Bigg Boss Kannada 12 ಮನೆ ಈ ವಾರ ನಗೆ, ಡ್ರಾಮಾ, ಎಮೋಶನ್‌ಗಳಿಂದ ತುಂಬಿಕೊಂಡಿತ್ತು. ಶನಿವಾರ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಮಾಸ್ ಕ್ಲಾಸ್ ತೆಗೆದುಕೊಂಡು, ಆಟದ ನಿಯಮಗಳ ಬಗ್ಗೆ ಕಟ್ಟುನಿಟ್ಟಾಗಿ ಮಾತನಾಡಿದರೆ, ಭಾನುವಾರ ಮಾತ್ರ ನಗೆಗಡಲಲ್ಲಿ ಮುಳುಗಿಸಿದರು. ಈ ಬಾರಿ ಹೊಸ ಪ್ರೋಮೋ ಒಂದು ರಿಲೀಸ್ ಆಗಿದ್ದು, ಅದರಲ್ಲಿ ಕಾಂಟೆಸ್ಟೆಂಟ್ ಗಿಲ್ಲಿ ಅವರು ಸ್ವತಃ ಕಿಚ್ಚ ಸುದೀಪ್ ಅವರನ್ನೇ ಇಮಿಟೇಟ್ ಮಾಡಿ ಎಲ್ಲರನ್ನೂ ನಗಿಸಿದ್ದಾರೆ. ಇದನ್ನು ನೋಡಿದ ಕಿಚ್ಚ ಅವರು ಬಿದ್ದು ಬಿದ್ದು ನಕ್ಕಿದ್ದಾರೆ. ಉಳಿದ ಸ್ಪರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ. ಗಿಲ್ಲಿಯ ಈ ಮಸ್ತ್ ಕಾಮಿಡಿ ಪ್ರಯತ್ನ ಬಿಗ್‌ಬಾಸ್ ಫ್ಯಾನ್ಸ್‌ಗೆ ಹೊಸ ಎಂಟರ್‌ಟೈನ್‌ಮೆಂಟ್ ಆಗಿ ಮಾರ್ಪಟ್ಟಿದೆ.
ಪ್ರೋಮೋದಲ್ಲಿ ಮೊದಲು ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಮುಂದೆ ನಿಂತು, “ಇಂದು ನನ್ನನ್ನು ಗಿಲ್ಲಿ ಅವರು ಇಮಿಟೇಟ್ ಮಾಡಬೇಕು” ಎಂದು ಹೇಳುತ್ತಾರೆ. ತಕ್ಷಣ ಗಿಲ್ಲಿ ಅವರು ಸ್ಟೇಜ್‌ಗೆ ಬಂದು, ಸುದೀಪ್ ಅವರ ಸ್ಟೈಲ್‌ನಲ್ಲಿ ಗೆಟಪ್ ಚೇಂಜ್ ಮಾಡಿಕೊಳ್ಳುತ್ತಾರೆ. ಬ್ರೆಸ್‌ಲೆಟ್ ಹಾಕಿಕೊಂಡು, ಸುದೀಪ್ ಅವರ ಡೈಲಾಗ್ ಮಾತನಾಡಲು ಶುರು ಮಾಡುತ್ತಾರೆ. “ನೋಡಿ ರಿಷಾ ಅವರೇ, ಈ ಮನೆಯಲ್ಲಿ ಕೂಗಾಡಿದ್ರೆ ಮಾತ್ರ ಪ್ರಾಬ್ಲಂ ಆಗಲ್ಲ, ವಾಂತಿ ಮಾಡಿದ್ರೂ ಆಗತ್ತೆ” ಎಂದು ಹೇಳಿದ್ದು, ಇದು ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತ್ತು.. ಕಿಚ್ಚ ಅವರು ತಮ್ಮ ಸೀಟ್‌ನಲ್ಲಿ ಕುಳಿತು ಬಿದ್ದು ಬಿದ್ದು ನಗುತ್ತಾರೆ. ಗಿಲ್ಲಿ, ಸುದೀಪ್ ಅವರ ಮ್ಯಾನರಿಸಂ, ಡೈಲಾಗ್ ಹೇಳುವ ಟೋನ್ ಮತ್ತು ಬಾಡಿ ಲ್ಯಾಂಗ್ವೇಜ್ ಅನ್ನು ಪರ್ಫೆಕ್ಟ್ ಆಗಿ ಕಾಪಿ ಮಾಡಿದ್ದಾರೆ.
ಗಿಲ್ಲಿ ಅವರು ಕಾವ್ಯ ಅವರಿಗೆ ಕವನ ಮೂಲಕ ಡೈಲಾಗ್ ಕೊಡುತ್ತಾರೆ. “ಬಿಗ್‌ಬಾಸ್ ಮನೆಯಲ್ಲಿ ನಾನು ಒಂಥರ ಅಪ್ಸರಾ. ಅವಳ ಕಣ್ಣುಗಳ ನೋಡೋದಕ್ಕೆ ಸುಂದರ” ಎಂದು ಹೇಳುತ್ತಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ತಮಾಷೆಯಿಂದ “ನಾನು ಹೇಳಿದ ಹಾಗೇ ಇಲ್ವಲ್ಲ” ಎಂದು ಹೇಳುತ್ತಾರೆ. ಆದರೆ ಗಿಲ್ಲಿ ಮುಂದುವರಿಸಿ, “ಕೊನೆಯಲ್ಲಿ ಹೇಳಬೇಕು ಅನ್ನಿಸಿತು ಹೇಳ್ದೆ” ಎಂದು ಸುದೀಪ್ ಅವರ ಸಿಗ್ನೇಚರ್ ಸ್ಟೈಲ್‌ನಲ್ಲಿ ಮುಗಿಸುತ್ತಾರೆ. ಇಡೀ ಸೆಟ್‌ನಲ್ಲಿ ನಗುವಿನ ಅಲೆ ಎಬ್ಬಿಸಿದೆ. ಉಳಿದ ಸ್ಪರ್ಧಿಗಳು ಚಪ್ಪಾಳೆ ತಟ್ಟುತ್ತಾರೆ. ಗಿಲ್ಲಿಯ ಈ ಕಾಮಿಡಿ ಟೈಮಿಂಗ್ ಮತ್ತು ಇಮಿಟೇಷನ್ ಸ್ಕಿಲ್ ಎಲ್ಲರನ್ನೂ ಸೆಳೆದಿದೆ. ಪ್ರೋಮೋ ಕೇವಲ ಕೆಲವು ಸೆಕೆಂಡ್‌ಗಳದ್ದಾದರೂ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆದರೆ ಈ ತಮಾಷೆಯ ಹಿಂದೆ ಕೆಲವು ಗಂಭೀರ ಸಂಗತಿಗಳೂ ಇವೆ. ನಿನ್ನೆಯ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ಅವರಿಗೆ ಓವರ್‌ಕಾನ್ಫಿಡೆನ್ಸ್ ಬೇಡ ಎಂದು ಎಚ್ಚರಿಕೆ ನೀಡಿದ್ದರು. “ಅಂತಿಮವಾಗಿ ಇಬ್ಬರೂ ಚೆನ್ನಾಗಿ ಆಟ ಆಡುತ್ತಿದ್ದೀರಿ ಆದರೆ ಆ ಆಟದಲ್ಲಿ ಸ್ಪಷ್ಟತೆ ಇರಲಿ, ಮಾತು ಹಾಗೂ ವರ್ತನೆಗಳ ಮೇಲೆ ಲಗಾಮು ಇರಲಿ” ಎಂದು ಹೇಳಿದ್ದರು.
ರಕ್ಷಿತಾ ಅವರ ಬಗ್ಗೆ ಮನೆಯವರು ತಪ್ಪು ಮಾಡಿದಾಗ ನಾನು ನಿಮ್ಮ ಪರ ನಿಂತಿದ್ದೆ. ಆದರೆ ಈಗ ನೀವು ತಪ್ಪು ಮಾಡಿದಾಗ ಹೇಳುವುದು ನನ್ನ ಕರ್ತವ್ಯ. ಇನ್ನೊಮ್ಮೆ ಇಂಥಹಾ ತಪ್ಪುಗಳನ್ನು ಮಾಡಬೇಡಿ” ಎಂದು ಕಿಚ್ಚ ಅವರು ಸ್ಪಷ್ಟವಾಗಿ ವಾರ್ನಿಂಗ್ ಕೊಟ್ಟಿದ್ದರು.
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಒಟ್ಟು 8 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಎಲಿಮಿನೇಷನ್ ರೇಸ್‌ನಲ್ಲಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ರಕ್ಷಿತಾ ಮತ್ತು ಅಶ್ವಿನಿ ಸೇಫ್ ಆಗಿದ್ದಾರೆ. ಉಳಿದವರಲ್ಲಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಫ್ಯಾನ್ಸ್‌ಗೆ ಹೆಚ್ಚಾಗಿದೆ.





