇಳಿದಾಗ ಅವರು ಸರಿಯಾಗಿ ಉತ್ತರವೇ ಕೊಡಲಿಲ್ಲ. ಹಲವು ಬಾರಿ ನನ್ನನ್ನು ಗ್ರಾಂಟೆಡ್ ಆಗಿ ತೆಗೆದುಕೊಂಡಿದ್ದಾರೆ. ನಾನು ಸಾಕಷ್ಟು ಬಾರಿ ಬುದ್ಧಿ ಹೇಳಿದ್ದೇನೆ, ಆದರೆ ಅದನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ” ಎಂದು ಕಾವ್ಯಾ ಹೇಳಿದರು.
ಗಿಲ್ಲಿ ತಕ್ಷಣ ಪ್ರತಿಕ್ರಿಯಿಸಿದರು. “ನಾನು ಕಾವ್ಯಾ ಮೇಲೆ ಪೂರ್ತಿ ನಂಬಿಕೆ ಇಟ್ಟಿದ್ದೇನೆ. ಆದರೆ ಅವಳಿಗೆ ಸಲುಗೆ ಅನ್ನಿಸಿದೆ ಅಂತಾನೆ ಈಗ ಅರ್ಥವಾಗ್ತಿದೆ. ಟಾಸ್ಕ್ ಆಗ್ತಿದ್ದಾಗ ಅವಳು ‘ಯಾರನ್ನ ಆಟ ಆಡಿಸ್ತಿದ್ದೀಯಾ?’ ಅಂತ ಕೇಳಿದಾಗ ನಾನು ಯೋಚನೆಯಲ್ಲಿದ್ದೆ, ಆದ್ದರಿಂದ ಸರಿಯಾಗಿ ಉತ್ತರ ಕೊಡಲಿಲ್ಲ. ಅದನ್ನು ತಪ್ಪಾಗಿ ಅರ್ಥೈಸಿಕೊಂಡಳು. ಆದರೆ ಅವಳು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಗಂಭೀರವಾಗಿಯೇ ತೆಗೆದುಕೊಳ್ಳುತ್ತೇನೆ” ಎಂದು ಗಿಲ್ಲಿ ಸ್ಪಷ್ಟಪಡಿಸಿದರು.
ನಂತರ ಸುದೀಪ್ ಅವರು, “ಯಾರು ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ ಮಾಡ್ತಿದ್ದಾರೆ?” ಎಂಬ ಪ್ರಶ್ನೆಗೆ ಕಾವ್ಯಾ ಗಿಲ್ಲಿಯನ್ನೇ ತೋರಿಸಿ ಆರೋಪ ಮಾಡಿದರು. “ಗಿಲ್ಲಿ ಯಾರ ಹೆಸರು ತೆಗೆದು ಕಾಮಿಡಿ ಮಾಡ್ತಾರೋ ಅದು ಅವರಿಗೆ ವೈಯಕ್ತಿಕವಾಗಿ ನೋವು ತರ್ತದೆ. ನಾನು ಅದನ್ನು ಗಮನಿಸಿದ್ದೇನೆ” ಎಂದು ಕಾವ್ಯಾ ಹೇಳಿದರು.
ಗಿಲ್ಲಿ ತಮ್ಮ ಶೈಲಿಯಲ್ಲೇ ಉತ್ತರಿಸಿದ್ದು, “ನಾನು ನಿಮ್ಮ ಬಗ್ಗೆ ಇರುವ ಸತ್ಯವನ್ನೇ ಕಾಮಿಡಿ ಮೂಲಕ ಹೇಳ್ತೀನಿ. ಅದು ಯಾರನ್ನೂ ಕೆಳಗಿಳಿಸೋದಲ್ಲ. ಯಾರೋ ಒಂದು ಮೂಲೆಯಲ್ಲಿ ಕುಂತು ನೀರು ಕುಡ್ಕೊಂಡು ಮಾತಾಡ್ತೀರಾ? ಹೊರಗೆ ಹೋಗಿ ನೋಡಿದ್ರೆ ಸತ್ಯ ಗೊತ್ತಾಗುತ್ತೆ!” ಎಂದು ಹೇಳಿದರು.
